Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ದೇವೇಗೌಡರು ವಿಶ್ವನಾಥರ ಕೈಹಿಡಿದಿದ್ದೇ ಎಲ್ಲದಕ್ಕೂ ಕಾರಣ!?

Friday, 07.07.2017, 12:21 PM       No Comments

ಮೈಸೂರು: ಅಸೆಂಬ್ಲಿ ಚುನಾವಣೆ ಮುನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳದಲ್ಲಿ ಒಂದಷ್ಟು ತಳಮಳ/ತಲ್ಲಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ನಿನ್ನೆ ಪಕ್ಷದ ಅಧಿನಾಯಕ ದೊಡ್ಡಗೌಡ್ರ ಕುಟುಂಬದ ಕುಡಿಯೊಂದು ಧಗಧಗನೆ ಪ್ರಜ್ವಲಿಸಿತ್ತು. ಅದನ್ನು ತಕ್ಷಣವೇ ಶಮನ ಮಾಡುವ ಪ್ರಕ್ರಿಯೆಯೂ ಜಾರಿಯಲ್ಲಿದೆ. ಆದರೆ ಇಷ್ಟಕ್ಕೂ ಪ್ರಜ್ವಲ್​ ರೇವಣ್ಣ ಹೀಗೆ ಕುಪಿತಗೊಳ್ಳಲು ಕಾರಣವಾದರು ಏನು ಎಂದು ನೋಡಿದಾಗ …

ಪ್ರಜ್ವಲ್ ರೇವಣ್ಣ ಸೂಟ್​ಕೇಸ್​ ಹೇಳಿಕೆಗೆ ದೊಡ್ಡಗೌಡ್ರ ಮಾತೇ ಕಾರಣ:

 

ಮೊನ್ನೆ, ಹುಣಸೂರು ಭಾಗದ ಹಿರಿಯ ಮುಖಂಡ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್ ಬಿಟ್ಟು ದೇವೇಗೌಡರ ಸಮ್ಮುಖದಲ್ಲಿ ತೆನೆ ಹೊತ್ತ ಸಂದರ್ಭದಲ್ಲಿ … ದೊಡ್ಡಗೌಡ್ರು ಸಹಜವಾಗಿಯೇ ಪಕ್ಷಕ್ಕೆ ಹೊಸಾದಗಿ ಸೇರ್ಪಡೆಯಾದ ಹಾಡು ಹಕ್ಕಿಗೆ ವಿಧಾನಸಭೆ ಚುನಾವಣಾ ಟಿಕೆಟ್ ನೀಡುವ ಮಾತನ್ನಾಡಿದರು. ಮತ್ತು ಈ ಬಗ್ಗೆ, ಮಂಗಳವಾರವಷ್ಟೇ ಬೆಂಗಳೂರಿನಲ್ಲಿ ಹೆಚ್.ಡಿ. ರೇವಣ್ಣ ನಿವಾಸಕ್ಕೆ ಭೇಟಿ ನೀಡಿ, ಹುಣಸೂರು ಅಭ್ಯರ್ಥಿಗಳ ಕುರಿತಂತೆ ಚರ್ಚೆ ನಡೆಸಿದ್ದರು.

ಹಿರಿಯ ಮುಖಂಡ ಎಚ್. ವಿಶ್ವನಾಥ್ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ. ಜಿ.ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಕೂಡಾ ಕ್ಷೇತ್ರದಲ್ಲಿ ಓಡಾಡ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಹೀಗಿರುವಾಗ ಪ್ರಜ್ವಲ್​ಗೆ ಟಿಕೆಟ್ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ ಎಂದು ದೇವೇಗೌಡರು ತಮ್ಮ ಹಿರಿಯ ಪುತ್ರನನ್ನು ಸಮಧಾನಪಡಿಸಿದ್ದರು. ಹುಣಸೂರಿನಲ್ಲಿ ಸ್ಪರ್ಧೆ ವಿಚಾರ ಕೈಬಿಡುವಂತೆ ಪ್ರಜ್ವಲ್ ರೇವಣ್ಣಗೆ ತಿಳಿಯಹೇಳಿದ್ದರು.

ಆದರೆ ಅದಾಗಲೇ ಪ್ರಜ್ವಲ್ ಅವರು ಆಂತರಿಕ ಸಮೀಕ್ಷೆಯೊಂದನ್ನು ಮಾಡಿಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದರು. ಕಾರ್ಯಕರ್ತರ ಅಭಿಪ್ರಾಯ ಪ್ರಜ್ವಲ್ ಪರವಾಗಿತ್ತು.

ಆದಾಗ್ಯೂ, ಹುಣಸೂರು ಟಿಕೆಟ್ ತಮಗೆ ಸಿಗೋಲ್ಲ ಅನ್ನೋದು ದೇವೇಗೌಡರ ಮಾತಿನ ವರಸೆಯಿಂದ ಅರಿತ ಪ್ರಜ್ವಲ್​ ನಿನ್ನೆ ಹುಣಸೂರಿನಲ್ಲಿ … ಧಗಧಗನೆ ಪ್ರಜ್ವಲಿಸಿದ್ದಾರೆ.

Leave a Reply

Your email address will not be published. Required fields are marked *

Back To Top