Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಕಬ್ಬಿನ ಬಾಕಿ ನೀಡುವಂತೆ ರೈತರ ಆಗ್ರಹ

Friday, 13.07.2018, 3:26 AM       No Comments

ಕಟಕೋಳ: ಸಮೀಪದ ಖಾನಪೇಠ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಕಳೆದ ಸಾಲಿನ ರೈತರ ಕಬ್ಬಿನ ಬಾಕಿ 305 ರೂ.ಗಳನ್ನು ನೀಡುವಂತೆ ಆಗ್ರಹಿಸಿ, ಗುರುವಾರ ಮಹದಾಯಿ ಹೋರಾಟ ವೇದಿಕೆ ಪದಾಧಿಕಾರಿಗಳು, ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ನಿಗದಿಗೊಳಿಸಿದ ಎಫ್.ಆರ್.ಪಿ ಪ್ರಕಾರ ಪ್ರತಿ ಟನ್‌ಗೆ 3,005 ರೂ. ನೀಡಬೇಕಿತ್ತು. ಆದರೆ, ಈಗಾಗಲೇ ಸದರಿ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ಯಾರಿ ಶುಗರ್ಸ್‌ ಕಂಪನಿ ಅವರು ಲೀಜ್ ಪಡೆದುಕೊಂಡು ಕಾರ್ಖಾನೆ ನಡೆಸುತ್ತಿದ್ದಾರೆ.

ಪ್ಯಾರಿ ಶುಗರ್ಸ್‌ ಅವರು ರೈತರಿಗೆ 2,700 ರೂ. ನೀಡಿದ್ದಾರೆ. ಆದರೆ, ಬಾಕಿ ಉಳಿದ 305 ರೂ.ಗಳನ್ನು ನೀಡುವಂತೆ ಕಾರ್ಖಾನೆ ಎಂ.ಡಿ. ಸೌಂದರ್ಯರಾಜನ್ ಅವರಿಗೆ ಹಲವು ಬಾರಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಮಹದಾಯಿ ಹೋರಾಟ ವೇದಿಕೆ ಮುಖಂಡರಾದ ಶಂಕರಗೌಡಾ ಪಾಟೀಲ, ವೆಂಕಟೇಶ ಹಿರೇರಡ್ಡಿ, ಆನಂದ ಜಗತಾಪ, ಇತರರು ಇದ್ದರು. ಹಲವು ರೈತರು ಸಕ್ಕರೆ ಕಾರ್ಖಾನೆ ಮುಂದಿನ ಗೇಟ್‌ದಲ್ಲಿ ಬಳಿ ಟೆಂಟ್ ಹಾಕಿ ಧರಣಿ ಪ್ರಾರಂಭಿಸಿದ್ದಾರೆ.

Leave a Reply

Your email address will not be published. Required fields are marked *

Back To Top