Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಅಂದಗಾತಿ ಮಹಿಳೆಗೆ ಅದೇ ಬಂಡವಾಳ! 3-4 ಮದುವೆಯಾಗಿ ವಂಚನೆ

Tuesday, 19.09.2017, 12:44 PM       No Comments

ತಿಪಟೂರು: ಮಹಿಳೆಯೊಬ್ಬಳು ತನ್ನ ಅಂದವನ್ನೇ ಬಂಡವಾಳವಾಗಿಟ್ಟುಕೊಂಡು ಮೂರ್ನಾಲ್ಕು ಮದುವೆಯಾಗಿ ವಂಚಿಸಿರುವ ಘಟನೆ ತುಮಕೂರಿನ ತಿಪಟೂರಿನಲ್ಲಿ ನಡೆದಿದೆ. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಈಕೆ ಇನ್ನೊಬ್ಬರನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ… ಪುರುಷ ಪುಂಗವರೇ ಹುಷಾರು!

ತಿಪಟೂರಿನ ಈಚನೂರು ಮೂಲದ ಪುಷ್ಪಾವತಿ ಎಂಬ ಈ ಮಹಿಳೆ ಹಲವು ದಿನಗಳಿಂದ ಈ ರೀತಿ ಪುರುಷರ ವಿಶಾಲ ಕಿವಿಯ ಮೇಲೆ ಪುಷ್ಪಗಳನ್ನು ಪೋಣಿಸುತ್ತಿದ್ದಳು. ಮೋಸಕ್ಕೆ ಬಲಿಯಾಗಿರುವ ತುಮಕೂರಿನ ಎಸ್‌.ಎಸ್‌. ಪುರಂ ನಿವಾಸಿ ಜಗದೀಶ್‌ ಎಂಬುವವರು ಪುಷ್ಪ ವಿರುದ್ಧ ಈ ಸಂಬಂಧ ದೂರು ನೀಡಿದ್ದಾರೆ.

ಅಬಾಧಿತ ಪುಷ್ಪಾರ್ಚನೆ!
ಮದುವೆಯಾಗಿ ಪತಿರಾಯನಿಂದ ಹಣ ಕಸಿದು, ಕಿರುಕುಳ ನೀಡಿ ಬಳಿಕ ವಿಚ್ಛೇದನ ಪಡೆದು ಸುಲಿಗೆ ಮಾಡಲು ಮತ್ತೊಬ್ಬನನ್ನು ವರಿಸುವುದನ್ನೇ ಇವಳು ಕಾಯಕ ಮಾಡಿಕೊಂಡಿದ್ದಳು.

ಮೊದಲು ತಿಪಟೂರು ಮೂಲದ ಲಿಂಗದೇವರು ಎಂಬುವವರನ್ನ ಮದುವೆಯಾಗಿದ್ದ ಪುಷ್ಪಾವತಿ ನಂತರ ಅವರ ವಿರುದ್ಧವೂ ದೂರು ನೀಡಿ, 2016ರಲ್ಲಿ ಜಗದೀಶ್‌ನನ್ನು ವರಿಸಿದ್ದಳು. ಅಷ್ಟೇ ಅಲ್ಲದೇ ಹಾಸ್ಟಿಟಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ವೈದ್ಯಕೀಯ ವಿದ್ಯಾರ್ಥಿಗಳ ಜತೆಗೂ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದೆ.

ಪಕ್ಕದ ಮನೆಯ ಹುಡುಗನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಪುಷ್ಪ ರೆಡ್‌ ಹ್ಯಾಂಡ್‌ ಆಗಿಯೇ ಸಿಕ್ಕಿಬಿದ್ದಿದ್ದಳು ಅಂತಾ ಎರಡನೇ ಪತಿ ಜಗದೀಶ್‌ ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top