Monday, 16th July 2018  

Vijayavani

ಡ್ಯಾಂಗಳು ತುಂಬಿವೆ, ಸಿಎಂ ರಿಂದ ಕಣ್ಣೀರಧಾರೆ - ಸಿಎಂ ಕಣ್ಣೀರಿಗೆ ಆಯನೂರು ವ್ಯಂಗ್ಯ - ಕಲ್ಲು ಹೃದಯಗಳಿಗೆ ಕಣ್ಣೀರು ಬರಲ್ಲ ಅಂತಾ ಸಚಿವ ನಾಡಗೌಡ ಟಾಂಗ್‌        ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವೆ, ಪ್ರಮುಖ ಖಾತೆ ಬಿಟ್ಟಿದ್ದೇವೆ - ಸಿಎಂ ‘ವಿಷಕಂಠ’ ಹೇಳಿಕೆಗೆ ಎ. ಮಂಜು ಟಾಂಗ್‌ - ದೋಸ್ತಿ ಸರ್ಕಾರದಲ್ಲಿ ಮತ್ತೇ ಜಂಗೀ ಕುಸ್ತಿ        ಒಂದೇ ವೇದಿಕೆಯಲ್ಲಿ ಎಚ್‌ಡಿಕೆ, ಡಿಕೆಶಿ - ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ - ಉಪಚುನಾವಣೆಗೆ ದೋಸ್ತಿಗಳ ಅಡಿಪಾಯ        ಸಿದ್ದು ಅನ್ನಭಾಗ್ಯದಲ್ಲಿ ಮಿಂಚಿದ್ದವನಿಗೆ ದೌರ್ಭಾಗ್ಯ - ಮಗನಿಗೆ ಚಿಕಿತ್ಸೆ ಕೊಡಿಸಲು ತಂದೆಯ ಪರದಾಟ - ಜಾಹೀರಾತಿಗೆ ಬಳಸಿಕೊಂಡು ಕೈಬಿಟ್ಟ ಸರ್ಕಾರ        ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮಹಾದಾಯಿ ಹೋರಾಟ - ದಯಾಮರಣಕ್ಕಾಗಿ ರೈತರಿಂದ ಮನವಿ - ರಾಜ್ಯ ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ        ಮುಂದಿನ ಲೋಕಸಭೆ ಚುನಾವಣೆ ಭರ್ಜರಿ ತಯಾರಿ- 25 ಸ್ಥಾನ ಗೆಲ್ಲಲು ಬಿಜೆಪಿ ಬಿಗ್‌ ಪ್ಲಾನ್‌ - ಜುಲೈ 28 ಕ್ಕೆ ಅಮಿತ್‌ ಷಾ ರಾಜ್ಯಕ್ಕೆ ಆಗಮನ       
Breaking News

ಸುಜ್ಲಾನ್ ಘಟಕ ತಾತ್ಕಾಲಿಕ ಸ್ಥಗಿತ

Friday, 13.07.2018, 5:00 AM       No Comments

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮಾರುಕಟ್ಟೆ ಬೇಡಿಕೆ ಕುಸಿತದ ಪರಿಣಾಮ ಪಡುಬಿದ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಾಳಿಯಂತ್ರದ ಬಿಡಿಭಾಗಗಳನ್ನು ತಯಾರಿ ಸುವ ಸುಜ್ಞಾನ್ ಇನ್‌ಫ್ರಾಸ್ಟ್ರಕ್ಚರ್ ಘಟಕ ಜುಲೈ 1ರಿಂದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಮಾರುಕಟ್ಟೆ ಕುಸಿತದ ಪರಿಣಾಮ ದೇಶದೆಲ್ಲೆಡೆ ಇರುವ ಸುಜ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಘಟಕಗಳಲ್ಲಿ ಎರಡು ತಿಂಗಳ ಮಟ್ಟಿಗೆ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಪಡುಬಿದ್ರಿ ಘಟಕದಲ್ಲಿ ಎರಡು ತಿಂಗಳ ಹಿಂದೆಯೇ ಉತ್ಪಾದನಾ ಮಟ್ಟ ಕಡಿಮೆ ಮಾಡುವ ಉದ್ದೇಶ ಹಾಗೂ ಅನಗತ್ಯ ಖರ್ಚು ನಿಭಾಯಿಸುವ ಸಲುವಾಗಿ ತಮ್ಮನ್ನು ತಂಡಗಳಾಗಿ ರಚಿಸಿ ದಿನಕ್ಕೊಂದು ಪಾಳಿಯಲ್ಲಿ ಒಂದೊಂದು ತಂಡಗಳಿಗೆ ಕೆಲಸ ನೀಡಲಾಗುತ್ತಿತ್ತು ಎಂದು ಕಾರ್ಮಿಕರು ತಿಳಿಸಿದ್ದಾರೆ.
ಗುತ್ತಿಗೆ ಆಧರಿತ ಹಾಗೂ ಕಂಪನಿ ಕಾರ್ಮಿಕರು ಸೇರಿ 700 ಮಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಕಂಪನಿ ಕಾರ್ಮಿಕರಿಗೆ ಎರಡು ತಿಂಗಳ ವೇತನ ನೀಡಿ ರಜೆಯಲ್ಲಿ ಕಳುಹಿಸಲಾಗಿದೆ. ಆದರೆ, ಗುತ್ತಿಗೆ ಕಾರ್ಮಿಕರು ರಜಾ ವೇತನವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಪಡುಬಿದ್ರಿ ಘಟಕದಲ್ಲಿ 2017ರ ನವೆಂಬರ್‌ನಲ್ಲೂ ಮಾರುಕಟ್ಟೆ ಕುಸಿತದ ನೆಪವೊಡ್ಡಿ ಒಂದೂವರೆ ತಿಂಗಳು ಲಾಕೌಟ್ ಮಾಡಲಾಗಿತ್ತು. ಪುನಾಂಭ ಬಳಿಕ ಐದು ತಿಂಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಇದೀಗ ಮತ್ತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮುಂದೊಂದು ದಿನ ಘಟಕ ಶಾಶ್ವತವಾಗಿ ಮುಚ್ಚಲಿದೆಯೇ ಎನ್ನುವ ಅನುಮಾನ ಕಂಪನಿ ಕಾರ್ಮಿಕರದು.

Leave a Reply

Your email address will not be published. Required fields are marked *

Back To Top