Thursday, 20th September 2018  

Vijayavani

Breaking News

ಜಿಎಸ್​ಟಿ ಅಡಿ ಟಿಡಿಎಸ್​/ಟಿಸಿಎಸ್​ ಸಂಗ್ರಹಣೆ: ಅ. 1 ರಿಂದ ಜಾರಿ

Friday, 14.09.2018, 7:11 PM       No Comments

ನವದೆಹಲಿ: ಇ ಕಾಮರ್ಸ್​ ಕಂಪನಿಗಳ ಪೂರೈಕೆದಾರರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕಾನೂನಿನಡಿ ಟಿಡಿಎಸ್​ ಮತ್ತು ಟಿಸಿಎಸ್​ ಸಂಗ್ರಹಣೆಯನ್ನು ಅಕ್ಟೋಬರ್​ 1ರಿಂದ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಜಿಎಸ್​ಟಿ ಕಾಯ್ದೆ ಪ್ರಕಾರ 2.5 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಪೂರೈಸುವ ಅಥವಾ ಸೇವೆಯನ್ನು ಒದಗಿಸುವ ಸರಕುಗಳು ಅಥವಾ ಸೇವೆಗಳ ಪೂರೈಕೆದಾರರಿಂದ ಶೇ. 1 ರಷ್ಟು ಟಿಡಿಎಸ್​ ಸಂಗ್ರಹಿಸುವಂತೆ ಸೂಚಿಸಿದೆ. ಜತೆಗೆ ರಾಜ್ಯ ಕಾನೂನಿನಡಿ ಸಹ ಶೇ. 1ರಷ್ಟು ತೆರಿಗೆ ವಸೂಲಿ ಮಾಡುವಂತೆ ತಿಳಿಸಲಾಗಿದೆ.

ಇದೇ ವಿಧದಲ್ಲಿ ಇ ಕಾಮರ್ಸ್​ ಕಂಪನಿಗಳೂ ಪೂರೈಕೆದಾರರಿಗೆ ಹಣ ಪಾವತಿಸುವ ಸಂದರ್ಭದಲ್ಲಿ ಶೇ. 1ರ ವರೆಗೆ ಟಿಸಿಎಸ್​ ಸಂಗ್ರಹಿಸಬಹುದು. ರಾಜ್ಯಗಳೂ ರಾಜ್ಯ ಜಿಎಸ್​ಟಿ ಕಾಯ್ದೆಯನ್ವಯ ಶೇ. 1ರ ವರೆಗೆ ಟಿಸಿಎಸ್​ ಸಂಗ್ರಹಿಸಬಹುದು.

ಹೊಸ ನಿಯಮದಿಂದಾಗಿ ಇ ಕಾಮರ್ಸ್​ ಪೂರೈಕೆದಾರರು ಮತ್ತು ಇ ಕಾಮರ್ಸ್​ ಆಪರೇಟರ್​ಗಳ ಮೇಲೆ ಪರಿಣಾಮ ಉಂಟಾಗಲಿದೆ. ಈ ನಿಯಮ ಗ್ರಾಹಕರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top