Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ಸುಪ್ರೀಂ ಕೋರ್ಟ್​ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶವಿಲ್ಲ ಎಂದ ಕೇಂದ್ರ

Friday, 12.01.2018, 4:57 PM       No Comments

ನವದೆಹಲಿ: ಸುಪ್ರೀಂ ಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನ್ಯಾಯಾಂಗ ವ್ಯವಸ್ಥೆಯ ಆಂತರಿಕ ವಿಷಯ, ಹಾಗಾಗಿ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರದ ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ ನ್ಯಾಯಾಂಗ ವ್ಯವಸ್ಥೆಯ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಜತೆಗೆ ಸುಪ್ರೀಂ ಕೋರ್ಟ್​ ತನ್ನಲ್ಲಿರುವ ಸಮಸ್ಯೆಗಳನ್ನು ತಾನೇ ಇತ್ಯರ್ಥ ಪಡಿಸಿಕೊಳ್ಳಬೇಕು. ದೇಶದ ಜನತೆ ಸುಪ್ರೀಂ ಕೋರ್ಟ್​ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮೂಲಗಳು ತಿಳಿಸಿವೆ.

ನಾಲ್ವರು ನ್ಯಾಯಮೂರ್ತಿಗಳ ಸುದ್ದಿಗೋಷ್ಠಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಭೆ ಕರೆದು ವಿಷಯದ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಜತೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರು ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top