Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಟೀಂ ಇಂಡಿಯಾಗೆ ಬಿಗ್​ ಗಿಫ್ಟ್​: ಬ್ಯುಸಿನೆಸ್ ಕ್ಲಾಸ್ ಪ್ರಯಾಣಕ್ಕೆ ಬಿಸಿಸಿಐ ಸಮ್ಮತಿ

Monday, 13.11.2017, 5:37 PM       No Comments

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಗ್​ ಗಿಫ್ಟ್ ನೀಡಿದ್ದು, ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದ ಎಲ್ಲಾ ಆಟಗಾರರು ಬ್ಯುಸಿನೆಸ್​ ಕ್ಲಾಸ್​ನಲ್ಲಿ ಪ್ರಯಾಣಿಸಲು ಸಮ್ಮತಿಸಿದೆ.

ಸುಪ್ರೀಂ ಕೋರ್ಟ್​ನಿಂದ ನೇಮಕವಾಗಿರುವ ಆಡಳಿತಾಧಿಕಾರಿಗಳ ಸಮಿತಿಯ ಸಭೆಯಲ್ಲಿ ಆಟಗಾರರ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ಭಾರತೀಯ ಕ್ರಿಕೆಟ್​ ತಂಡದ ಎಲ್ಲಾ ಆಟಗಾರರು ದೇಶೀಯ ವಿಮಾನಗಳಲ್ಲಿ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬ್ಯುಸಿನೆಸ್​ ಕ್ಲಾಸ್​ನಲ್ಲಿ ಪ್ರಯಾಣಿಸಲಿದ್ದಾರೆ ಎಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ತಿಳಿಸಿದ್ದಾರೆ.

ಈ ಹಿಂದೆ ಹಾರ್ದಿಕ್​ ಪಾಂಡ್ಯ, ಕೆ.ಎಲ್​.ರಾಹುಲ್​, ಮೊಹಮ್ಮದ್​ ಶಮಿ ಸೇರಿದಂತೆ ಹಲವು ಆಟಗಾರರು ದ್ವಿತೀಯ ದರ್ಜೆಯಲ್ಲಿ ಪ್ರಯಾಣಿಸುವಾಗ ಅಭಿಮಾನಿಗಳು ಸೆಲ್ಫಿಗಾಗಿ ಪೀಡಿಸುತ್ತಾರೆ. ಜತೆಗೆ ಲಗೇಜ್​ ಕೊಂಡೊಯ್ಯಲು ಸಹ ಸಮಸ್ಯೆಯಾಗುತ್ತಿದೆ. ಸೀಟುಗಳ ನಡುವೆ ಅಂತರ ಕಡಿಮೆ ಇರುವುದರಿಂದ ಕಾಲು ಚಾಚಿಕೊಳ್ಳಲೂ ಸಹ ಸಮಸ್ಯೆಯಾಗುತ್ತಿದೆ ಎಂದು ದೂರಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top