Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಸಿಎಂ ಆದ ಬಳಿಕ ಮೊದಲ ಬಾರಿಗೆ ರಾಮನಗರಕ್ಕೆ ಭೇಟಿ ನೀಡುತ್ತಿರುವ ಎಚ್ಡಿಕೆಗೆ ಡಿಕೆಶಿ ಸಾಥ್​

Monday, 16.07.2018, 7:41 AM       No Comments

ಬೆಂಗಳೂರು: ವಿಧಾನಸಭೆ ಚುನಾವಣೆ ನಂತರ, ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಎಚ್​.ಡಿ ಕುಮಾರಸ್ವಾಮಿ ಅವರು ರಾಮನಗರಕ್ಕೆ ಭೇಟಿ ನೀಡುತ್ತಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರ ಎರಡರಲ್ಲೂ ಜಯಗಳಿಸಿರುವ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು, ಸದ್ಯ ಚನ್ನಪಟ್ಟಣ ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಮನಗರ ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿರುವ ಎಚ್ಡಿಕೆ ಇಂದು ಜಿಲ್ಲೆಯ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸವನ್ನೂ ಮಾಡಲಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಿದ್ದಾರೆ. ನಂತರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಜಿಲ್ಲಾ ಜನತಾ ದರ್ಶನಕ್ಕೆ ರಾಮನಗರದಿಂದಲೇ ಚಾಲನೆ

ಪ್ರತಿ ಜಿಲ್ಲೆಗಳಲ್ಲೂ ಜನತಾದರ್ಶನ ನಡೆಸುವುದಾಗಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ಹಲವು ಸಭೆಗಳಲ್ಲಿ ಘೋಷಿಸಿದ್ದರು. ಅದರಂತೆ ತಾವು ಹಿಂದಿನಿಂದಲೂ ಪ್ರತಿನಿಧಿಸಿಕೊಂಡು ಬಂದ ರಾಮನಗರ ಮತ್ತು ಸದ್ಯ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ಕ್ಷೇತ್ರಗಳಿರುವ ರಾಮನಗರ ಜಿಲ್ಲೆಯ ಮೂಲಕವೇ ಜಿಲ್ಲಾ ಜನತಾದರ್ಶನವನ್ನು ಆರಂಭಿಸುತ್ತಿದ್ದಾರೆ.

ಎಚ್ಡಿಕೆಗೆ ಡಿಕೆಶಿ ಸಾಥ್​

ರಾಜಕಾರಣದಲ್ಲಿ ಬದ್ಧವೈರಿಗಳು ಎಂದೇ ಕರೆಸಿಕೊಳ್ಳುತ್ತಿದ್ದ ಎಚ್​.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್​ ಬದಲಾದ ಕಾಲಘಟ್ಟದಲ್ಲಿ ಆತ್ಮೀಯರಾಗಿದ್ದಾರೆ. ಸರ್ಕಾರ ರಚನೆಯಾದ ವೇಳೆ, ಸರ್ಕಾರವನ್ನು ವಿಪಕ್ಷಗಳು, ಸ್ವಪಕ್ಷದವರು ಟೀಕಿಸಿದ ವೇಳೆ ಡಿಕೆಶಿ ಸಿಎಂ ಬೆಂಬಲಕ್ಕೆ ನಿಂತಿದ್ದಾರೆ. ಹೀಗಿರುವ ಡಿಕೆಶಿ, ಇಂದು ರಾಮನಗರಕ್ಕೆ ಆಗಮಿಸುತ್ತಿರುವ ಸಿಎಂ ಎಚ್ಡಿಕೆಗೆ ಸಾಥ್​ ನೀಡುತ್ತಿದ್ದಾರೆ. ಇಬ್ಬರೂ ಮುಖಂಡರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ಇಂದು ನಡೆಸಲಿದ್ದಾರೆ.

 

Leave a Reply

Your email address will not be published. Required fields are marked *

Back To Top