Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಎಲ್ಲೆಡೆ ಪಸರಿಸಿದ ವಿವೇಕಾನಂದ

Saturday, 13.01.2018, 3:03 AM       No Comments

ದೇಶ ಸೇರಿ ರಾಜ್ಯದೆಲ್ಲೆಡೆ ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಯುವಕರು ಸೇರಿದಂತೆ ಸಮಸ್ತ ಜನತೆ ವಿವಿಧ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮುಗಳಖೋಡದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ 3 ವಿಶ್ವದಾಖಲೆ ಬರೆದಿದ್ದರೆ, ನವದೆಹಲಿಯಲ್ಲಿ 22ನೇ ರಾಷ್ಟ್ರೀಯ ಉತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಮುಗಳಖೋಡ (ಬೆಳಗಾವಿ): ವೇದಿಕೆ ಸಂಪೂರ್ಣ ಕೇಸರಿಮಯವಾಗಿತ್ತು. ಖಾವಿ ಬಟ್ಟೆ ತೊಟ್ಟ ವಿದ್ಯಾರ್ಥಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಒಂದೇ ಕಡೆ ಸೇರಿ ಸ್ವಾಮಿ ವಿವೇಕಾನಂದರ ಸಂದೇಶ ಸಾರಿದರು, ಮಾತ್ರವಲ್ಲ, 3 ವಿಶ್ವದಾಖಲೆ ನಿರ್ಮಾಣವಾದವು.

ಸ್ವಾಮಿ ವಿವೇಕಾನಂದರ ಜನ್ಮದಿನ ದಂದು ಇಂಥ ಅಪರೂಪದ ಘಳಿಗೆ ಕಂಡು ಬಂದಿದ್ದು, ಮುಗಳಖೋಡದ ಜಿಡಗಾ ಮಠದಲ್ಲಿ ಶುಕ್ರವಾರ ನಡೆದ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆಯಲ್ಲಿ.

ರಾಯಪುರದಲ್ಲಿ ಈ ಹಿಂದೆ ಏಕಕಾಲಕ್ಕೆ 10 ಸಾವಿರ ವಿದ್ಯಾರ್ಥಿಗಳು ವಿವೇಕಾನಂದರ ವೇಷಧಾರಿಯಾಗಿ ಕಾಣಿಸಿಕೊಂಡು ದಾಖಲೆ ನಿರ್ವಿುಸಿದ್ದರು. ಆದರೆ, ಶುಕ್ರವಾರ ಮುಗಳಖೋಡದಲ್ಲಿ ನಡೆದ ‘ಸಹಸ್ರ ಸಹಸ್ರ ವಿವೇಕ್ ಅವಾಹನಾ’ ಸಮಾರಂಭದಲ್ಲಿ ಏಕಕಾಲಕ್ಕೆ 10054 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವೇಕಾನಂದರ ವೇಷಧಾರಿಗಳಾಗಿ ಪಾಲ್ಗೊಂಡು ದಾಖಲೆ ನಿರ್ವಿುಸಿದರು. ಒಂದೇ ವೇದಿಕೆಯಲ್ಲಿ 10 ಸಾವಿರಕ್ಕೂ ಅಧಿಕ ವೇಷಧಾರಿಗಳು ವಿವೇಕಾನಂದರ ಉದ್ಘೋಷ ಮೊಳಗಿಸಿದ್ದು ಹಾಗೂ ಏಕಕಾಲದಲ್ಲಿ 800ಕ್ಕೂ ಅಧಿಕ ವಾದ್ಯಮೇಳಗಳು ಕಲಾ ಪ್ರದರ್ಶನ ನೀಡುವ ಮೂಲಕ ದಾಖಲೆ ಮಾಡಿದರು. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್,

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಗೋಲ್ಡನ್ ಬುಕ್ ರೆಕಾರ್ಡ್ಸ್​ನಲ್ಲಿ ಈ ಮೂರೂ ದಾಖಲೆಗಳು ಸೇರ್ಪಡೆಯಾದವು. ಈ ಸಾಧನೆಗೆ ಪ್ರಧಾನಿ ಸಹ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಡಗಾಮಠದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಈ ಎಲ್ಲ ವಿದ್ಯಾರ್ಥಿಗಳಿಗೆ ಖಾವಿ ಬಟ್ಟೆ ನೀಡಿದ್ದರು. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಲೆಗೆ ಕೇಸರಿ ಪೇಟ ತೊಟ್ಟು, ಮೈತುಂಬ ಖಾವಿ ಬಟ್ಟೆ ಧರಿಸಿ ಗಮನ ಸೆಳೆದರು. ನಿಪ್ಪಾಣಿಯ ಸುನಿಲ ದಳವಿಯವರ 70 ಸದಸ್ಯರ ತಂಡ ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಪೇಟ ತೊಡಿಸಿದರು.

ವಿವೇಕಾನಂದರು ಒಂದು ಧರ್ಮ, ಜಾತಿ, ಭಾಷೆಯ ಜನರಿಗೆ ಸೀಮಿತವಾದವರಲ್ಲ. ಎಲ್ಲ ವಿಭಾಗದ ಜನರು ಅವರನ್ನು ಪ್ರೀತಿಸುತ್ತಿದ್ದಾರೆ. ಅವರ ಜಯಂತಿ ಆಚರಿಸಲು ಸರ್ಕಾರ ಸಿದ್ಧವಿದೆ.

| ರಾಮಲಿಂಗಾರೆಡ್ಡಿ ಗೃಹಸಚಿವ


ಉದ್ಯೋಗ ಸೃಷ್ಟಿಸಿಕೊಳ್ಳಿ

ನವದೆಹಲಿ: ಇಂದಿನ ಯುವಕರು ಉದ್ಯೋಗಗಳ ಸೃಷ್ಟಿಕರ್ತರಾಗಬೇಕು. ಕೇಂದ್ರ ಸರ್ಕಾರ ಸ್ಟಾರ್ಟಪ್​ಗಳಿಗೆ ಸಹಾಯ ನೀಡುವ ಮೂಲಕ ಯುವ ಸಮುದಾಯದ ಜತೆಗಿದೆ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದಾರೆ. 22ನೇ ರಾಷ್ಟ್ರೀಯ ಯುವ ಉತ್ಸವ ಉದ್ಘಾಟಿಸಿ ಗ್ರೇಟರ್ ನೋಯ್ಡಾದ ಗೌತಮ ಬುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿ, ತಾಳ್ಮೆಯಿರಬೇಕು, ಆದರೆ ರಾಷ್ಟ್ರ ಮತ್ತು ಸಮಾಜಕ್ಕೆ ಕ್ರಿಯಾಶೀಲ ಚಿಂತನೆಯಿಂದ ನೆರವಾಗಲು ಕಾಯುತ್ತಾ ಕೂರಬಾರದು. ಒಂಟಿಯಾಗಿಯೇ ಮಹತ್ತರ ಕಾರ್ಯಗಳು ಆರಂಭವಾಗುತ್ತವೆ. ನಂತರ ಈ ಮಾರ್ಗದಲ್ಲಿ ಹಲವರು ಕೈಜೋಡಿಸುತ್ತಾರೆ. ಯುವಕರನ್ನು ನಾವು ಮುದ್ರಾ, ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಯೋಜನೆಗಳಿಂದ ಪ್ರೋತ್ಸಾಹಿಸುತ್ತಿದ್ದೇವೆ ಎಂದು ಮೋದಿ ವಿವರಿಸಿದರು.

ರಾಷ್ಟ್ರೀಯ ಯುವ ಉತ್ಸವ: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ 5 ದಿನಗಳವರೆಗೆ ಉತ್ತರಪ್ರದೇಶ ಸರ್ಕಾರ ಮತ್ತು ಕೇಂದ್ರ ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ರಾಷ್ಟ್ರೀಯ ಯುವ ಉತ್ಸವ ನಡೆಯುತ್ತಿದೆ. ಇದೇ ವೇಳೆ ಜಾರ್ಖಂಡ್​ನಲ್ಲಿ 27,842 ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಕೋಲ್ಕತದಲ್ಲಿ ಬೈಕ್ ರ‍್ಯಾಲಿ ಸಂದರ್ಭ ಟಿಎಂಸಿ- ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆಯಾಗಿದೆ.

Leave a Reply

Your email address will not be published. Required fields are marked *

Back To Top