Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಗಂಗೆಯಲ್ಲಿ ಅಲಕನಂದಾ

Sunday, 19.08.2018, 3:04 AM       No Comments

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಇದೇ ಮೊದಲ ಬಾರಿಗೆ ಗಂಗೆಯಲ್ಲಿ ಐಷಾರಾಮಿ ಕ್ರೂಸ್ ಸಂಚಾರ ಸೇವೆ ಸ್ವಾತಂತ್ರ್ಯದಿನದಂದು ಆರಂಭವಾಗಿದೆ. 2 ಮಹಡಿಯ ಆಸನ ವ್ಯವಸ್ಥೆ ಹೊಂದಿದೆ

ಈ ಡಬ್ಬಲ್ ಡೆಕ್ಕರ್ ಕ್ರೂಸ್. ‘ಚತುರ್ಯುಗ ನಗರ’ ಎಂಬ ಖ್ಯಾತಿಯ ಕಾಶಿಯಲ್ಲಿ ಹರಿಯುವ ಗಂಗಾ ನದಿಯಲ್ಲಿ ಚಲಿಸುವ ಕ್ರೂಸ್​ಗೆ ‘ಅಲಕನಂದಾ’ ಎಂದು ಹೆಸರಿಡಲಾಗಿದೆ. 90 ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯದ ಅಲಕನಂದಾ ಕ್ರೂಸನ್ನು ಕೋಲ್ಕತ ಮೂಲದ ನಾರ್ಡಿಕ್ ಕ್ರೂಸ್​ಲೈನ್ ಕಂಪನಿ ನಿರ್ಮಾಣ ಮಾಡಿದೆ.

ಉದ್ದೇಶವೇನು?

ನಾಲ್ಕು ಯುಗಗಳ ಇತಿಹಾಸವುಳ್ಳ ನಗರ ‘ವಾರಾಣಸಿ’ಯ ಧಾರ್ವಿುಕ, ಸಾಮಾಜಿಕ, ಪಾರಂಪರಿಕ ಮಹತ್ವ ಸಾರುವುದು. ಗಂಗಾ ತೀರದಲ್ಲಿನ ಪ್ರಸಿದ್ಧ ‘ಘಾಟ್’ಗಳನ್ನು ನೋಡುವುದು ಹಾಗೂ ಅದರ ಬಳಕೆ ಬಗ್ಗೆ ಪರಿಚಯ.

ಹೈಟೆಕ್ ಅಲಕಾ!

  • ಹವಾ ನಿಯಂತ್ರಣ ವ್ಯವಸ್ತೆ
  • ವೈಫೈ ವ್ಯವಸ್ಥೆ
  • ಸಸ್ಯಾಹಾರ ಮತ್ತು ಆಯ್ದ ಮಾಂಸಾಹಾರ ಖಾದ್ಯಗಳು
  • ವಿಡಿಯೋ, ಧ್ವನಿವರ್ಧಕ ವ್ಯವಸ್ಥೆ (ಪಾರ್ಟಿ, ಕಂಪನಿ ಸಮಾರಂಭಗಳ ಅನುಕೂಲಕ್ಕಾಗಿ)
  • ಬಯೋ ಟಾಯ್ಲೆಟ್ (ಗಂಗಾ ಮಾಲಿನ್ಯ ತಡೆಗೆ)
  • ಲೈಫ್​ಗಾರ್ಡ್​ಗಳು , ಲೈಫ್ ಜಾಕೆಟ್​ಗಳು (ಪ್ರಯಾಣಿಕರ ಸುರಕ್ಷತೆಗೆ)
  • ಸಂಜೆ ವೇಳೆ ವಿಶೇಷ ಪ್ರಯಾಣ (ಗಂಗಾ ಆರತಿ ವೀಕ್ಷಣೆಗೆ)

ನಮೋ ಸ್ಟಾರ್ಟಪ್ ಇಂಡಿಯಾ ನನಸು

ಕೋಲ್ಕತದಲ್ಲಿ ನಿರ್ವಿುತವಾದ ಕ್ರೂಸ್, 1400 ಕಿ.ಮೀ. ಸಮುದ್ರ ಮಾರ್ಗವಾಗಿ ಸಂಚರಿಸಿ ಬಳಿಕ ಕ್ರೇನ್ ಸಹಾಯದಿಂದ ವಾರಾಣಸಿಗೆ ತರಲಾಗಿದೆ. ಪ್ರಧಾನಿ ಮೋದಿ ಸ್ಟಾರ್ಟಪ್ ಯೋಜನೆ ಅನ್ವಯ ನೀಡಿದ ಪ್ರೇರಣೆಯಿಂದ ಕ್ರೂಸ್ ನಿರ್ವಣಕ್ಕೆ ಅನುಕೂಲವಾಯಿತು ಎಂದು ನಿರ್ಮಾಣ ಕಂಪನಿ ಹೇಳಿದೆ.

ಬೇಸಿಗೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಕ್ರೂಸ್​ನ ಕೆಳಗಿನ ಮಹಡಿ ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಜಾಗತಿಕ ಗುಣಮಟ್ಟ ಕಾಯ್ದುಕೊಂಡು ಕ್ರೂಸ್ ನಿರ್ವಿುಸಲಾಗಿದೆ. ವಾರಾಣಸಿಯ ಜನಪ್ರಿಯ ಖಾದ್ಯಗಳಾದ ಕಚೋರಿ, ಜಲೇಬಿ, ಬಾಟಿ ಛೋಖಾ ನೀಡಲಾಗುವುದು.

| ವಿಕಾಸ್ ಮಾಳವಿಯಾ, ನಾರ್ಡಿಕ್ ಕ್ರೂಸ್​ಲೈನ್ ಮುಖ್ಯಸ್ಥ

Leave a Reply

Your email address will not be published. Required fields are marked *

Back To Top