Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ವಿದ್ಯಾರಣ್ಯಪುರದಲ್ಲಿ ಮತ್ತೆ ಸರಗಳ್ಳತನ, ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

Tuesday, 09.01.2018, 1:15 PM       No Comments

ಬೆಂಗಳೂರು: ಇಲ್ಲಿನ ವಿದ್ಯಾರಣ್ಯಪುರದಲ್ಲಿ ಸರಕಳ್ಳನೊಬ್ಬ ಮತ್ತೆ ತನ್ನ ಕೈ ಚಳಕ ತೋರಿಸಿದ್ದಾನೆ. ಮಹಿಳೆಯೊಬ್ಬರ 25 ಗ್ರಾಂನ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾಬೆ.

ಪಲ್ಸರ್​ ಬೈಕ್​ ಮೇಲೆ ಬಂದ ಖದೀಮ ಪ್ರೇಮಾ ಎಂಬುವರ ಚಿನ್ನದ ಸರವನ್ನು ಕದ್ದಿದ್ದಾನೆ. ಒಂದೇ ರಸ್ತೆಯಲ್ಲಿ ಎರಡರಿಂದ ಮೂರು ಸುತ್ತು ಓಡಾಡಿದ ಕಳ್ಳ ಸರಿಯಾದ ಸಮಯ ನೋಡಿ ಈ ಕೃತ್ಯವನ್ನು ಎಸಗಿದ್ದಾನೆ.

ಕಳ್ಳ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿದ್ಯಾರಣ್ಯಪುರ ಪೊಲೀಸರು ಅಪರಾಧಿಗಾಗಿ ಶೋಧ ನಡೆಸಿದ್ದಾರೆ. ಜ.5ರಂದು ಇದೇ ಪ್ರದೇಶದಲ್ಲಿ ಜಯಲಕ್ಷ್ಮಿ ಎಂಬ ಮಹಿಳೆಯ ಚಿನ್ನದ ಸರ ಕಳುವಾಗಿತ್ತು. ಈ ವೇಳೆ ಅವರ ಕುತ್ತಿಗೆ ಮತ್ತು ಹಣೆಗೆ ಗಾಯವಾಗಿತ್ತು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top