More

    9.31 ಲಕ್ಷ ರೂ. ವಂಚನೆ

    ಹುಬ್ಬಳ್ಳಿ: ಐಇಎಲ್​ಟಿಎಸ್ ಪ್ರಮಾಣ ಪತ್ರ ಕೊಡಿಸುವುದಾಗಿ ನಂಬಿಸಿದ ಖದೀಮರೊಬ್ಬರು, ಇಲ್ಲಿನ ಮುರಾರ್ಜಿ ನಗರದ ಸೇಲ್ಸ್​ಮನ್ ಒಬ್ಬರಿಂದ 9.31 ಲಕ್ಷ ರೂ. ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

    56 ವರ್ಷದ ರಮೇಶಗೌಡ ವಂಚನೆಗೊಳಗಾದವರು. ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಅಪರಿಚಿತರು, ಐಇಎಲ್​ಟಿಎಸ್ (ಇಂಟರ್​ನ್ಯಾಷನಲ್ ಇಂಗ್ಲಿಷ್ ಲಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ(?)) ಪ್ರಮಾಣ ಪತ್ರ ಕೊಡಿಸುವುದಾಗಿ ನಂಬಿಸಿದ್ದಾರೆ. ಮೊದಲು 60 ಸಾವಿರ ರೂ. ಪಡೆದಿದ್ದಾರೆ. ಸರ್ಟಿಫಿಕೆಟ್ ಕಳುಹಿಸಲಾಗಿದೆ. ಇನ್ನಷ್ಟು ಹಣ ಕಟ್ಟಬೇಕೆಂದು ಹೇಳಿ ವಿವಿಧ ಖಾತೆಗಳಿಂದ 9,31,200 ರೂ. ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ರಮೇಶಗೌಡ, ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts