Monday, 11th December 2017  

Vijayavani

1. ಸಿಗರೇಟ್​ ಕೊಟ್ರೆ ಮಾತ್ರ ಕಾರ್​ ಹತ್ತಿನಿ – ಇಲ್ಲಾಅಂದ್ರೆ ಡೋರ್ ಹಾಕೋದಕ್ಕೂ ಬಿಡಲ್ಲ – ಪೊಲೀಸರ ಎದ್ರು ಬೆಳಗೆರೆ ಹೈ ಡ್ರಾಮ್​ 2. ನಿನ್ನೆ ಮೌಖಿಕ, ಇಂದು ಲಿಖಿತ ಹೇಳಿಕೆ – ಸಿಸಿಬಿಯಿಂದ ರವಿ 2ನೇ ಪತ್ನಿ ಯಶೋಮತಿ ವಿಚಾರಣೆ – ಅತ್ತ ಸುನೀಲ್​ರಿಂದ ರಕ್ಷಣೆಗೆ ಮನವಿ 3. ಕನ್ನಡ ಜನರ ಓಟು ಪಡೆದು ಶಾಸಕರ ಮರಾಠಿ ಪ್ರೇಮ – ಸಂಜಯ್ ಪಾಟೀಲ್​ರಿಂದ ಕನ್ನಡ ವಿರೋಧಿ ಹೇಳಿಕೆ – ಶಾಸಕರ ನಡೆಗೆ ಜನರು ಕಿಡಿ 4. ಲಿಂಗಾಯತ ಸಮಾವೇಶದಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ – ತಗ್ಲಾಕೊಂಡವನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ – ಒದ್ದು ಪೊಲೀಸರಿಗೆ ಒಪ್ಪಿಸಿದ ಜನ 5. ಗೋಲ್ಡ್​ ಆಗ್ತಿದಾರೆ ಅಕ್ಷಯ್ ಕುಮಾರ್ – ಧೋತಿಯಲ್ಲಿ ಕಿಲಾಡಿ ಚೇರ್​ ಸ್ಟಂಟ್ – ಸೋಶೀಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್
Breaking News :

‘ದಿಗ್ವಿಜಯ ನ್ಯೂಸ್​’ ವರದಿಯಿಂದ ಹೆತ್ತಮಡಿಲು ಸೇರಿದ ‘ದೇವರ ಮಗ’

Tuesday, 06.06.2017, 3:31 PM       No Comments

ಶಿವಮೊಗ್ಗ: ನಿಮ್ಮ ದಿಗ್ವಿಜಯ ನ್ಯೂಸ್​ ಇಂದು ಒಂದು ಅಪರೂಪದ ಕ್ಷಣಕ್ಕೆ ಕಾರಣವಾಗಿದೆ. ಹನ್ನೆರಡು ವರ್ಷಗಳ ಹಿಂದೆ ಹೆತ್ತವರಿಂದ ದೂರವಾಗಿದ್ದ ಮಗ ಇಂದು ನಿಮ್ಮ ದಿಗ್ವಿಜಯ ನ್ಯೂಸ್ ವರದಿಯಿಂದ, ಮತ್ತೆ ಹೆತ್ತೊಡಲು ಸೇರಿದ್ದಾರೆ. ಚೆನ್ನಪಟ್ಟಣದ ಜಿಂಜೇಗೌಡ ಹಾಗೂ ನಿಂಗಮ್ಮ ದಂಪತಿಯ ಪುತ್ರ ಜವರೇಗೌಡ ಮನೆಯಿಂದ ನಾಪತ್ತೆಯಾಗಿದ್ದ.

‘ಮೆಗ್ಗಾನ್ ಆಸ್ಪತ್ರೆಯಲ್ಲೊಬ್ಬ ದೇವರ ಮಗ’ ವಿಶೇಷ ವರದಿ


ರಸ್ತೆ ಅಪಘಾತದಲ್ಲಿ ನನೆಪಿನ ಶಕ್ತಿ ಕಳೆದುಕೊಂಡ ಆತನನ್ನ ಕಳೆದ 12 ವರ್ಷದಿಂದ ಮೆಗ್ಗಾನ್​ ಆಸ್ಪತ್ರೆ ಸಿಬ್ಬಂದಿ ನೋಡಿಕೊಳ್ತಿದ್ರು. ಆತನಿಗೆ ದೇವರ ಮಗ ಅಂತ ಹೆಸರಿಟ್ಟಿದ್ರು. ಇತ್ತೀಚೆಗೆ ದೇವರ ಮಗನ ವರದಿಯನ್ನು ನಿಮ್ಮ ದಿಗ್ವಿಜಯ ನ್ಯೂಸ್​ ಜೂನ್ 4ರಂದು ವರದಿ ಪ್ರಸಾರ ಮಾಡಿತ್ತು.

ದಿಗ್ವಿಜಯ ನ್ಯೂಸ್​ ವರದಿಯ ಬಿಗ್ ಇಂಪ್ಯಾಕ್ಟ್  


ಈ ವರದಿ ನೋಡಿದ ಜವರೇಗೌಡ ಅರ್ಥಾತ್​ ದೇವರ ಮಗನ ತಂಗಿ, ಹಾಗೂ ತಾಯಿ ನಿಂಗಮ್ಮ ಇಂದು ಮೆಗ್ಗಾನ್​ ಆಸ್ಪತ್ರೆಗೆ ಆಗಮಿಸಿ ಮತ್ತೆ ತಮ್ಮ ಮಗನನ್ನು ಸೇರಿದ್ದಾರೆ. ಅಷ್ಟೇ ಅಲ್ಲ ಮಗನ ಒಂದು ಮಾಡಿದ ದಿಗ್ವಿಜಯ ನ್ಯೂಸ್​ಗೆ ಧನ್ಯವಾದ ತಿಳಿಸಿದ್ದಾರೆ.

# ದಿಗ್ವಿಜಯ ನ್ಯೂಸ್​ ವರದಿ ನೋಡಿ ದೌಡಾಯಿಸಿದ ಪೋಷಕರು
# ಮೆಗ್ಗಾನ್ ಆಸ್ಪತ್ರೆಗೆ ಬಂದ ಚನ್ನಪಟ್ಟಣದ ಜಿಂಜೇಗೌಡ, ನಿಂಗಮ್ಮ
# ಜಿಂಜೇಗೌಡ ಹಾಗೂ ನಿಂಗಮ್ಮ ದಂಪತಿ ಪುತ್ರ ಜವರೇಗೌಡ
# 12 ವರ್ಷದ ಹಿಂದೆ ನಾಪತ್ತೆಯಾಗಿದ್ದ ಜವರೇಗೌಡ
# ಅಪಘಾತದಲ್ಲಿ ಗಾಯಗೊಂಡು ನೆನಪು ಕಳೆದುಕೊಂಡಿದ್ದ ಜವರೇಗೌಡ
# 12 ವರ್ಷದಿಂದ ಮೆಗ್ಗಾನ್ ಆಸ್ಪತ್ರೆಯಲ್ಲೇ ಬೆಳೆದಿದ್ದ ಜವರೇಗೌಡ
# ಜವರೇಗೌಡನಿಗೆ ದೇವರ ಮಗ ಎಂದು ಹೆಸರಿಟ್ಟಿದ್ದ ಮೆಗ್ಗಾನ್​ ಆಸ್ಪತ್ರೆ ಸಿಬ್ಬಂದಿ

Leave a Reply

Your email address will not be published. Required fields are marked *

Back To Top