Sunday, 25th June 2017  

Vijayavani

1. ಇಂದಿನಿಂದ ಪ್ರಧಾನಿ ಅಮೆರಿಕಾ ಪ್ರವಾಸ- ವೈಟ್‌ಹೌಸ್‌ನಲ್ಲಿ ಮೋದಿಗೆ ವಿಶೇಷ ಡಿನ್ನರ್‌- ಟ್ರಂಪ್‌ರ ಮೊದಲ ಅತಿಥಿಯಾಗಲಿದ್ದಾರೆ ನರೇಂದ್ರ ಮೋದಿ 2. ಹೈವೇಗಳಲ್ಲಿ ಮದ್ಯ ಮಾರಾಟ ನಿಷೇಧ ವಿಚಾರ- ಹೋಟೆಲ್​, ರೆಸ್ಟೋರೆಂಟ್‌ಗಳಲ್ಲಿ ಎಣ್ಣೆಗೆ ಅವಕಾಶ- ರಂಗೋಲಿ ಕೆಳಗೆ ತೂರಿದ ಪಂಜಾಬ್​ ಸರ್ಕಾರ 3. ಇನ್ಫೋಸಿಸ್‌ ವಿರುದ್ಧ ವೀಸಾ ನಿಯಮ ಉಲ್ಲಂಘನೆ ಆರೋಪ- ಆರುವರೆ ಕೋಟಿ ದಂಡ ವಿಧಿಸಿದ ನ್ಯೂಯಾರ್ಕ್‌ ಸರ್ಕಾರ- ಆರೋಪ ಅಲ್ಲಗಳೆದ ಇನ್ಫೋಸಿಸ್‌ 4. ಕಷ್ಟ ಎದುರಾದ್ರೆ ಶಾಲೆಗೆ ಹರಕೆ- ಇಷ್ಟಾರ್ಥ ಸಿದ್ಧಿಯಾದ್ರೆ ವಿವಿಧ ಕೊಡುಗೆ- ಬಂಟ್ವಾಳದ ಸೂರಿಬೈಲ್​ನಲ್ಲಿ ಶಾಲೆಯೇ ದೇವರು 5. ಭಾರತ ವೆಸ್ಟ್‌ವಿಂಡೀಸ್‌ ಕ್ರಿಕೆಟ್‌ ಸರಣಿ- ಮೊದಲ ಪಂದ್ಯ ವರುಣನಿಗೆ ಬಲಿ- ಮಳೆಯಲ್ಲಿ ತೇಲಿಹೋದ ಶಿಖರ್‌ ಧವನ್‌, ರಹಾನೆ ಅರ್ಧ ಶತಕ
Breaking News :

ಕುಲಭೂಷಣ್ ಜಾಧವ್ ಪ್ರಕರಣ: ಐಸಿಜೆ ಮಧ್ಯಂತರ ತೀರ್ಪು ಹೊರಬಿತ್ತು

Thursday, 18.05.2017, 3:57 PM       No Comments

 

ಹೇಗ್​: ಪಾಕಿಸ್ತಾನದಿಂದ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್​ ಜಾಧವ್​ ಗಲ್ಲು ಶಿಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
# ಒಟ್ಟಾರೆಯಾಗಿ, ಗಲ್ಲು ಶಿಕ್ಷೆಗೆ ICJ ತಡೆ ನೀಡಿದೆ.

# ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಇನ್ನೂ ಕಾಲಾವಕಾಶ ಇದೆ ಎನ್ನುತ್ತಿರುವ ಪಾಕಿಸ್ತಾನದ ಪ್ರತಿವಾದ ಸಮರ್ಥನೀಯವಲ್ಲ. ಒಂದು ವೇಳೆ ಅಷ್ಟರೊಳಗೆ ICJ ತೀರ್ಪು ನೀಡದಿದ್ದರೆ ತಾನು ಗಲ್ಲು ಶಿಕ್ಷೆ ವಿಧಿಸಬಹುದು ಎನ್ನುವಂತಿದೆ ಪಾಕಿಸ್ತಾನದ ವಾದ. ಇದು ಸರಿಯಲ್ಲ.

# ICJ ತೀರ್ಪು ಹೊರಬೀಳುವವರೆಗೂ ಪಾಕಿಸ್ತಾನ ಗಲ್ಲುಶಿಕ್ಷೆ ವಿಧಿಸುವಂತಿಲ್ಲ.

# ಭಾರತ ಮತ್ತು ಕುಲಭೂಷಣ್ ಜಾಧವ್ ಅವರ ನ್ಯಾಯಯುತ ಹಕ್ಕನ್ನು ಪಾಕಿಸ್ತಾನ ಕಿತ್ತುಕೊಳ್ಳುವಂತಿಲ್ಲ.

# ಹಾಗಾಗಿ ICJ ತೀರ್ಪನ್ನು ಭಾರತ ಮತ್ತು ಪಾಕಿಸ್ತಾನ ಗೌರವಿಸಬೇಕಾಗುತ್ತದೆ ಎಂಬುದು ಜಡ್ಜ್​ ಸ್ಪಷ್ಟ ನುಡಿಗಳು.

# ಮುಖ್ಯವಾಗಿ ನ್ಯಾಯಾಧೀಶರು ಭಾರತದ ಮೇಲ್ಮನವಿ ICJ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಮನನ ಮಾಡಿಕೊಡುತ್ತಿದ್ದಾರೆ.

# ನ್ಯಾಯಾಧೀಶರ ವಾದ ಸರಣಿ ನೋಡುತ್ತಿದ್ದರೆ ಭಾರತದ ಕಡೆಗೆ ವಾಲುವಂತಿದೆ.

ಅಂತಾರಾಷ್ಟ್ರೀಯ ನ್ಯಾಯಲಯದ ನ್ಯಾಯಮೂರ್ತಿ ರೋನಿ ಅಬ್ರಾಹಾಂ ನೇತೃತ್ವದ 16 ನ್ಯಾಯಮೂರ್ತಿಗಳ ಪೀಠ ಈ ಮಹತ್ವರ ತೀರ್ಪು ನೀಡಿದೆ. ಭಾರತದ ಪರ ಹರೀಶ್ ಸಾಳ್ವೆ ಹಾಗೂ ದೀಪಕ್ ಮಿತ್ತಲ್​ ವಾದ ಮಂಡಿಸಿದ್ದರು.

ಕುಲಭೂಷಣ್ ಜಾಧವ್ ವಿರುದ್ಧ ಪಾಕಿಸ್ತಾನ ಗೂಢಚರ್ಯೆ ಆರೋಪ ಮಾಡಿತ್ತು. ಕುಲಭೂಷಣ್‌ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಾಕ್‌ನಿಂದ ಹೇಳಿಕೆ ನೀಡಿತ್ತು. ಪಾಕ್‌ ಸೇನಾ ನ್ಯಾಯಾಲಯದಿಂದ ಕುಲಭೂಷಣ್‌ಗೆ ಗಲ್ಲುಶಿಕ್ಷೆ ಪ್ರಕಟವಾಗಿತ್ತು. ಪಾಕಿಸ್ತಾನದ ಕ್ರಮ ಖಂಡಿಸಿ ಭಾರತ ಐಸಿಜೆ ಮೊರೆ ಹೋಗಿತ್ತು.

 

Leave a Reply

Your email address will not be published. Required fields are marked *

13 − eleven =

Back To Top