Friday, 20th April 2018  

Vijayavani

ಕಾಂಗ್ರೆಸ್​​​​​​​ನಿಂದ ಬಿಜೆಪಿಯತ್ತ ನಾಯಕರ ಜಿಗಿತ - ಎನ್​​.ವೈ.ಗೋಪಾಲಕೃಷ್ಣ ಬಿಜೆಪಿಗೆ ಸೇರ್ಪಡೆ - ಪಕ್ಷಕ್ಕೆ ಬರಮಾಡಿಕೊಂಡ ಬಿಎಸ್​ವೈ        ಶುಭ ಶುಕ್ರವಾರದಂದು ನಾಮಪತ್ರ ಪರ್ವ - ಮೈಸೂರಿನಲ್ಲಿ ಸಿಎಂರಿಂದ ಉಮೇದುದಾರಿಕೆ - ರಾಮನಗರ, ಚನ್ನಪಟ್ಟಣದಿಂದ ಎಚ್​ಡಿಕೆ ನಾಮಿನೇಷನ್​        ಮತಕೇಳಲು ಹೋದ ನಾಯಕರಿಗ ತರಾಟೆ - ಕೊಪ್ಪಳದಲ್ಲಿ ಶಿವರಾಜ ತಂಗಡಗಿಗೆ ಜನರ ಕ್ಲಾಸ್ - ಮಾನ್ವಿಯಲ್ಲಿ ಹಂಪಯ್ಯಗೆ ನೀರಿಳಿಸಿದ ಮತದಾರ        ರಾತ್ರೋರಾತ್ರಿ ಕೋಟಿ ಕೋಟಿ ಸಾಗಾಟ - ಅನುಮಾನಾಸ್ಪದವಾಗಿ ಬ್ಯಾಂಕ್​​​ ವಾಹನದ ಓಡಾಟ - ಮಂಡ್ಯ ಪೊಲೀಸರಿಂದ 20 ಕೋಟಿ ಹಣ ಸೀಜ್​​​​        ದಶಕಗಳಿಂದ ಆ ಹೆಸರಿನವ್ರದ್ದೇ ಪಾರುಪತ್ಯ - ಗೆದ್ದವರಿಗೆ ಶಕ್ತಿಸೌಧದಲ್ಲೂ ಆತಿಥ್ಯ - ವಿಜಯಪುರದಲ್ಲಿ ಪಾಟೀಲರದ್ದೇ ಅಧಿಪತ್ಯ        ಕೊನೆಗೂ ಮೌನ ಮುರಿದ ಪವರ್​ಸ್ಟಾರ್​ - ನನ್ನ ತಾಯಿ ಮರ್ಯಾದೆ ಕಾಪಾಡದಿದ್ರೆ ನಾನು ವೇಸ್ಟ್​ - ಬದುಕಿದ್ದೂ ಸತ್ತಂತೆ ಎಂದು ಪವನ್ ಟ್ವೀಟ್​​       
Breaking News

ಇನ್ನು ಮುಂದೆ ಹಿಂಬದಿ ಸವಾರರಿಗೆ ಅವಕಾಶವಿಲ್ಲ!

Saturday, 21.10.2017, 3:22 PM       No Comments

ಬೆಂಗಳೂರು: 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು. ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗಲು ಅವಕಾಶ ನೀಡದಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಈ ಹೊಸ ನಿಯಮವು ಈಗಾಗಲೇ ರಸ್ತೆಯಲ್ಲಿ ಓಡಾಡುತ್ತಿರುವ ದ್ವಿಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲ. ಆದರೆ ಹೊಸದಾಗಿ ಮಾರಾಟವಾಗುವ 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ. ಬೈಕ್​ ತಯಾರಕರು ಕೇವಲ ಓರ್ವ ವ್ಯಕ್ತಿ ಮಾತ್ರ ಕುಳಿತುಕೊಳ್ಳುವಂತೆ ಸೀಟಿನ ವ್ಯವಸ್ಥೆ ಮಾಡಬೇಕಿದೆ. ಗ್ರಾಹಕ ಬೈಕ್​ ಕೊಂಡ ನಂತರ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ.

ಹಿಂಬದಿ ಸವಾರರ ಹಿತದೃಷ್ಟಿಯಿಂದ ಈ ಹೊಸ ನಿಮಯವನ್ನು ಜಾರಿಗೆ ತರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ರಾಜ್ಯ ಸರ್ಕಾರ ಸಹ ಈ ಸಂಬಂಧ ಹೈಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದು, ಇನ್ನೊಂದು ವಾರದಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್​ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿತ್ತು. ಈ ಪ್ರಕರಣದ ಸಂಬಂಧ ರಾಜ್ಯ ಸರ್ಕಾರ ಕೋರ್ಟ್​ಗೆ ವಿವರಣೆ ನೀಡಿದ್ದು, 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರನ್ನು ನಿಷೇಧಿಸಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವುದಾಗಿ ತಿಳಿಸಿದೆ ಎಂದು ಸಾರಿಗೆ ಸಚಿವ ಎಚ್​ಎಂ ರೇವಣ್ಣ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top