More

    ಜನಮನ ಸೆಳೆದ ಟಗರಿನ ಕಾಳಗ

    ಹುಬ್ಬಳ್ಳಿ: ಇಲ್ಲಿಯ ಕಮರಿಪೇಟ ರಾಮದೇವ ಮಂದಿರದ ಬಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಟಗರಿನ ಕಾಳಗ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

    ನೂರಾರು ಜನರು ಸುತ್ತಲೂ ಜಮಾಯಿಸಿ ಟಗರಿನ ಕಾಳಗ ವೀಕ್ಷಿಸಿದರು. ಕೊಬ್ಬಿದ ಎರಡು ಟಗರುಗಳು ನಾಲ್ಕು ಹೆಜ್ಜೆ ಹಿಂದೆ ಹೋಗಿ ವಾಪಸ್ ಬಂದು ಜೋರಾಗಿ ತಲೆಯಿಂದ ಡಿಚ್ಚಿ ಹೊಡೆಯುವ ದೃಶ್ಯ ಬಲು ರೋಚಕವಾಗಿತ್ತು.

    ನೋಡುಗರು ಕೇಕೆ, ಶಿಳ್ಳೆ ಹೊಡೆದು ಟಗರಿನ ಮಾಲೀಕರನ್ನು ಹುರಿದುಂಬಿಸಿದರು. ಹುಬ್ಬಳ್ಳಿ- ಧಾರವಾಡದ ವಿವಿಧ ಕಡೆಗಳಿಂದ ಸುಮಾರು 70ಕ್ಕೂ ಹೆಚ್ಚು ಜೋಡಿ ಟಗರುಗಳು ಸ್ಪರ್ಧೆಗೆ ಆಗಮಿಸಿದ್ದವು.

    ಇದರಲ್ಲಿ ಜಯಶಾಲಿಯಾದ ಟಗರಿನ ಮಾಲೀಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
    ಕಮರಿಪೇಟ ದಸರಾ ಉತ್ಸವ ಸಮಿತಿಯವರು ಪ್ರತಿವರ್ಷದಂತೆ ಈ ವರ್ಷವೂ ಟಗರಿನ ಕಾಳಗ ಏರ್ಪಡಿಸಿದ್ದರು.

    ನವರಾತ್ರಿಯ ಕೊನೇ ದಿನಕ್ಕೆ ಒಂದು ದಿನ ಮೊದಲು ಈ ಸ್ಪರ್ಧೆ ಆಯೋಜಿಸುತ್ತ ಬರಲಾಗಿದೆ. ಇದರಿಂದ ಟಗರಿನ ಮಾಲೀಕರಿಗೆ ತಮ್ಮ ಟಗರುಗಳನ್ನು ದಷ್ಟಪುಷ್ಟವಾಗಿ ಬೆಳೆಸಲು ಪ್ರೇರಣೆ ನೀಡಿದಂತಾಗುತ್ತದೆ ಎಂಬುದು ಆಯೋಜಕರ ಅನಿಸಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts