Monday, 19th February 2018  

Vijayavani

ಶ್ರವಣಬೆಳಗೊಳದ ಮಹಾಮಜ್ಜನದಲ್ಲಿ ಮೋದಿ - ಮೆಟ್ಟಿಲುಗಳ, ಬಾಹುಬಲಿ ಆಸ್ಪತ್ರೆ ಉದ್ಘಾಟನೆ - ಚಾವುಂಡರಾಯ ವೇದಿಕೆಯಲ್ಲಿ ಭಾಷಣ.        ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಕ್ಷಣಗಣನೆ - ಸಿಎಂ ತವರಲ್ಲಿ ಅಬ್ಬರಿಸಲಿದ್ದಾರೆ ಮೋದಿ - ಸಿದ್ದರಾಮಯ್ಯಗೆ ಟಾಂಗ್ ಕೊಡ್ತಾರಾ ಪ್ರಧಾನಿ?        ಮೋದಿ ಯಾತ್ರೆಗೆ ಬೆದರಿದ್ರಾ ಸಿದ್ದರಾಮಯ್ಯ - ಪ್ರಧಾನಿ ಪ್ರವಾಸದ ವೇಳೆಯೇ ರೌಂಡ್ಸ್ - ಜನರ ಸಮಸ್ಯೆ ಆಲಿಸಿದ ಸಿಎಂ.        ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಮಹಮ್ಮದ್‌ ವಿರುದ್ಧ ಸೆಕ್ಷನ್ 307 ಕೇಸ್ ದಾಖಲು - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ.        ಕೆ.ಆರ್‌.ಆಸ್ಪತ್ರೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಪಾರ್ಥಿವ ಶರೀರ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ.       
Breaking News

ದಕ್ಷಿಣ ಆಪ್ರಿಕಾಗೆ 275 ರನ್‌ ಗುರಿ ನೀಡಿದ ಕೊಹ್ಲಿ ಪಡೆ

Tuesday, 13.02.2018, 8:19 PM       No Comments

ಪೋರ್ಟ್ ಎಲಿಜಬೆತ್: ಪ್ರವಾಸಿ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ 5 ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಆರಂಭಿಸಿದ್ದ ಭಾರತ ದಕ್ಷಿಣ ಆಫ್ರಿಕಾಗೆ 275 ರನ್‌ ಗುರಿಯನ್ನು ನೀಡಿದೆ.

ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್‌ ಆರಂಭಿಸಿದ್ದ ಭಾರತ 7 ವಿಕೆಟ್‌ ನಷ್ಟಕ್ಕೆ 274 ರನ್‌ಗಳನ್ನು ಗಳಿಸಿದೆ.

ಟೀಂ ಇಂಡಿಯಾ ಪರ ಶಿಖರ್‌ ಧವನ್‌ 34, ರೋಹಿತ್‌ ಶರ್ಮಾ 115, ವಿರಾಟ್‌ ಕೊಹ್ಲಿ 36, ರಹಾನೆ 8, ಶ್ರೇಯಸ್‌ ಐಯ್ಯರ್‌ 30, ಪಾಂಡ್ಯಾ 0, ಎಂ ಎಸ್‌ ಧೋನಿ 13 ರನ್‌ ಗಳಿಸಿದ್ದರೆ ಭುವನೇಶ್ವರ್‌ ಕುಮಾರ್‌ 19 ಮತ್ತು ಕುಲದೀಪ್‌ ಯಾದವ್‌ 2 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ದಕ್ಷಿಣ ಆಫ್ರಿಕ ಪರ ರಬಡ 1, ಎನ್‌ಜಿಡಿ 4, ಡುಮಿನಿ 1, ಮಾರ್ಕೆಲ್‌ ಮತ್ತು ಕ್ಲಾಸೆನ್‌ 1 ವಿಕೆಟ್‌ ಕಬಳಿಸಿದರು.

6 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 3-1 ಅಂತರದಿಂದ ಮುನ್ನಡೆ ಸಾಧಿಸಿದ್ದು,ಈ ಪಂದ್ಯವನ್ನು ಗೆದ್ದರೆ ಸರಣಿ ಭಾರತದ ವಿರಾಟ್ ಕೊಹ್ಲಿ ಪಡೆಯ ಕೈವಶವಾಗಲಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top