Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಕಾವೇರಿ ಸ್ಕೀಮ್​ ಅಸ್ತು

Saturday, 19.05.2018, 3:03 AM       No Comments

ನವದೆಹಲಿ: ಕಾವೇರಿ ನದಿ ನೀರು ಸುಗಮ ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕಾವೇರಿ ನಿರ್ವಹಣಾ ಸ್ಕೀಮ್ ಪರಿಷ್ಕೃತ ಕರಡನ್ನು ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಶುಕ್ರವಾರ ಅನುಮೋದಿಸಿದೆ.

ಸ್ಕೀಮ್ ಸಂಬಂಧ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ನೀಡಿದ್ದ ಸಲಹೆಗಳನ್ನು ತಿರಸ್ಕರಿಸಿದ ನ್ಯಾಯಪೀಠ, ಆ ಸಲಹೆಗಳಲ್ಲಿ ಯಾವುದೇ ಮೌಲ್ಯಯುತ ಅಂಶಗಳಿಲ್ಲ ಎಂದು ಹೇಳಿತು. ಕಾವೇರಿ ನೀರು ಬಿಕ್ಕಟ್ಟು ನ್ಯಾಯಾಧಿಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಪರಿಷ್ಕರಿಸಿದ್ದು, ಕಾವೇರಿ ನಿರ್ವಹಣಾ ಸ್ಕೀಮ್ ಮೂಲಕ ಅದಕ್ಕೊಂದು ತಾತ್ತಿ್ವಕ ಅಂತ್ಯ ನೀಡಲಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ ಕೂಡ ಇದ್ದರು. ಕಾವೇರಿ ಸ್ಕೀಮ್ ಅಂತಿಮಗೊಳಿಸದ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕೆಂದು ಕೋರಿದ ತಮಿಳುನಾಡು ಸರ್ಕಾರದ ಮನವಿ ಅರ್ಜಿಯನ್ನು ಕೂಡ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕಾವೇರಿ ನಿರ್ವಹಣಾ ಮಂಡಳಿ

ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಗಳ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿ ಇದಾಗಿದ್ದು, ನದಿ ನೀರು ಹಂಚಿಕೆಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದ ಕರಡು ಪ್ರಸ್ತಾವನೆಯಂತೆ ಮಾಡಲಿದೆ.

ಅಲ್ಪಾವಧಿ ತಡೆ ಕೋರಿದ್ದ ಕರ್ನಾಟಕ

ಸದ್ಯ ರಾಜ್ಯ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ಕಾರಣವನ್ನು ಮುಂದಿಟ್ಟು, ಕಾವೇರಿ ಸ್ಕೀಮ್ ಅನುಮೋದಿಸುವ ವಿಚಾರದಲ್ಲಿ ತಾತ್ಕಾಲಿಕ ತಡೆ ಕೊಡಬೇಕು ಎಂದು ಕರ್ನಾಟಕ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿತ್ತು. ಆದರೆ, ಇದಕ್ಕೆ ಒಪ್ಪದ ಸುಪ್ರೀಂ ಕೋರ್ಟ್ ಶುಕ್ರವಾರವೇ ಕಾವೇರಿ ನಿರ್ವಹಣಾ ಸ್ಕೀಮ್ ಕರಡನ್ನು ಅನುಮೋದಿಸಿದೆ. ಈ ವಿಷಯದಲ್ಲಿ ಕರ್ನಾಟಕಕ್ಕೆ ಕೊಂಚ ಹಿನ್ನಡೆಯಾದಂತಾಗಿದೆ.

ಫೆ.16ರ ತೀರ್ಪಿನ ವಿವರ

ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜರ ಕಾಲದ ತಾರತಮ್ಯಗಳಿಂದ ಹಿಡಿದು ಕಾವೇರಿ ನ್ಯಾಯಾಧಿಕರಣದ 2007ರ ಐತೀರ್ಪ ಮತ್ತು ಸುಪ್ರೀಂಕೋರ್ಟ್​ನ ಮಧ್ಯಂತರ ಆದೇಶಗಳಿಂದ ಕಂಗೆಟ್ಟಿದ್ದ ಕರ್ನಾಟಕದ ಕಾವೇರಿ ಕಣಿವೆ ಜನರ ಪಾಲಿಗೆ ಫೆ.16ರ ತೀರ್ಪು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ವಾರ್ಷಿಕವಾಗಿ ಸಂಗ್ರಹವಾಗುವ 740 ಟಿಎಂಸಿ ನೀರಿನಲ್ಲಿ ತಮಿಳುನಾಡಿಗೆ 192 ಟಿಎಂಸಿ ನೀರು ಹರಿಸಬೇಕೆಂಬ ರಾಜ್ಯದ ಹೆಗಲಿಗೇರಿದ್ದ ಭಾರ ಇಳಿಸಿರುವ ಸುಪ್ರೀಂಕೋರ್ಟ್, ಮುಂದಿನ 15 ವರ್ಷಗಳಿಗೆ ಅನ್ವಯಿಸುವಂತೆ ಪ್ರತಿ ಜಲವರ್ಷದಲ್ಲಿ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದರೆ ಸಾಕು ಎಂಬ ಸಮಾಧಾನಕರ ತೀರ್ಪನ್ನು ನೀಡಿತ್ತು. ಇದರಿಂದಾಗಿ ರಾಜ್ಯಕ್ಕೆ ವಾರ್ಷಿಕವಾಗಿ ನಿಗದಿಯಾಗಿದ್ದ 270 ಟಿಎಂಸಿ ನೀರಿನ ಪ್ರಮಾಣ 284.75ಕ್ಕೆ ಏರಿಕೆಯಾಗಲಿದೆ.

ಈ ತೀರ್ಪಿನ ಪ್ರಕಾರ, ‘ಮುಂದಿನ 6 ವಾರಗಳ ಒಳಗಾಗಿ ಕೇಂದ್ರ ಸರ್ಕಾರ ಸ್ಕೀಮ್ ರೂಪಿಸಿ, ಕಾವೇರಿ ಅಂತಿಮ ತೀರ್ಪಿನ ಸುಗಮ ಜಾರಿಗೆ ಅನುವು ಮಾಡಿಕೊಡಬೇಕು. ಜಲವರ್ಷದಲ್ಲಿ ಆಯಾ ತಿಂಗಳುಗಳಿಗೆ ಅಗತ್ಯವಾಗಿ ನೀರಿನ ಹಂಚಿಕೆ ಮಾಡುವ ಜವಾಬ್ದಾರಿ ಈ ಸ್ಕೀಮ್ೆ ಒಳಪಟ್ಟಿದೆ ಮತ್ತು ಸ್ಕೀಮ್ ಅನ್ನು ರೂಪಿಸಲು ಕಾಲಾವಧಿ ವಿಸ್ತರಿಸುವ ಪ್ರಶ್ನೆಯೇ ಇಲ್ಲ, ನಾವಿದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ತೀರ್ಪಿನ 457ನೇ ಪುಟದಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top