Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಶ್ರೀಶಾಂತ್ ದೇಹದಾರ್ಢ್ಯ ಪಟು!

Tuesday, 10.07.2018, 3:05 AM       No Comments

ಬೆಂಗಳೂರು: ಭಾರತ ತಂಡದ ಮಾಜಿ ವೇಗಿ ಹಾಗೂ ನಿಷೇಧಿತ ಕ್ರಿಕೆಟಿಗ ಎಸ್. ಶ್ರೀಶಾಂತ್​ಗೆ ಹಿಂದೊಮ್ಮೆ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಐಪಿಎಲ್​ನಲ್ಲಿ ಕಪಾಳ ಮೋಕ್ಷ ಮಾಡಿದ್ದ ಘಟನೆ ನೆನಪಿರಬಹುದು. ಆದರೆ ಅದೇ ಹರ್ಭಜನ್​ಗೆ ಈಗ ಶ್ರೀಶಾಂತ್​ರನ್ನು ಮುಟ್ಟುವ ಧೈರ್ಯ ಬಾರದು ಎಂದು ಟ್ವೀಟಿಗರು ಕಾಲೆಳೆದಿದ್ದಾರೆ. ಇದಕ್ಕೆ ಕಾರಣ ಶ್ರೀಶಾಂತ್ ಅವರ ‘ಹಲ್ಕ್’ ಮಾದರಿಯ ದೇಹದಾರ್ಢ್ಯ! ಇತ್ತೀಚೆಗೆ ಸಂಪೂರ್ಣ ಸಿನಿಮಾ ಮತ್ತು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ 34 ವರ್ಷದ ಶ್ರೀಶಾಂತ್ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಪೋಟೋವನ್ನು ಗಮನಿಸಿದ ಅನೇಕರು ಹರ್ಭಜನ್​ಗೆ ಟಾಂಗ್ ನೀಡಿದ್ದಾರೆ.

‘ಈಗ ಶ್ರೀಶಾಂತ್​ರನ್ನು ನೋಡಿ. ಹರ್ಭಜನ್ ಸಿಂಗ್ ಇನ್ನೆಂದಿಗೂ ಶ್ರೀ ಜತೆ ಕ್ರಿಕೆಟ್ ಆಡಲು ಬರುವ ಯೋಚನೆಯೇ ಮಾಡಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ‘ಈಗ ಶ್ರೀಶಾಂತ್ ಕೈಗೆ ಹರ್ಭಜನ್ ಸಿಗಬೇಕಿತ್ತು’, ‘ಶ್ರೀಶಾಂತ್ ನೋಡಲು ಹಳೆ ಹಿಂದಿ ಸಿನಿಮಾ ಸೂರ್ಯವಂಶಿಯ ಸಲ್ಮಾನ್​ಖಾನ್​ರಂತೆ ಕಾಣಿಸುತ್ತಿದ್ದಾರೆ’ ಎಂಬಿತ್ಯಾದಿ ಟ್ವೀಟ್​ಗಳು ಬಂದಿವೆ. ಶ್ರೀಶಾಂತ್ ‘ಕೆಂಪೇಗೌಡ-2’ ಕನ್ನಡ ಸಿನಿಮಾಕ್ಕಾಗಿ ಈ ರೀತಿ ಜಿಮ್ ವರ್ಕ್​ಔಟ್ ಮಾಡುತ್ತಿದ್ದು, ಸದ್ಯದಲ್ಲೇ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸಿದ್ಧತೆಯಲ್ಲೂ ಇದ್ದಾರೆ ಎನ್ನಲಾಗಿದೆ. ಏಜೆನ್ಸೀಸ್

Leave a Reply

Your email address will not be published. Required fields are marked *

Back To Top