Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಧರ್ಮ, ಧ್ಯಾನ, ಯೋಗದಿಂದ ದೇಶ ಸದೃಢ…

Saturday, 17.06.2017, 3:00 AM       No Comments

ಇಡೀ ವಿಶ್ವ ಜೂನ್ 21ರಂದು ವಿಶ್ವ ಯೋಗದಿನ ಆಚರಿಸುತ್ತಿದ್ದರೆ, ನಮ್ಮ ದೇಶದ ಯುವಕರು ಅಸಡ್ಡೆ ತೋರಿಸಿ ದುಶ್ಚಟಗಳಿಂದ ಶರೀರವನ್ನು ರೋಗಗಳ ಗೂಡು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಯೋಗ-ಧ್ಯಾನ ದೈಹಿಕ, ಮಾನಸಿಕ ಸ್ವಾಸ್ಥ್ಯ್ಕೆ ಪೂರಕ ಎಂಬ ವಾಸ್ತವವನ್ನು ಮನಗಾಣಲು ಇಂದಿನ ಪೀಳಿಗೆ ಯತ್ನಿಸಬೇಕು.

 

‘ಧರ್ಮ’ ಅಂದರೆ ವಿದೇಶದ “Religion’ಗೆ ಸಮಾನಾರ್ಥವಲ್ಲ. ಧರ್ಮ ಎಂದರೆ ‘ಧರಿಸುವುದು’ ಎಂದರ್ಥ. ಏನನ್ನು ಧರಿಸುವುದು? ಎಂದರೆ, ನಮ್ಮನ್ನು ಧರ್ವಿುಷ್ಠರನ್ನಾಗಿಸುವ ಉತ್ತಮ ಗುಣಗಳನ್ನು ಧಾರಣೆ ಮಾಡುವುದು. ಸತ್ಯ, ಅಹಿಂಸೆ, ಆಸ್ತೇಯ, ಶೌಚ ಮತ್ತು ಇಂದ್ರಿಯ ನಿಗ್ರಹ ಎಂಬ 5 ಸದ್ಗುಣಗಳನ್ನು ಅಳವಡಿಸಿಕೊಂಡು, ಸದಾ ಸತ್ಯಮಾರ್ಗದಲ್ಲಿ ನಡೆದು, ಎಂದೂ ಯಾರಿಗೂ ದೈಹಿಕ-ಮಾನಸಿಕ ಹಿಂಸೆ ಕೊಡದೆ, ಆಸ್ತೇಯ ಅಂದರೆ ಇನ್ನೊಬ್ಬರ ಹಣ ಮುಟ್ಟದೆ, ಇನ್ನೊಬ್ಬರನ್ನು ದೋಚದೆ, ಅಂತರಂಗ-ಬಹಿರಂಗ ಶುಚಿಯಾಗಿಟ್ಟುಕೊಂಡು ಪಂಚೇಂದ್ರಿಯಗಳ ಮೇಲೆ ನಿಯಂತ್ರಣವಿಟ್ಟುಕೊಂಡು, ಅನಾಚಾರ ಮಾರ್ಗದಲ್ಲಿ ಎಂದೂ ನಡೆಯದಿರುವುದು. ವಿಶೇಷವೆಂದರೆ, ಹಿಂದೂಧರ್ಮದಲ್ಲಿ ನಾವು ಆಸ್ತಿಕರಾಗಿರಬಹುದು ಇಲ್ಲವೇ ನಾಸ್ತಿಕರೂ ಆಗಿರಬಹುದು. ಯಾವ ದೇವರನ್ನಾದರೂ ಹೇಗೆ ಬೇಕೋ ಹಾಗೆ ಪೂಜಿಸುವ ಸ್ವಾತಂತ್ರ್ಯ ಹಿಂದೂಧರ್ಮದಲ್ಲಿದೆ. ಇದನ್ನೇ ಸಂಸ್ಕೃತ ಸುಭಾಷಿತವೊಂದು ಹೀಗೆ ಹೇಳುತ್ತದೆ: ‘ಆಕಾಶಾತ್ಪತಿತಂ ತೋಯಂ ಯಥಾಗಚ್ಛತಿ ಸಾಗರಂ, ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ’- ಅಂದರೆ, ‘ಆಕಾಶದಿಂದ ಸುರಿದ ಮಳೆನೀರು ಹೇಗೆ ಕೊನೆಗೆ ಸಾಗರವನ್ನೇ ಸೇರುವುದೋ, ನಾವು ಯಾವುದೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದರೂ ಆ ಭಗವಂತನಿಗೇ ತಲುಪುವುದು’ ಎಂದರ್ಥ. ಇಂಥ ಉದಾರ ವಿಚಾರ ನಮ್ಮ ದೇಶದ ಪರಂಪರೆ!

ಇನ್ನು ಜೈನಧರ್ಮದಲ್ಲಿ ತ್ರಿಶೀಲವಾದರೆ, ಬೌದ್ಧಧರ್ಮದಲ್ಲಿ 8 ಸೂತ್ರಗಳು, ಹಾಗೆಯೇ ವೀರಶೈವರಲ್ಲಿ ಸಪ್ತಸೂತ್ರಗಳು. ಅಂದರೆ ಧರ್ಮಗುರು ಬಸವಣ್ಣನವರ ವಚನದಂತೆ- ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ- ಈ ಸಪ್ತಸೂತ್ರಗಳು ನಮ್ಮ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಸಾಧನವಾಗಿವೆ.

ವ್ಯಕ್ತಿತ್ವ ವಿಕಸನವೆಂದರೆ ಆ ವ್ಯಕ್ತಿಯ ಶರೀರ, ಬುದ್ಧಿ, ಮನಸ್ಸು ಮತ್ತು ಆತ್ಮವಿಶ್ವಾಸ ಎಲ್ಲವೂ ಉತ್ತಮಗೊಳ್ಳಬೇಕು. ಶಾರೀರಿಕ ಶಕ್ತಿವರ್ಧನೆಗೆ ಜಿಮ್ೆ ಹೋದರೆ ಕೇವಲ ಶರೀರ ಬೆಳೆಯುತ್ತದೆ. ಶಾಲೆ-ಕಾಲೇಜಿನಲ್ಲಿ ಓದುವುದರಿಂದ ಕೇವಲ ಬುದ್ಧಿ ಬೆಳೆಯುತ್ತದೆ. ಆದರೆ ಇಂದು ನಮ್ಮ ಸುತ್ತಲಿನ ಸಮಾಜ ನೋಡಿದರೆ ಶರೀರ ಬೆಳೆಸಿಕೊಂಡು ಗೂಂಡಾಗಿರಿ ಮಾಡುವ ದಾದಾಗಳನ್ನು ಕಾಣಬಹುದು. ಬುದ್ಧಿ ಬೆಳೆಸಿಕೊಂಡ ಅತ್ಯಂತ ಚಾಣಾಕ್ಷ ಸೂಕ್ಷ್ಮಮತಿಗಳಾದ ಆತಂಕವಾದಿಗಳನ್ನೂ ನೋಡುತ್ತೇವೆ. Educated Monsters ಕೂಡ ಇದ್ದಾರೆ. ಇನ್ನು ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳದೆ ಮನಸ್ಸಿನ ದುಗುಡಕ್ಕೆ ಕುಗ್ಗಿ ಅಕಾಲಿಕ ಸಾಯುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆತ್ಮವಿಶ್ವಾಸವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವವರು ಒಂದೆಡೆಯಾದರೆ, ಆತ್ಮಸಾಕ್ಷಿ ಕಳೆದುಕೊಂಡು ದೇಶವನ್ನು ದೋಚಿ ವಿದೇಶದ ಬ್ಯಾಂಕ್ ತುಂಬುವ ಸ್ವಾರ್ಥಿಗಳು ಮತ್ತೊಂದೆಡೆ. ಇದಕ್ಕೆ ಕಾರಣ, ಜನ ಧರ್ವಿುಷ್ಠರಾಗದೇ ಅಧರ್ವಿುಗಳಾಗುತ್ತಿರುವುದು! ಚಂಚಲ ಚಪಲ ಮನಸ್ಸನ್ನು ಗಟ್ಟಿಯಾಗಿಸುವುದೇ ಧ್ಯಾನ! ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಪ್ರಮುಖವಾಗಿ ಪರ್ವತ, ಗುಹೆಗಳಲ್ಲಿ ಕುಳಿತು ಮಾಡುತ್ತಿದ್ದ ಧ್ಯಾನವನ್ನು ಇಂದು ಪ್ರತಿಯೊಬ್ಬರೂ ತಮ್ಮ ಭೌತಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿ ಮಾಡಲೇಬೇಕಾದ ಸ್ಥಿತಿ ಬಂದಿದೆ. ಅಂದು ಸಾಧು-ಸಂತರು ಆತ್ಮಜ್ಞಾನಕ್ಕಾಗಿ ಧ್ಯಾನ ಮಾಡಿದರೆ ಇಂದು ಜನಸಾಮಾನ್ಯರ ದೈಹಿಕ, ಮಾನಸಿಕ ಆರೋಗ್ಯದ ಜತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಧ್ಯಾನ ಮಾಡಬೇಕಾಗಿದೆ.

ಆಧುನಿಕ ಜಗತ್ತಿನಲ್ಲಿ ಕೇವಲ ದೇಹದಾರ್ಢ್ಯ ಮತ್ತು ಬುದ್ಧಿ ಬೆಳೆಸುವ ಕಡೆಗೆ ಒತ್ತುಕೊಟ್ಟಿದ್ದರಿಂದ ಯುವಜನರು ದಾರಿ ತಪ್ಪುತ್ತಿದ್ದಾರೆ. ಒಂದು ಸಲ ನಾನು ಬಾಲಿ ಸುಮಾತ್ರಾಗೆ ಹೋಗುವಾಗ ವಿಮಾನಯಾನದಲ್ಲಿ ಧ್ಯಾನ ಮಾಡುತ್ತಿದ್ದೆ. ನನ್ನ ಪಕ್ಕದಲ್ಲಿದ್ದ ವಿದೇಶಿ ಯುವಕ ಏನೋ ತಳಮಳದಲ್ಲಿದ್ದ. ಅವನ ಪಕ್ಕದಲ್ಲಿದ್ದ ಡೆನ್ಮಾರ್ಕಿನ ಓರ್ವ ಮಹಿಳೆ ನಾನು ಕಣ್ಣುಬಿಟ್ಟಾಗ “Are you meditating?’ ಎಂದು ಕೇಳಿದರು. ನಾನು ‘ಹೌದು’ ಎಂದಾಗ ಅತ್ಯಂತ ಕಾತರ, ಕುತೂಹಲದಿಂದ ಪ್ರಶ್ನೆಗಳ ಸುರಿಮಳೆ ಸುರಿಸಿದರು. ನಾನು ಅಷ್ಟೇ ಶಾಂತವಾಗಿ ವಿವರಿಸತೊಡಗಿದೆ. ಆಗ ಅವರು ನಮ್ಮಿಬ್ಬರ ಮಧ್ಯ ಇದ್ದ ಯುವಕನಿಗೆ ಕಿಟಕಿಯ ಹತ್ತಿರ ಕುಳ್ಳಿರಿಸಿ ತಾವು ನನ್ನ ಪಕ್ಕಕ್ಕೆ ಬಂದು ತಮ್ಮ ದಾರುಣ ಕತೆ ಹೇಳಿದರು- ‘‘ಇವನು ನನ್ನ ದೊಡ್ಡ ಮಗ. ಈಗ ಡ್ರಗ್ ಅಡಿಕ್ಟ್ ಆಗಿದ್ದಾನೆ. ಗಂಡ ವಿಚ್ಛೇದನ ಪಡೆದುಕೊಂಡು ಇನ್ನೊಬ್ಬರೊಂದಿಗಿದ್ದಾನೆ. ಮಗನನ್ನು ಮತ್ತೆ ಮನುಷ್ಯನನ್ನಾಗಿಸಲು ಬಾಲಿಯಲ್ಲಿರುವ ‘ಯೋಗ ಧ್ಯಾನದ ಕೇಂದ್ರ’ಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. ನಿಮ್ಮೊಂದಿಗೆ ಮಾತನಾಡಿ ಮನಸ್ಸು ಹಗುರವಾಯಿತು. ನಾನೂ ಇನ್ನು ಮೇಲೆ ನೀವು ಹೇಳಿದಂತೆ ‘ಓಂ ನಮಃ ಶಿವಾಯ’ ಹೇಳುತ್ತೇನೆ. ಬಹುಶಃ ನನ್ನ ಮನಸ್ಸೂ ನಿಮ್ಮಂತೆ ಆಗುತ್ತದೆ’’ ಎಂದು ಹೇಳಿ ನಮಸ್ಕರಿಸಿ ತಬ್ಬಿಕೊಂಡು ಬೀಳ್ಕೊಟ್ಟರು! ಅಂದರೆ ಇಡೀ ವಿಶ್ವವೇ ಮನಸ್ಸನ್ನು ನಿಯಂತ್ರಿಸಲು ಧ್ಯಾನದ ಮೊರೆಹೋಗಿದೆ.

ಧ್ಯಾನ ಅಂದರೆ ಏನು? ಮಾನಸಿಕ ಒತ್ತಡ ಮತ್ತು ಚಂಚಲತೆಯಿಂದ ಮನಸ್ಸನ್ನು ಶಾಂತಿ-ನೆಮ್ಮದಿಯ ಕಡೆ ತೆಗೆದುಕೊಂಡು ಹೋಗುವ ಸರಳ ವಿಧಾನವೇ ಧ್ಯಾನ. ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಪರಿಸರ ಮತ್ತು ಆಧ್ಯಾತ್ಮಿಕ ಪರಿಪೂರ್ಣ ಆರೋಗ್ಯಕ್ಕೆ ಸಂಜೀವಿನಿಯೇ ಈ ಧ್ಯಾನವಾಗಿದೆ. ಅನಾದಿ ಕಾಲದಿಂದಲೂ ವಿಶ್ವದಾದ್ಯಂತ ಎಲ್ಲ ಧರ್ಮಗುರುಗಳು ಹಲವು ತರಹದ ಧ್ಯಾನಗಳನ್ನು ಜನರಿಗೆ ಪರಿಚಯಿಸಿದ್ದಾರೆ. ಅದರಲ್ಲೂ, ಭಾರತದ ಮಹರ್ಷಿ ಯೋಗಿಗಳ”Transcendental Meditation’ ಮನಸ್ಸನ್ನು ನಿರಾಳಗೊಳಿಸಿ ನಿಷ್ಕ್ರಿಯಗೊಂಡ ಹೃದಯ ಸದೃಢವಾಗಲು ಉಪಯುಕ್ತವಾಗಿದೆ ಎಂಬುದನ್ನು ಜಪಾನಿಯರು ವೈಜ್ಞಾನಿಕ ಸಮೀಕ್ಷೆ ಮುಖಾಂತರ ಜಗತ್ತಿಗೆ ತೋರಿಸಿದ್ದಾರೆ! 1993ರಲ್ಲಿ ಜಪಾನಿನ ಹಲವು ಯುವಕ-ಯುವತಿಯರು ಹೃದಯಾಘಾತದಿಂದ ಆಸ್ಪತ್ರೆ ಸೇರಿದಾಗ ಅವರ ಹೃದಯದ ಕ್ಷಮತೆ ತೀರಾ ಕಡಿಮೆಯಾಗಿದೆ ಎಂಬುದು ಕಂಡುಬಂದಿದ್ದರ ಜತೆಗೆ, ಅವರೆಲ್ಲರಿಗೂ ಮಾನಸಿಕ ಒತ್ತಡ ಹೆಚ್ಚಾಗಿದ್ದು ಹೃದಯಕ್ಕೆ ಹಾನಿಕಾರಿಯಾದ ಅವರ ರಕ್ತದಲ್ಲಿ Adrenaline, Noradrenaline ಮತ್ತು Cortisol ಹಾಮೋನ್​ಗಳು 400 ಪಟ್ಟು ಹೆಚ್ಚಿವೆ ಎಂಬುದು ತಿಳಿದುಬಂತು. ಅವರ ಹೃದಯ ಟ್ರ್ಯಾಪ್​ನಲ್ಲಿ ಸಿಕ್ಕಿಹಾಕಿಕೊಂಡ ಆಕ್ಟೋಪಸ್ ತರಹ ಕಂಡಿದ್ದರಿಂದ, ಅವರು ತಮ್ಮ ಭಾಷೆಯಲ್ಲಿ Takotsubo syndrome ಎಂದು ಕರೆದರು. ಮುಂದೆ ಅವರಿಗೆ ಮಂತ್ರ ಹೇಳುತ್ತ ದಿನಕ್ಕೆ ಎರಡು ಬಾರಿ 20 ನಿಮಿಷ ಧ್ಯಾನ ಮಾಡಿಸಿದಾಗ ಅವರ ಮನಸ್ಸು ನಿರಾಳವಾಗಿ ರಕ್ತದಲ್ಲಿರುವ ಹಾನಿಕಾರಕ ರಾಸಾಯನಿಕಗಳು ಕಡಿಮೆ ಆಗಿ ಹೃದಯವನ್ನು ಬಲಗೊಳಿಸುವ ’’Feel good harmone’’ಗಳಾದ Endorphin ÊÜáñÜᤠNeuropeptide ಮಟ್ಟ ಹೆಚ್ಚಾಗಿ ಕೇವಲ 72 ತಾಸಿನಲ್ಲಿ ಹೃದಯ ಮತ್ತೆ ಚೇತರಿಸಿಕೊಂಡುದನ್ನು ಕಂಡು ನಿಬ್ಬೆರಗಾದರು! ಆದ್ದರಿಂದ, ಇಂದು ಇಡೀ ವಿಶ್ವವೇ ಧ್ಯಾನದ ಕಡೆ ಗಮನ ಹರಿಸುವಂತಾಗಿದೆ. ಭಾರತದಲ್ಲಿ ರಾಜಯೋಗ, ಶಿವಯೋಗ, ಜಪ ಸಹಜಯೋಗಗಳು ಪ್ರಚಲಿತವಾಗಿವೆ.

12ನೇ ಶತಮಾನದ ಶರಣರಾದ ವೈದ್ಯ ಸಂಗಣ್ಣನವರಿಗೆ ಧ್ಯಾನದ ಮಹತ್ವ ತಿಳಿದಿತ್ತು. ಅವರು ತಮ್ಮ ವಚನದಲ್ಲಿ- ‘ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ ಸಕಲ ಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ ಪಂಚಾಕ್ಷರಿ ಪ್ರಣಮವ ತಪ್ಪದೇ ತ್ರಿಸಂಧಿಯಲ್ಲಿ ನೆನಹುಗೊಳ್ಳಿ ಇದರಿಂದ ರುಜೆ ದರ್ಪಂಗೆಡುವುದು’ ಎಂದರೆ ಮೂರುಹೊತ್ತು ‘ಓಂ ನಮಃ ಶಿವಾಯ’ ಎಂದರೆ ಆ ರೋಗದ ದರ್ಪ ಕಡಿಮೆ ಆಗಿ ರೋಗಿಯ ಆತ್ಮಬಲ ಹೆಚ್ಚುತ್ತದೆ ಎಂದರು!

ಆದರೆ ರೋಗ ಬಂದ ಮೇಲೆ ಚಿಕಿತ್ಸೆಗೆ ಹೋಗುವ ಬದಲು, ಮಕ್ಕಳಿದ್ದಾಗಿನಿಂದ ಯೋಗ-ಧ್ಯಾನ ಮಾಡುವುದನ್ನು ರೂಢಿಸಿಕೊಂಡರೆ ಆರೋಗ್ಯ ಉತ್ತಮವಾಗಿ ಸಾರ್ಥಕ ಜೀವನ ನಡೆಸುವ ಸಾಧಕರಾಗುವುದರಲ್ಲಿ ಸಂದೇಹವಿಲ್ಲ. 3,000 ವರ್ಷಗಳ ಹಿಂದೆ ಪತಂಜಲಿ ಮಹರ್ಷಿಗಳು ವಿಶ್ವಕ್ಕೆ ನೀಡಿದ ಅತ್ಯುತ್ತಮ ಕೊಡುಗೆ ಎಂದರೆ ಯೋಗ. ಇಂದು ಆಧುನಿಕ ಜಗತ್ತು ಯೋಗದ ಮಹತ್ವ ಅರಿತು ನ್ಯೂಯಾರ್ಕ್​ನಿಂದ ಹಿಡಿದು ಜಪಾನಿನ ಟೋಕಿಯೋವರೆಗೂ ಎಲ್ಲ ಜಿಮ್ಳಲ್ಲಿ ‘ಅಷ್ಟಾಂಗ ಯೋಗ’ ಕಲಿಸುತ್ತಿದ್ದಾರೆ! ಯೋಗ ಅಂದರೆ ಮನಸ್ಸನ್ನು ನಿಗ್ರಹಗೊಳಿಸುವುದು. ಇದರ ಮೊದಲ ಹೆಜ್ಜೆ ‘ಯಮ’, ಎರಡನೆಯದು ‘ನಿಯಮ’, ಮೂರನೆಯದು ‘ಆಸನ’, ನಾಲ್ಕನೆಯದು ‘ಪ್ರಾಣಾಯಾಮ’, ಐದನೆಯದು ‘ಪ್ರತ್ಯಾಹಾರ’, ಆರನೆಯದು ‘ಧಾರಣ’, ಏಳನೆಯದು ‘ಧ್ಯಾನ’, ಕೊನೆಯದಾಗಿ ಎಂಟನೆಯದು ‘ಸಮಾಧಿ’- ಪರಮಾತ್ಮನಲ್ಲಿ ಒಂದಾಗುವುದು, ಇಲ್ಲವೇ ಅಂಗವನ್ನು ಲಿಂಗಮಾಡುವುದು. ಇದರಲ್ಲಿ ಮೊದಲ ನಾಲ್ಕು ಹೆಜ್ಜೆಗಳು ಬಹಿರಂಗ ಶುದ್ಧಿಗಾಗಿ, ಮಿಕ್ಕ ನಾಲ್ಕು ಅಂತರಂಗ ಶುದ್ಧಿಗಾಗಿ.

ಧ್ಯಾನ ಯೋಗ ಮಾಡುವುದರಿಂದ ಮನಸ್ಸಿನ ಒತ್ತಡ ಕಡಿಮೆ ಆಗಿ ನಿರಾಳವಾಗಿ ಶಾಂತಿ ನೆಲೆಸುತ್ತದೆ. ಇಂದು ಜಗತ್ತಿನಲ್ಲಿ ಎಲ್ಲೆಲ್ಲೂ ಅಶಾಂತಿ, ಜಗಳ ಹೆಚ್ಚಾಗಿವೆ. ದಿನನಿತ್ಯ ಜಗಳವಾಡುತ್ತಿದ್ದ ಗಂಡ-ಹೆಂಡಿರು ಅಮೆರಿಕದ ಒಂದು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆಂದು ಬಂದಾಗ ನ್ಯಾಯಮೂರ್ತಿಗಳು 3 ತಿಂಗಳು ಯೋಗ-ಧ್ಯಾನ ಮಾಡಿ ಬಂದು ಹೇಳಿ ಎಂದರಂತೆ! ಆ ದಂಪತಿ ಧ್ಯಾನ ಮಾಡಿ 3 ತಿಂಗಳಲ್ಲಿ ಮನಶ್ಶಾಂತಿ ಕಂಡು- ‘ವಿಚ್ಛೇದನ ಬೇಡ, ಈಗ ನಾವು ಸುಖ-ಶಾಂತಿಯಿಂದ ಇದ್ದೇವೆ’ ಎಂದು ಬಂದು ಹೇಳಿದರಂತೆ. ಪೋಲೆಂಡಿನ ಶಾಲೆಗಳಲ್ಲಿ ಮಕ್ಕಳಿಗೆ ಮೊದಲು ಪ್ರಾಣಾಯಾಮ ಮಾಡಿಸಿ ನಂತರ ಪಾಠ ಹೇಳುತ್ತಾರೆ. ಇದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಜ್ಞಾಪಕಶಕ್ತಿ ಕೂಡ ಬೆಳೆಯುತ್ತದೆ ಎಂದು ಅವರು ಅರಿತಿದ್ದಾರೆ. ಹೊರಗಿನ ಪೂಜೆ ಸಾಂಸ್ಕೃತಿಕ ಬೆಳವಣಿಗೆಗೆ ಎಡೆಮಾಡಿಕೊಟ್ಟರೆ ಮೌನದಿಂದ ಮಾಡುವ ಧ್ಯಾನ ಅಂತರಂಗದ ಆತ್ಮೋನ್ನತಿಗೆ. ನೈತಿಕ ಮೌಲ್ಯಗಳು ನೆಲಕಚ್ಚಿ, ಅನಾರೋಗ್ಯದಿಂದ ನರಳುವ ಇಂದಿನ ಆಧುನಿಕ ಸಮಾಜ ಸ್ವಸ್ಥವಾಗಿ, ಸಮೃದ್ಧಿ, ಸುಖ, ಶಾಂತಿ ಕಾಣಬೇಕೆಂದರೆ ಪ್ರತಿಯೊಬ್ಬರೂ ಧರ್ವಿುಷ್ಟರಾಗಿ, ಧ್ಯಾನ ಯೋಗದಿಂದ ದೇಶ ಬಲಿಷ್ಠವಾಗಲು ಶ್ರದ್ಧೆಯಿಂದ ಶ್ರಮಪಡಬೇಕು.

Leave a Reply

Your email address will not be published. Required fields are marked *

Back To Top