More

    ಟ್ರಾಫಿಕ್ ವಾರ್ಡ್‌ನ್ ವ್ಯವಸ್ಥೆ ಅನುಷ್ಠಾನ ಅಗತ್ಯ

    ಚಾಮರಾಜನಗರ: ರಸ್ತೆ ನಿರ್ವಹಣೆಗೆ ಸಹಕರಿಸಲು ಜಿಲ್ಲೆಯಲ್ಲಿ ಟ್ರಾಫಿಕ್ ವಾರ್ಡ್‌ನ್‌ಗಳ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರ ನಿರ್ವಹಣೆಗೆ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಮರ್ಪಕವಾಗಿ ನಿರ್ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ವಯಂ ಸೇವಕರು, ಎನ್‌ಸಿಸಿ, ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಟ್ರಾಫಿಕ್ ವಾರ್ಡನ್‌ಗಳನ್ನಾಗಿ ನೆರವು ನೀಡಲು ಸಜ್ಜುಗೊಳಿಸಬೇಕು. ಇದಕ್ಕಾಗಿ ಅಸಕ್ತರನ್ನು ಗುರುತಿಸುವಂತೆ ನಿರ್ದೇಶನ ನೀಡಿದರು.

    ನಗರ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ವತ್ರೆ, ಶಾಲೆಗಳ ಮುಂದೆ ವಾಹನ ಸವಾರರಿಗೆ ಶಬ್ಧ ಮಾಡದಿರಲು ಸೂಚನಾ ಲಕಗಳನ್ನು ಅಳವಡಿಸಬೇಕು. ಪ್ರಮುಖ ರಸ್ತೆಗಳು, ವೃತ್ತಗಳು, ಜಂಕ್ಷನ್‌ಗಳಲ್ಲಿ ಹಾದುಹೋಗಲು ಸಂಚಾರ ನಿಯಮಗಳನುಸಾರ ಬಣ್ಣಗಳನ್ನು ಬಳಿದು ಮಾರ್ಗದರ್ಶನ ಮಾಡಬೇಕಿದೆ. ಇದರಿಂದ ಅನಗತ್ಯವಾಗಿ ವಾಹನ ಸವಾರರು, ಪಾದಚಾರಿಗಳು ಸುಗಮವಾಗಿ ಸಾಗಲು ಅನುಕೂಲವಾಗಲಿದೆ ಎಂದು ತಿಳಿಸಿದರು.

    ರಸ್ತೆಯ ವಿಭಜಕಗಳಿಗೆ ಎದ್ದು ಕಾಣುವ ಹಾಗೆ ಬಣ್ಣ ಹಾಕಬೇಕು. ರಿಪ್ಲೆಕ್ಟರ್‌ಗಳನ್ನು ಅಳವಡಿಸಬೇಕು. ಸ್ಲಾಬ್ ಆಗಿರುವ ಮುಂದೆ ಮಾರ್ಗಸೂಚಿ ಗುರುತಿಸಬೇಕು. ವೇಗ ನಿಯಂತ್ರಿಸಲು ಸೂಚನೆಗಳನ್ನು ನೀಡಬೇಕು. ಸಂಚಾರಿ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳು ವ್ಯಾಪಕ ತಪಾಸಣೆ, ಪರಿಶೀಲನೆ ನಡೆಸಬೇಕು. ವೇಗ ನಿಯಮ ಉಲ್ಲಂಸುವವರ ವಿರುದ್ಧ ದಂಡ ವಿಧಿಸಿ, ಸಂಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನ ಮಾಡುವುದರಿಂದ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ. ಅದ್ದಣ್ಣನವರ್, ಡಿಎಚ್‌ಒ ಡಾ.ಎಂ.ಸಿ.ರವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್, ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ನಾಗಶೆಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶ ಕೃಷ್ಣಮೂರ್ತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts