Thursday, 18th January 2018  

Vijayavani

ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ- ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್        ಯುಪಿ ಪೊಲೀಸರಿಂದ ನಡೀತು ಅಚಾತುರ್ಯ- 8 ವರ್ಷದ ಹುಡುಗನ ಎನ್​ಕೌಂಟರ್​- ಮಿಸ್​ ಫೈರ್​ ಆಯ್ತೆಂದು ಜಾರಿಕೆಯ ಉತ್ತರ        ಜಯಲಲಿತಾ ಸತ್ತಿದ್ದು ಡಿ.5ಕ್ಕಲ್ಲ ನಾಲ್ಕಕ್ಕೆ- ಶಶಿಕಲಾ ಸಹೋದರನಿಂದ ಹೊಸ ಬಾಂಬ್​- ಅಮ್ಮ ಸತ್ತು ವರ್ಷ ಕಳೆದ್ರೂ ನಿಂತಿಲ್ಲ ಊಹಾಪೋಹ        ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು- ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ- ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ- ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು- ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಚಿಕ್ಕಬಳ್ಳಾಪುರದ ಮೆಗಾ ಡೈರಿಗೆ ಗ್ರಹಣ, ರೈತರು ಹೈರಾಣ

Thursday, 28.09.2017, 9:28 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಬುಧವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. BBMP ಮೇಯರ್ ಎಲೆಕ್ಷನ್​​ಗೆ ಕೌಂಟ್​​ಡೌನ್​​​ – ನಾಮಪತ್ರ ಸಲ್ಲಿಕೆಗೆ 9.30ರ ವರೆಗೆ ಅವಕಾಶ – ಮಧ್ಯಾಹ್ನದ ವೇಳೆಗೆ ರಿಸಲ್ಟ್​​

2. ಬಿಬಿಎಂಪಿ ಗದ್ದುಗೆಗೆ ಹೆಚ್ಚಾಯ್ತು ಪೈಪೋಟಿ – ಜೆಡಿಎಸ್​ ಅಭ್ಯರ್ಥಿಯಿಂದ ದೇವರ ಮೊರೆ – ಯಾರಾಗ್ತಾರೋ ಬೆಂಗಳೂರಿನ ಪ್ರಥಮ ಪ್ರಜೆ..?

3. ತಂಪು ಪಾನೀಯ ಆಸಿಡ್​ ಕುಡಿದ ಮಕ್ಕಳು – ಹುಟ್ಟುಹಬ್ಬದ ದಿನವೇ ಇಬ್ಬರು ಬಾಲಕರ ಸಾವು – ಬೆಂಗಳೂರಿನ ಮಾರ್ಕೆಟ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ

4. ಬಳ್ಳಾರಿಯಲ್ಲಿ ಕಳಪೆ ಬೀಜ ವಿತರಣೆ ವಿಚಾರ – ತನಿಖೆಗೆ ಆದೇಶಿಸಿದ ಕೃಷಿ ಸಚಿವ – ಇದು ದಿಗ್ವಿಜಯ ನ್ಯೂಸ್​ ಇಂಪ್ಯಾಕ್ಟ್​​


5. ಚಿಕ್ಕಬಳ್ಳಾಪುರದ ಮೆಗಾ ಡೈರಿಗೆ ಗ್ರಹಣ, ರೈತರು ಹೈರಾಣು

ಚಿಕ್ಕಬಳ್ಳಾಪುರ: ದಕ್ಷಿಣ ಭಾರತದಲ್ಲೇ ಪ್ರಥಮ ಭಾರಿಗೆ ಅತ್ಯಾಧುನಿಕ ಮೆಗಾ ಡೈರಿ ನಿರ್ಮಾಣಕ್ಕೆ ಮುಂದಾದ ಕೋಚಿಮುಲ್, 150 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರದ ಬಳಿ ಮೆಗಾ ಡೈರಿ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆದರೆ ಚಾಲನೆ ನೀಡಿ ನಾಲ್ಕು ವರ್ಷಗಳು ಕಳೆದರೂ ನಿರ್ಮಾಣ ಕಾರ್ಯ ಇನ್ನು ಶುರುವಾಗಿಲ್ಲ.

ಬಿಜೆಪಿಯ ಅವಧಿಯಲ್ಲಿ ರಾಜ್ಯ ಸರ್ಕಾರ 4 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ, ಇನ್ನೂ ಆರು ಕೋಟಿ ರೂಪಾಯಿ ಹಣ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು.

ಆದರೆ, ಡೈರಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ ನಾಲ್ಕು ವರ್ಷಗಳು ಕಳೆದರೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಯಾ ಪೈಸೆ ಅನುದಾನ ಬಿಡುಗಡೆ ಮಾಡದೆ ಡೈರಿ ನಿರ್ಮಾಣ ಕಾರ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕೋಚಿಮುಲ್ ನಿರ್ದೇಶಕರು ಆರೋಪಿಸಿದ್ದಾರೆ.

ಕೋಲಾರ ಚಿಕ್ಕಬಳ್ಳಾಫುರ ಅವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಆಗುತ್ತಿರುವ ಕಾರಣ ನೂತನ ಹಾಲಿನ ಉತ್ಪನ್ನಗಳ ತಯಾರಿಕೆಗೆ ಮುಂದಾದ ಕೋಲಾರ ಚಿಕ್ಕಬಳ್ಳಾಫುರ ಸಹಕಾರಿ ಹಾಲು ಮಹಾ ಮಂಡಳಿ, ದಕ್ಷಿಣ ಭಾರತದಲ್ಲೆ ಪ್ರಥಮ ಭಾರಿಗೆ 150 ಕೋಟಿ ರೂಪಾಯಿ ವೆಚ್ಚದಲ್ಲೆ ಅತ್ಯಾಧುನಿಕ ಮಾದರಿಯ ಮೆಗಾಡೈರಿ ನಿರ್ಮಾಣಕ್ಕೆ ಮುಂದಾಗಿದೆ.

ಚಿಕ್ಕಬಳ್ಳಾಪುರ ತಾಲೂಕು ನಂದಿ ಕ್ರಾಸ್ ಬಳಿ 16 ಎಕರೆ ವಿಸ್ತಾರದಲ್ಲಿ ಡೈರಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಡೈರಿ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಕೊಡುವುದಾಗಿ ತಿಳಿಸಿದ ರಾಜ್ಯ ಸರ್ಕಾರ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 4 ಕೋಟಿ ರೂಪಾಯಿ ಹಣ ನೀಡಿ ಕೈ ತೊಳೆದುಕೊಂಡಿದೆ.

ಇನ್ನೂಳಿದ 6 ಕೋಟಿ ಅನುದಾನದ ಜೊತೆ 10 ಕೋಟಿ ಹೆಚ್ಚುವರಿ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಎಷ್ಟೇ ಬಾರಿ ಮನವಿ ಮಾಡಿದರೂ ಮುಖ್ಯಮಂತ್ರಿಗಳು ಮಾತ್ರ ತಲೆ ಕೆಡಿಸಿಕೊಳ್ತಿಲ್ಲ ಎನ್ನುತ್ತಾರೆ.

ಮೆಗಾ ಡೈರಿ ನಿರ್ಮಾಣದ ಉಸ್ತುವಾರಿ ಕೋಚಿಮುಲ್ ನಿರ್ದೇಶಕ ನಾಗರಾಜ್ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ, ಹೀಗಾಗಿ ಮೆಗಾ ಡೈರಿ ಕಾಮಗಾರಿ ಜೆಡಿಎಸ್ ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಕಾರಣ, ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ, ಇನ್ನೂಳಿದ ಅನುದಾನವಾಗಲಿ ಇಲ್ಲಾ ಹೆಚ್ಚುವರಿ ಅನುದಾನವಾಗಲಿ ನೀಡ್ತಿಲ್ಲವಂತೆ.

ಒಂದಲ್ಲ ಎರಡಲ್ಲ ನಾಲ್ಕೈದು ಭಾರಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರೂ ಡೈರಿಯತ್ತ ಮುಖ ಮಾಡ್ತಿಲ್ಲ. ಇನ್ನೂ ಕೋಲಾರ ಚಿಕ್ಕಬಳ್ಳಾಫುರ ಜಿಲ್ಲೆಯ ಶಾಸಕರ ನಿಯೋಗ ಕರೆದುಕೊಂಡು ಹೊದರೂ ಡೈರಿ ನಿರ್ಮಾಣ ಅನುದಾನಕ್ಕೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಹಾಲು ಒಕ್ಕೂಟದ ಮಹಾ ಮಂಡಳಿ ಆರೋಪಿಸಿದ್ದಾರೆ.

ಇತ್ತ ಆರೋಪಕ್ಕೆ ತಿರುಗೇಟು ನೀಡಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್, ರಾಜ್ಯ ಸರ್ಕಾರ ನೇರವಾಗಿ ಹಣ ನೀಡದಿದ್ದರೂ ಬ್ಯಾಂಕ್ ನಲ್ಲೆ ಸಾಲ ತೆಗೆದುಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡಿದೆ ಅಂತಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top