More

    ಆಂಗ್ಲರ ವಿರುದ್ಧ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಟೀಮ್ ಇಂಡಿಯಾ

    ಧರ್ಮಶಾಲಾ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅತಿಥೇಯರು ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದ್ದಾರೆ. ಇನ್ನು ಸರಣಿಯ ಐದನೇ ಪಂದ್ಯ ಮಾರ್ಚ್​ 07ರಂದು ಧರ್ಮಾಶಾಲಾದಲ್ಲಿ ಆರಂಭವಾಗಿದ್ದು, ಅತಿಥೇಯರು ಸರಣಿಯ ಅಂತಿಮ ಪಂದ್ಯದಲ್ಲೂ ಮೇಲುಗೈ ಸಾಧಿಸಿದ್ದಾರೆ.

    ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಸರಣಿಯ ಅಂತಿಮ ಪಂದ್ಯ ಮಹತ್ತರ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದು, ಐದನೇ ಟೆಸ್ಟ್​ ಪಂದ್ಯದಲ್ಲೂ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.

    ಐದನೇ ಟೆಸ್ಟ್​ ಹಾಗೂ ಸರಣಿಯ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾದ ಟಾಪ್​ ಐದು ಬ್ಯಾಟ್ಸ್​ಮನ್​ಗಳು 50ಕ್ಕೂ ಹೆಚ್ಚು ರನ್​ಗಳನ್ನು ಗಳಿಸಿದ್ದಾರೆ. ಇವರಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಸಿಡಿಸಿದ್ದರೆ, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಅರ್ಧಶತಕ ಬಾರಿಸಿದ್ದಾರೆ.

    Team India

    ಇದನ್ನೂ ಓದಿ: ಐಪಿಎಲ್​​ ಆರಂಭಕ್ಕೂ ಮುನ್ನ ಗುಜರಾತ್​ ಟೈಟಾನ್ಸ್​ಗೆ ಮತ್ತೊಂದು ಶಾಕ್; ಟೂರ್ನಿಗೆ ಪ್ರಮುಖ ಆಟಗಾರ ಅಲಭ್ಯ

    ಈ ಮೂಲಕ ಟೀಮ್ ಇಂಡಿಯಾದ ಟಾಪ್ ಐವರು ಬ್ಯಾಟ್ಸ್​ಮನ್​ಗಳು 50 ಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆಯನ್ನು ಮೂರನೇ ಬಾರಿಗೆ ನಿರ್ಮಿಸಿದ್ದಾರೆ. ವಿಶೇಷವೆಂದರೆ ಟೆಸ್ಟ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಭಾರತ ಈ ಸಾಧನೆ ಮಾಡಿದೆ. 1998 ರಲ್ಲಿ  ಕಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದ ಭಾರತ ಇನ್ನಿಂಗ್ಸ್​ ಹಾಗೂ 219ರನ್​ಗಳಿಂದ ಪಂದ್ಯವನ್ನು ಜಯಿಸಿತ್ತು. ಇದಾದ ಬಳಿಕ 2009ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲೂ ಭಾರತ ಈ ಸಾಧನೆ ಮಾಡಿತ್ತು.

    15 ವರ್ಷಗಳ ಬಳಿಕ ಟೀಮ್​ ಇಂಡಿಯಾ ಈ ಸಾಧನೆ ಮಾಡಿದ್ದು, ಈ ಬಾರಿ ಯಶಸ್ವಿ ಜೈಸ್ವಾಲ್ 57 ರನ್, ರೋಹಿತ್ ಶರ್ಮಾ 103, ಶುಭಮನ್ ಗಿಲ್ 110, ದೇವದತ್ ಪಡಿಕ್ಕಲ್ 65 ಮತ್ತು ಸರ್ಫರಾಜ್ ಖಾನ್ 56 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಟೀಮ್ ಇಂಡಿಯಾ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಭಾರತ ಈ ಸಾಧನೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts