Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಸರ್ಕಾರಕ್ಕೆ ಬಡ್ತಿ ಬಡಿಗೆ!

Saturday, 28.04.2018, 3:06 AM       No Comments

| ಕೀರ್ತಿನಾರಾಯಣ ಸಿ. ಬೆಂಗಳೂರು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ‘ಬಡ್ತಿ’ ಅಸ್ತ್ರ ಹಿಡಿದು ಕೆಲ ಸರ್ಕಾರಿ ನೌಕರರ ಹಿತ ಕಾಯುತ್ತಲೇ ಮತಹಿತದ ಬಗ್ಗೆಯೂ ಲೆಕ್ಕಾಚಾರ ಹಾಕಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ಮರ್ವಘಾತ ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿ/ನೌಕರರ ಹಿಂಬಡ್ತಿ-ಮುಂಬಡ್ತಿ ಆದೇಶ ಜಾರಿಗೆ ಸರ್ಕಾರ ನೀಡಿದ್ದ ಚುನಾವಣಾ ನೀತಿಸಂಹಿತೆ ನೆಪವನ್ನು ತಿರಸ್ಕರಿಸಿರುವ ಸವೋಚ್ಚ ನ್ಯಾಯಾಲಯ ಮೇ1ರಿಂದಲೇ ಆದೇಶ ಪಾಲನೆಯಾಗಬೇಕೆಂದು ಸೂಚಿಸಿ ಕೊನೆಯ ಎಚ್ಚರಿಕೆ ರವಾನಿಸಿದೆ.

ಕೋರ್ಟ್ ಹೇಳಿದ್ದೇನು?: ರಾಜ್ಯದಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿಸಂಹಿತೆ ನ್ಯಾಯಾಲಯದ ಈ ಆದೇಶಕ್ಕೆ ಅನ್ವಯಿಸುವುದಿಲ್ಲ. ಯಾವ್ಯಾವ ಇಲಾಖೆಗಳಲ್ಲಿ ಹಿಂಬಡ್ತಿ-ಮುಂಬಡ್ತಿ ಆದೇಶ ಹೊರಡಿಸಿಲ್ಲವೊ ಅಲ್ಲೆಲ್ಲ ಮೇ 1ರಿಂದ ಈ ಆದೇಶ ಪಾಲನೆಯಾಗಲೇಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್ ನೀಡಿರುವ ತಪರಾಕಿಗೆ ಎಚ್ಚೆತ್ತುಕೊಂಡಿರುವ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ತುರ್ತು ಕೋರ್ಟ್ ವಿಚಾರವೆಂದು ಪರಿಗಣಿಸಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ, ಹಿಂಬಡ್ತಿ-ಮುಂಬಡ್ತಿ ಪಡೆದಿರುವ ಅಧಿಕಾರಿ ಮತ್ತು ಸಿಬ್ಬಂದಿ ಪಟ್ಟಿಯನ್ನು ಇಂಗ್ಲಿಷ್ ಭಾಷೆಯಲ್ಲಿ ತಯಾರಿಸಿ ಕಳುಹಿಸುವಂತೆ ಸುತ್ತೋಲೆ ಹೊರಡಿಸುವ ಮೂಲಕ ಶುಕ್ರವಾರ (ಏ.27) ಮಧ್ಯಾಹ್ನ 3 ಗಂಟೆಯೊಳಗೆ ಎಲ್ಲ ಇಲಾಖೆಗಳಿಂದ ತರಿಸಿಕೊಂಡಿದ್ದಾರೆ.

ಪುರಸ್ಕೃತವಾಗುತ್ತ ಶೇ.18ರ ಪ್ಲಾನ್?

ಸುಪ್ರೀಂಕೋರ್ಟ್ ಆದೇಶದಲ್ಲಿ ಉಲ್ಲೇಖಿಸದಿದ್ದರೂ ಸರ್ಕಾರ ಶೇ.15 ಮತ್ತು ಶೇ.3 ಮೀಸಲಾತಿ ಅನ್ವಯ ಬಡ್ತಿ ಪಡೆದಿರುವವರಿಗೆ ಸುಪ್ರೀಂಕೋರ್ಟ್ ಆದೇಶ ಅನ್ವಯಿಸುವುದಿಲ್ಲ ಎಂದು ಹೇಳುತ್ತಿದೆ. ಶೇ.18ರ ಮೀಸಲಾತಿ ನಿಯಮವನ್ನು ಕೋರ್ಟ್ ಪರಿಗಣಿಸಿದರೆ ಅಂದಾಜು 10 ಸಾವಿರ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾತ್ರವೇ ಹಿಂಬಡ್ತಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕರಣವೇನು?

ಬಿ.ಕೆ.ಪವಿತ್ರಾ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಎಸ್ಸಿ-ಎಸ್ಟಿ ಮೀಸಲಾತಿ ಕಾಯ್ದೆಯನ್ನು ರದ್ದುಗೊಳಿಸಿ 2017ರ ಫೆ.9ರಂದು ತೀರ್ಪು ಪ್ರಕಟಿಸಿತ್ತು. 1978ರ ನಂತರ ಎಸ್ಸಿ-ಎಸ್ಟಿ ಮೀಸಲಾತಿಯಡಿ ಬಡ್ತಿ ಪಡೆದಿರುವ ಎಲ್ಲ ಅಧಿಕಾರಿ ಮತ್ತು ನೌಕರರನ್ನು ಹಿಂಬಡ್ತಿ ಗೊಳಿಸಿ ಜ್ಯೇಷ್ಠತೆ ಆಧಾರದಲ್ಲಿ ಬಡ್ತಿ ನೀಡುವಂತೆ ಆದೇಶಿಸಿತ್ತು.

ಹಿಂಬಡ್ತಿ-ಮುಂಬಡ್ತಿ ಪ್ರಕ್ರಿಯೆ ಮೇ 1ರಿಂದ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ಎಸ್ಸಿ-ಎಸ್ಟಿ ನೌಕರರು ಹಿಂಬಡ್ತಿ ಆಗುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಶೇ.15 ಮತ್ತು ಶೇ.3ರ ಮೀಸಲಾತಿ ಅನ್ವಯ ಬಡ್ತಿ ಪಡೆದವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಪಟ್ಟಿ ಸಿದ್ಧಪಡಿಸಿದೆ. ಆದರೆ, ಸುಪ್ರೀಂಕೋರ್ಟ್ ಇದನ್ನು ಹೇಳಿಲ್ಲ. ಈ ಬಗ್ಗೆ ಮೇ 8ರಂದು ಕೋರ್ಟ್ ಗಮನಕ್ಕೆ ತರಲಾಗುತ್ತದೆ.

| ಎಂ.ನಾಗರಾಜ್ ಅಧ್ಯಕ್ಷ, ಅಹಿಂಸಾ

20 ಸಾವಿರ ನೌಕರರು?

ಸುಪ್ರೀಂಕೋರ್ಟ್ ಆದೇಶ ಯಥಾವತ್ತಾಗಿ ಪಾಲನೆಯಾದರೆ ಅಂದಾಜು 15 ರಿಂದ 20 ಸಾವಿರ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಹಿಂಬಡ್ತಿ-ಮುಂಬಡ್ತಿ ಆಗಲಿದೆ. ಮೀಸಲಾತಿ ಅನ್ವಯ ಬಡ್ತಿ ಪಡೆದಿದ್ದ ಎಸ್ಸಿ-ಎಸ್ಟಿ ನೌಕರರು ಹಿಂಬಡ್ತಿ ಹೊಂದಲಿದ್ದಾರೆ. ಆಯಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಜ್ಯೇಷ್ಠತಾ ಪಟ್ಟಿ ಪ್ರಕಾರ ಮುಂಬಡ್ತಿ ಪಡೆಯಲಿದ್ದಾರೆ. ಈವರೆಗೆ ಉನ್ನತ ಸ್ಥಾನದಲ್ಲಿದ್ದವರು ಕೆಳಗಿನ ಸ್ಥಾನಕ್ಕೆ ಬಂದರೆ ಕೆಳ ಹುದ್ದೆಯಲ್ಲಿರುವವರು ಮೇಲಿನ ಹುದ್ದೆ ಅಲಂಕರಿಸಲಿದ್ದಾರೆ.

Leave a Reply

Your email address will not be published. Required fields are marked *

Back To Top