Wednesday, 19th September 2018  

Vijayavani

ಹವಾಲಾ ಕೇಸ್​ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿಕೆಶಿಗೆ ಮತ್ತೊಂದು ಕಡೆ ಅನಾರೋಗ್ಯ        ಬಂಧನದಿಂದ ತಪ್ಪಿಸಿಕೊಳ್ಳಲು‌ ಸಚಿವ ಡಿಕೆಶಿ ಶತಪ್ರಯತ್ನ; ವಕೀಲರೊಂದಿಗೆ ಸತತ ಚರ್ಚೆ        ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿ ಪಡೆದ ಸಿಎಂ ಎಚ್ಡಿಕೆ; ಅಧಿಕಾರಿಗಳೊಂದಿಗೆ ಚರ್ಚೆ        ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಸಿಎಂ ಜತೆ ಚರ್ಚೆಯನ್ನೇ ನಡೆಸಿಲ್ಲ ಎಂದ ಸತೀಶ್​ ಜಾರಿಕಿಹೊಳಿ        ಜೆಡಿಎಸ್​ ಸೇರುವಂತೆ ಆಳಂದ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಎಚ್​ಡಿಕೆ ಆಹ್ವಾನ       
Breaking News

ಕಾವೇರಿ ಅಂತಿಮ ತೀರ್ಪು: ರಾಜ್ಯಕ್ಕೆ ಸಿಹಿ ನೀಡಿದ ಸುಪ್ರೀಂ ಕೋರ್ಟ್​

Friday, 16.02.2018, 12:33 PM       No Comments

<< ಕರ್ನಾಟಕಕ್ಕೆ 14.75 ಟಿಎಂಸಿ ನೀರು ಹೆಚ್ಚುವರಿ ; ಬೆಂಗಳೂರಿಗಾಗಿಯೇ 4.75 ಟಿಎಂಸಿ ನೀರು ಹಂಚಿಕೆ >>

ನವದೆಹಲಿ: ಸುಪ್ರೀಂ ಕೋರ್ಟ್​ ಕಾವೇರಿ ವಿವಾದದ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಕರ್ನಾಟಕಕ್ಕೆ ಹೆಚ್ಚುವರಿ ನೀರು ನೀಡಿ ಆದೇಶಿಸಿದೆ. ಜತೆಗೆ ಈ ತೀರ್ಪು ಮುಂದಿನ 15 ವರ್ಷಗಳವರೆಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.

ಐ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯದ ವಾದವನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೆಚ್ಚುವರಿ ನೀರು ನೀಡಿದೆ. ಬೆಂಗಳೂರಿನ ಕುಡಿಯುವ ನೀರು ಮತ್ತು ಕೈಗಾರಿಕೆಗಳ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ನೀರಿನ ಪ್ರಮಾಣ ಹೆಚ್ಚಿಸಿರುವುದಾಗಿ ತಿಳಿಸಿದೆ.

ಕೋರ್ಟ್​ ತೀರ್ಪಿನನ್ವಯ ಕರ್ನಾಟಕಕ್ಕೆ 14.75 ಟಿಎಂಸಿ ನೀರು ಹೆಚ್ಚುವರಿ ದೊರೆಯಲಿದ್ದು, ತಮಿಳುನಾಡಿಗೆ 192 ಟಿಎಂಸಿ ಬದಲಾಗಿ 177.25 ಟಿಎಂಸಿ ನೀರು ಸಿಗಲಿದೆ. ಜತೆಗೆ ಬೆಂಗಳೂರಿಗಾಗಿಯೇ ಕೋರ್ಟ್​ 4.75 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಕೇರಳ, ಪುದುಚೇರಿಗೆ ನೀಡಿದ ನೀರು ಹಂಚಿಕೆ ಎತ್ತಿಹಿಡಿದಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಇದರನ್ವಯ ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀರು ದೊರೆಯಲಿದೆ.

ಇದೇ ಸಂದರ್ಭದಲ್ಲಿ ಯಾವುದೇ ಒಂದು ರಾಜ್ಯ ಅಲ್ಲಿನ ನದಿಗಳ ಮೇಲೆ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ. ನದಿಗಳು ರಾಷ್ಟ್ರೀಯ ಸಂಪತ್ತು. ಹಾಗಾಗಿ ಎರಡೂ ರಾಜ್ಯಗಳು ಸಮಾನ ಹಂಚಿಕೆ ತತ್ವ ಪಾಲಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ರಾಜ್ಯದ ಪರ ವಾದ ಮಂಡಿಸಿದ ವಕೀಲ ಶ್ಯಾಮ್​ ದಿವಾನ್​ ಅವರು ಸಮೀಕ್ಷೆಯ ಪ್ರಕಾರ ತಮಿಳುನಾಡಿನ ಮೂಲಕ ಹರಿದುಹೋಗುವ ಕಾವೇರಿ ನೀರಿನಲ್ಲಿ 90 ಟಿಎಂಸಿ ಸಮುದ್ರಕ್ಕೆ ಸೇರುತ್ತಿದೆ. ಅಲ್ಲದೆ, ತಮಿಳುನಾಡು ಕಾವೇರಿ ಕಣಿವೆಯಲ್ಲಿ 30 ಟಿಎಂಸಿ ಅಂತರ್ಜಲ ಲಭ್ಯವಿದೆ. ನೀರಿನ ವೈಜ್ಞಾನಿಕ ಬಳಕೆ ಬಗ್ಗೆ ತಮಿಳುನಾಡು ವರದಿ ನೀಡಿಲ್ಲ. ಜತೆಗೆ ಅಂತರ್ಜಲದ ಬಗ್ಗೆ ನ್ಯಾಯಾಧಿಕರಣಕ್ಕೆ ಮಾಹಿತಿ ಇದ್ದರೂ ಅದರನ್ನು ಕಾವೇರಿ ನದಿ ವ್ಯಾಪ್ತಿಗೆ ತಂದಿರಲಿಲ್ಲ. ಹೀಗಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ವಾದಿಸಿದ್ದರು.

Leave a Reply

Your email address will not be published. Required fields are marked *

Back To Top