Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಹೆಣ್ಣು ಮಗುವಿಗೆ ತಾಯಿಯಾದ ‘ಪಡ್ಡೆಗಳ ರಾಣಿ’ ಸನ್ನಿ ಲಿಯೋನ್!

Friday, 21.07.2017, 10:12 AM       No Comments

ಮುಂಬೈ: ಪಡ್ಡೆ ಹುಡುಗರ ರಾಣಿಯೆಂದೆ ಖ್ಯಾತಿ ಗಳಿಸಿ, ಬಾಲಿವುಡ್​ನಲ್ಲಿ ಸುಭದ್ರವಾಗಿ ನೆಲೆ ಕಂಡುಕೊಂಡಿರುವ ಸನ್ನಿ ಲಿಯೋನ್​ ತಾಯಿಯಾಗಿದ್ದಾರೆ.

ಹೌದು, ಸನ್ನಿ ಲಿಯೋನ್​ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ವಿಷಯವೇನೆಂದರೆ ಸನ್ನಿ ಲಿಯೋನ್​ ಮತ್ತು ಅವರ ಪತಿ ಡೇನಿಯಲ್​ ವೆಬ್ಬರ್​ ಹೆಣ್ಣು ಮಗುವನ್ನು ದತ್ತು ಪಡೆಯುವ ಮೂಲಕ ತಂದೆ-ತಾಯಿ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಸನ್ನಿ ಮತ್ತು ಡೇನಿಯಲ್​ 2011ರಲ್ಲಿ ವಿವಾಹವಾಗಿದ್ದರು.

ಸನ್ನಿ ಲಿಯೋನ್​ ತನ್ನ 21 ತಿಂಗಳ ಮುದ್ದಾದ ಮಗಳಿಗೆ ನಿಶಾ ಕೌರ್​ ವೆಬ್ಬರ್​ ಎಂದು ನಾಮಕರಣ ಮಾಡಿದ್ದಾರೆ. ಮೂಲಗಳ ಪ್ರಕಾರ ಈ ಮಗುವನ್ನು ಸನ್ನಿ ಲಿಯೋನ್​ ದಂಪತಿ ಮಹಾರಾಷ್ಟ್ರದ ಲಾತೂರ್​ ಜಿಲ್ಲೆಯಲ್ಲಿ ದತ್ತು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸನ್ನಿ ಲಿಯೋನ್​ 2 ವರ್ಷದ ಹಿಂದೆ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದೆ. ಆಗ ಮಗುವನ್ನು ದತ್ತು ಪಡೆಯಬೇಕು ಎಂದು ತೀರ್ಮಾನಿಸಿದ್ದೆ. ಮಗು ದತ್ತು ಪಡೆಯಲು ಆಗಲೇ ನಾನು ಅರ್ಜಿ ಸಲ್ಲಿಸಿದ್ದೆ. ಈಗ ಮಗುವನ್ನು ದತ್ತು ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಬಾಲಿವುಡ್​ ನಟಿ ಶರ್ಲಿನ್​ ಚೋಪ್ರಾ ಈ ಸುದ್ದಿಯನ್ನು ಮೊದಲು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು. ಆ ನಂತರ ಚೋಪ್ರಾ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ಸನ್ನಿ ಮಗು ದತ್ತು ಪಡೆದಿರುವ ಸುದ್ದಿಯನ್ನು ಖಚಿತಪಡಿಸಿದ್ದರು.

– ಏಜೆನ್ಸೀಸ್​

Leave a Reply

Your email address will not be published. Required fields are marked *

Back To Top