Saturday, 24th February 2018  

Vijayavani

ಮತ್ತೊಂದು ಸುತ್ತಿನ ರಣಕಹಳೆಗೆ ಕೈ ಸಿದ್ಧತೆ - ಇಂದಿನಿಂದ ಮೂರುದಿನ ರಾಹುಲ್ ರಾಜ್ಯ ಪ್ರವಾಸ - ಅಧ್ಯಕ್ಷರ ಆಗಮನಕ್ಕೆ ಭರ್ಜರಿ ತಯಾರಿ        ಮೈಸೂರಲ್ಲಿ ರಂಗೇರಿದ ಎಲೆಕ್ಷನ್ ಅಖಾಡ - ಸುನಿಲ್ ಬೋಸ್ ಜತೆಗಿರುವ ಜೆಡಿಎಸ್‌ ಅಭ್ಯರ್ಥಿ ಫೋಟೋ ವೈರಲ್ - ಆರೋಪ ತಳ್ಳಿ ಹಾಕಿದ ಅಶ್ವಿನ್ ಕುಮಾರ್‌        ಉದ್ಯೋಗ ಕೊಡಿಸುವುದಾಗಿ ನೇಪಾಳದಿಂದ ಕರೆಸಿದ - ಮದುವೆಯಾಗ್ತೀನಿ ಅಂತಾ ಅತ್ಯಾಚಾರವೆಸಗಿದ - ಕಾಮ ಪಿಶಾಚಿ ಹೋಟೆಲ್‌ ಕ್ಯಾಶಿಯರ್‌ ಎಸ್ಕೇಪ್‌        ಸುಪ್ರೀಂಕೋರ್ಟ್​​ ಆದೇಶಗಾಳಿಗೆ ತೂರಿ ಬಾರ್ ಓಪನ್ ​- ಎಂಜಲು ಕಾಸಿಗಾಗಿ ನಿಯಮ ಉಲ್ಲಂಘಿಸಿದ್ರಾ ಅಧಿಕಾರಿಗಳು -ದಿಗ್ವಿಜಯ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಅಸಲಿ ಮುಖ ಬಯಲು        ಬೋಲ್‌ವೆರ್‌ ಕೊರೆಸಿದ್ದು ಒಂದ್ಕಡೆ - ನೀರು ಚಿಮ್ಮಿದ್ದು ಇನ್ನೊಂದ್ಕಡೆ - ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಕಾಶಕ್ಕೆ ಉಕ್ಕಿದ ಗಂಗೆ       
Breaking News

ಎಟಿಎಂಗೆ ಕನ್ನ ಹಾಕಿದ ಕಳ್ಳರು: 5 ಲಕ್ಷ ರೂ. ಕಳ್ಳತನ

Sunday, 20.08.2017, 8:35 AM       No Comments

ದಾವಣಗೆರೆ: ದಾವಣಗೆರೆಯಲ್ಲಿ ಶನಿವಾರ ತಡರಾತ್ರಿ ಕಳ್ಳರು ಎಟಿಎಂಗೆ ಕನ್ನ ಹಾಕಿದ್ದು, ಸುಮಾರು 5 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ನಗರದ ಜಯದೇವ ವೃತ್ತದ ಬಳಿಯ ಆಕ್ಸಿಸ್​ ಬ್ಯಾಂಕ್​ ಎಟಿಎಂಗೆ ನುಗ್ಗಿದ ಕಳ್ಳರು ಗ್ಯಾಸ್​ ಕಟರ್​ ಬಳಸಿ ಎಟಿಎಂ ಯಂತ್ರ ಕತ್ತರಿಸಿ ಹಣ ಕಳ್ಳತನ ಮಾಡಿದ್ದಾರೆ. ಕಳ್ಳರು ಸಿಸಿಕ್ಯಾಮರಾಗಳನ್ನು ಒಡೆದು ಹಾಕಿದ್ದು, ಸೆಕ್ಯುರಿಟಿ ಇಲ್ಲದ ವೇಳೆ ಕಳ್ಳರು ಹಣ ದೋಚಿದ್ದಾರೆ.

ಸ್ಥಳಕ್ಕೆ ಎಸ್ಪಿ ಭೀಮಾಶಂಕರ ಗುಳೇದ್​ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top