Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಸಂಸ್ಕಾರ ನೀಡುವುದು ಗುರುಪೀಠಗಳ ಕರ್ತವ್ಯ

Tuesday, 12.06.2018, 7:01 PM       No Comments

ಅಜ್ಜಂಪುರ: ಬದುಕಿನ ಉನ್ನತಿಗೆ ಧರ್ಮವೇ ಮೂಲ. ಧರ್ಮದ ಆದರ್ಶ ಮೌಲ್ಯಗಳನ್ನು ಪಾಲಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.  ಚಿಕ್ಕಾನವಂಗಲ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ದೊಡ್ಡ ಮಾತುಗಳನ್ನು ಆಡುವುದರಿಂದ ಪ್ರಬುದ್ಧನಾಗುವುದಿಲ್ಲ. ಸಣ್ಣ ಸಣ್ಣ ವಿಚಾರಗಳನ್ನೂ ಅರಿತು ಆಚರಿಸಿ ನಡೆದಾಗ ಜೀವನದಲ್ಲಿ ಅಭಿವೃದ್ಧಿ ಸಾಧ್ಯ. ಕೈಲಾಸಕ್ಕಿಂತ ಕಾಯಕ, ಧರ್ಮಕ್ಕಿಂತ ದಯೆ, ಸನ್ಮಾನಕ್ಕಿಂತ ಸಂಸ್ಕಾರ ಮುಖ್ಯ ಎಂದು ವೀರಶೈವ ಧರ್ಮ ಸಾರಿದೆ. ವಿಶ್ವ ಬಂಧುತ್ವದ ತತ್ವ ಸಿದ್ಧಾಂತ ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ದರ್ಶನದ ಚಿಂತನೆಗಳು ಅವಶ್ಯಕ ಎಂದು ಹೇಳಿದರು.

ಸ್ವ ಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಎಲ್ಲೆಡೆ ಬೆಳೆಯಬೇಕು. ಧರ್ಮ, ಸಂಸ್ಕೃತಿ, ಪರಂಪರೆ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ದೇಶ-ಧರ್ಮದ ಬಗ್ಗೆ ಅಭಿಮಾನವಿರಲಿ. ಎಲ್ಲ ಸಮುದಾಯ ಪರಸ್ಪರ ಸಾಮರಸ್ಯದಿಂದ ಬಾಳಿದಾಗ ಆರೋಗ್ಯಪೂರ್ಣ ಸಮಾಜ ನಿರ್ವಣವಾಗುತ್ತದೆ ಎಂದರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಒಂದು ಆದರ್ಶದ ಗುರಿ ಮತ್ತು ಗುರುವನ್ನು ಆಶ್ರಯಿಸಿ ಬಾಳಬೇಕು. ಆಧುನಿಕತೆ ಮತ್ತು ವೈಚಾರಿಕತೆ ಸಂಘರ್ಷದಲ್ಲಿ ಧರ್ಮ, ಸಂಸ್ಕೃತಿ ನಾಶಗೊಳ್ಳಬಾರದು ಎಂದು ಎಚ್ಚರಿಸಿದರು.

ತಾವರೆಕೆರೆ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ವಚರಣೆಯಿಂದ ಅಂಹಕಾರ ಅಳಿದು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಕಷ್ಟ ಬಂದಾಗ ಮಾತ್ರ ದೇವರು, ಧರ್ಮವನ್ನು ನೆನೆಯಬೇಡಿ. ನಿರಂತರವಾಗಿ ಧರ್ವಚಾರಣೆ ಮಾಡಿದಾಗ ಉತ್ತಮ ಸಮಾಜ ನಿರ್ವಣವಾಗುತ್ತದೆ ಎಂದು ತಿಳಿಸಿದರು. ನಂದೀಪುರದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಎಪಿಎಂಸಿ ಸದಸ್ಯ ಕುಮಾರ್, ತಾಪಂ ಮಾಜಿ ಸದಸ್ಯ ವಿರುಪಾಕ್ಷಪ್ಪ, ಹಿರಿಯರಾದ ಹಾಲಯ್ಯ, ಮಲ್ಲಪ್ಪ, ಓಂಕಾರಪ್ಪ, ಚೆನ್ನಬಸಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *

Back To Top