Friday, 21st September 2018  

Vijayavani

ಮತ್ತೆ ದೇವಸ್ಥಾನಕ್ಕೆ ಹೊರಟ ಸಿಎಂ - ಇಂದು ಸಂಜೆ ಶೃಂಗೇರಿ ಶಾರದಾಂಬೆಯ ದರ್ಶನ - ನಂತರ ಜಗದ್ಗುರಗಳ ಭೇಟಿ        ಕೊಡಗಿನಲ್ಲಿ ತಹಸೀಲ್ದಾರ್ ಮೇಲೆ‌ ಹಲ್ಲೆ ಪ್ರಕರಣ - ಪ್ರಕರಣ ಸಂಬಂಧ 12 ಆರೋಪಿಗಳ ಬಂಧನ        ಸಿಎಂ ದಂಗೆ ಹೇಳಿಕೆಗೆ ಆಕ್ರೋಶ - ಇಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ದೂರು - ಬಿಎಸ್​​ವೈ ನಿವಾಸಕ್ಕೆ ಬಿಗಿ ಭದ್ರತೆ        ಸಂಪುಟ ಸಭೆಯಲ್ಲಿ ಸಿಎಂ ದಂಗೆ ಹೇಳಿಕೆ ಪ್ರಸ್ತಾಪ - ಎಚ್​ಡಿಕೆ ಮಾತಿಗೆ ಹಿರಿಯ ಸಚಿವರಿಂದಲೇ ಆಕ್ಷೇಪ        ಎಸ್. ಗಿರೀಶ್​​ರಿಂದ ಆಪರೇಷನ್ ಕ್ಲೀನ್ - ಸಿಸಿಬಿ ಎಸ್ಪಿಯಾಗಿ ಬಂದ 24 ಗಂಟೆಯಲ್ಲೇ 5 ಸಿಬ್ಬಂದಿ ಎತ್ತಂಗಡಿ        ಬಾಗಲಕೋಟೆಯ ಬನಹಟ್ಟಿಯಲ್ಲೊಬ್ಬ ಪೋಲಿ ಶಿಕ್ಷಕ - ವಿದ್ಯಾರ್ಥಿನಿ ಮೊಬೈಲ್​​​ಗೆ ಐ ಲವ್ ಯೂ ಮೆಸೇಜ್       
Breaking News

ಈ ಬಾರಿ ಕುಮಾರಸ್ವಾಮಿಯೇ ಸೂಟ್​ಕೇಸ್ ಬಾಂಬ್ ಹಾಕಿದ್ರು!

Monday, 10.07.2017, 4:56 PM       No Comments

ಬೆಂಗಳೂರು: ಈ ಮಾತಿನಲ್ಲಿ ಎಷ್ಟು ನಿಜಾಂಶವಿದೆಯೋ ತಿಳಿಯದು… ಆದರೂ. JDS ರಾಜ್ಯಾಧ್ಯಕ್ಷ ಎಚ್​. ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ ಪಕ್ಷದೊಳಗಿನ ಸೂಟ್​ಕೇಸ್​ ಲೇವಾದೇವಿಗೆ ಸಂಬಂಧಿಸಿದಂತೆ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ.

‘ಜೆಡಿಎಸ್​​​ನಲ್ಲಿ ಸೂಟ್ ಕೇಸ್ ಪಡೆಯುತ್ತಿದ್ದದ್ದು ನಿಜ. ಅವರೆಲ್ಲಾ ಮುಂದಿನ ಸಾಲಿನಲ್ಲಿ ಕೂರುತ್ತಾ ಇದ್ದದ್ದೂ ನಿಜ. ಆದರೆ, ಅವರೆಲ್ಲ ಪಕ್ಷ ಬಿಟ್ಟು ಹೊರಗಡೆ ಹೋಗಿದ್ದಾರೆ ಎಂದು ಮಗುಮ್ಮಾಗಿ ಹೇಳಿದ್ದಾರೆ.

ತನ್ಮೂಲಕ ಅಣ್ಣ ರೇವಣ್ಣ ಪುತ್ರ ಪ್ರಜ್ವಲ್ ಅವರ ಸೂಟ್ ಕೇಸ್ ಹೇಳಿಕೆಗೆ ಇಂಬು ಕೊಟ್ಟಿದ್ದಾರೆ. ಬಹುಶಃ ಪಕ್ಷ ಬಿಟ್ಟು ಹೋದ ಸೂಟ್​ಕೇಸ್​ ನಾಯಕರನ್ನು ಉದ್ದೇಶಿಸಿ ಪ್ರಜ್ವಲ್​ ಹಾಗೆ ಹೇಳಿರಬಹುದು ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಮಾಗಡಿ ಬಾಲಕೃಷ್ಣ ತೀಕ್ಷ್ಣ ಪ್ರತಿಕ್ರಿಯೆ

ನೋಡಿ ಜೆಡಿಎಸ್​ ಪಕ್ಷವೇನು ದೊಡ್ಡ ರಾಷ್ಟ್ರೀಯ ಪಕ್ಷವಲ್ಲ. ಅದು ‘ಒಂದು’ ಸಾಂಸಾರಿಕ ಪಕ್ಷ. ಹಾಗಾಗಿ ಅಲ್ಲಿ ಸೂಟ್​ಕೇಸ್​ ಸಂಸ್ಕೃತಿ ಇತ್ತು. ಪಕ್ಷದಲ್ಲಿ ಯಾರಾದರು ಸೂಟ್​ಕೇಸ್​ ಪಡೆದರೆ ಅದು ದೊಡ್ಡವರ ಬಳಿಯೇ ಹೋಗುತ್ತಿತ್ತು. ಏಕೆಂದರೆ ಬಿ ಫಾರಂ ಅವರ ಬಳಿಯೇ ಇರುತ್ತಿತ್ತು. ನಮಗೆಲ್ಲಾ ಖಾಲಿ ಖಾಲಿ… ಪೇಪರ್​ ಕೊಡುತ್ತಿದ್ದರು ಎಂದು ಮಾಗಡಿ ಶಾಸಕ ಎಚ್​. ಸಿ ಬಾಲಕೃಷ್ಣ ಅವರು ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top