Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಧರ್ಮ ವಿಭಜನೆಗೆ ಸೋನಿಯಾ ಸೂಚನೆ?

Saturday, 12.05.2018, 3:05 AM       No Comments

ಬೆಂಗಳೂರು: ಲಿಂಗಾಯತ ವೀರಶೈವ ಧರ್ಮ ಇಬ್ಭಾಗ ಯತ್ನದ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಸೆ ಹಾಗೂ ಕ್ರೖೆಸ್ತ-ಮುಸ್ಲಿಂ ಸಂಘಟನೆಗಳ ಸಹಮತ-ಸಹಕಾರವಿತ್ತೇ? ಧರ್ಮ ವಿಭಜನೆಯ ಹೋರಾಟದ ಮುಂಚೂಣಿಯಲ್ಲಿದ್ದ ಸಚಿವ ಎಂ.ಬಿ.ಪಾಟೀಲ್, ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಗೆ ಬರೆದಿದ್ದರೆಂಬ ಪತ್ರವೊಂದು ಬಹಿರಂಗವಾಗಿರುವುದು ಇಂಥದ್ದೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್​ನ ಸಂಘಟನೆಗಳ ಅಭಿಪ್ರಾಯದಂತೆ ಪ್ರತ್ಯೇಕ ಧರ್ಮ ಹೋರಾಟ ಆರಂಭವಾಗಿತ್ತು. ಇದಕ್ಕೆ ಸೋನಿಯಾ ಆದೇಶವಿತ್ತೆಂಬ ಅಂಶಗಳು ಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ ಇದು ನಕಲಿ ಪತ್ರ ಎಂದು ಆರೋಪಿಸಿ ಸಚಿವ ಎಂ.ಬಿ.ಪಾಟೀಲ್ ದೂರು ನೀಡಿದ್ದಾರೆ.


ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಪ್ರಮುಖ ವಿಷಯಗಳ ಲ್ಲೊಂದಾದ ವೀರಶೈವ-ಲಿಂಗಾಯತ ಧರ್ಮ ವಿವಾದಕ್ಕೆ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮ ಸಂಘಟನೆಗಳ ನಂಟು ಬಯಲಾಗಿದೆ. ಧರ್ಮ ವಿಭಜನೆ ಹೋರಾಟದ ಮುಂಚೂಣಿಯಲ್ಲಿದ್ದ ಸಚಿವ ಎಂ.ಬಿ.ಪಾಟೀಲ್ ಅವರು ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಈ ವಿಚಾರಗಳು ಪ್ರಸ್ತಾಪವಾಗಿವೆ.

ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್​ನ ಅಣತಿಯಂತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಕಾಂಗ್ರೆಸ್ ಇಳಿದಿತ್ತು, ಇದಕ್ಕೆ ಸೋನಿಯಾ ಗಾಂಧಿ ಆದೇಶವಿತ್ತು ಎಂದು ಪತ್ರದ ಸಾರಾಂಶವಾಗಿದೆ. ಬಿಎಲ್​ಡಿಇ ಅಸೋಸಿಯೇಶನ್ ಪತ್ರಸಂಖ್ಯೆ 1414/ಸಿಎಚ್/2017, ದಿನಾಂಕ 10-7-2017ರಂದು ಬರೆಯಲಾಗಿದೆ ಎನ್ನಲಾದ ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೌರವಾನ್ವಿತ ಮೇಡಮ್ (ಶ್ರೀಮತಿ ಸೋನಿಯಾ ಗಾಂಧಿ) ಎಂದು ಶುರುವಾಗುವ ಪತ್ರದಲ್ಲಿ, ನಿಮ್ಮ ಸಲಹೆಯಂತೆ ನಾನು ಹಾಗೂ ಸಚಿವ ಸಂಪುಟದ ಕೆಲ ಸದಸ್ಯರು ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್​ನ ಪ್ರತಿನಿಧಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. 2019ರ ಲೋಕಸಭಾ ಚುನಾವಣೆ ಗೆಲ್ಲಲು ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮುಸ್ಲಿಂ ಹಾಗೂ ಕ್ರಿಶ್ಚಿಯನ್​ರನ್ನು ಧರ್ಮದ ಆಧಾರದ ಮೇಲೆ ಒಗ್ಗೂಡಿಸಬೇಕು. ಹಾಗೆಯೇ, ಹಿಂದುಗಳನ್ನು ಜಾತಿ, ಉಪಜಾತಿ ಹಾಗೂ ಪಂಗಡ, ಉಪ ಪಂಗಡಗಳಾಗಿ ಒಡೆಯಬೇಕು. ವೀರಶೈವ-ಲಿಂಗಾಯತರ ನಡುವಿನ ವ್ಯತ್ಯಾಸವನ್ನು ಉಪಯೋಗಿಸಿಕೊಳ್ಳುವುದು ಹಾಗೂ ಮುಂದಿನ ಪ್ರಣಾಳಿಕೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ವಿಶೇಷ ಸವಲತ್ತು ನೀಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ ಲಿಂಗಾಯತ ಸಮುದಾಯದ ನಾಲ್ವರು ಸ್ವಾಮೀಜಿ ಹಾಗೂ ಓರ್ವ ಮಹಿಳಾ ಸ್ವಾಮೀಜಿಯನ್ನು ಬಳಸಿಕೊಂಡು ರಾಜ್ಯಾದ್ಯಂತ ಬೃಹತ್ ಸಮಾವೇಶಗಳನ್ನು ನಡೆಸಲಾಗುವುದು. ಈ ಬೆಳವಣಿಗೆಯು ಆರ್​ಎಸ್​ಎಸ್​ನ ಹಿಂದು ರಾಷ್ಟ್ರ ಕಲ್ಪನೆಗೆ ಪೆಟ್ಟು ನೀಡಲಿದೆ. ಒಂದೊಮ್ಮೆ ಬಿಜೆಪಿ ಆರ್​ಎಸ್​ಎಸ್ ನಡೆ ಬೆಂಬಲಿಸಿದರೆ ಲಿಂಗಾಯತರ ಮತ ಕಳೆದುಕೊಳ್ಳುತ್ತದೆ. ಕಾಂಗ್ರೆಸ್ ಲಿಂಗಾಯತರ ಶೇ.10 ಮತ ಪಡೆಯಲು ಸಫಲವಾದರೆ ಕರ್ನಾಟಕದಲ್ಲಿ ಮುಸ್ಲಿಂ, ಒಬಿಸಿ, ಎಸ್​ಸಿ ಹಾಗೂ ಎಸ್​ಟಿ ಬೆಂಬಲದೊಂದಿಗೆ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುವುದು ಸುಲಭವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಕಾಂಗ್ರೆಸ್​ನವರು ಅಧಿಕಾರದ ಆಸೆಗಾಗಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದು, ಈ ಕಾರ್ಯದಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಅಲ್ಪ ಸಂಖ್ಯಾತರ ಸಂಸ್ಥೆಗಳ ಸಹಕಾರ ಪಡೆದುಕೊಳ್ಳಲಾಗಿದೆ. ಧರ್ಮದ ಕೇಡಿಗೆ ಕಾರಣವಾಗಿರುವ ಎಂ.ಬಿ.ಪಾಟೀಲ ಅವರನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ.

| ಜಗದೀಶ ಕವಟಗಿಮಠ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷ


ಅಪಪ್ರಚಾರ ಎಂದು ಪಾಟೀಲರ ದೂರು

ವಿಜಯಪುರ: ಪ್ರತ್ಯೇಕ ಧರ್ಮ ವಿಷಯ ಸಂಬಂಧ ಬಿಎಲ್​ಡಿಇ ಸಂಸ್ಥೆಯ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಅಪ್ರಚಾರ ಮಾಡುತ್ತಿರುವ ಬಗ್ಗೆ ಸಚಿವ ಎಂ.ಬಿ. ಪಾಟೀಲ ಚುನಾವಣೆ ಆಯೋಗದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ನಕಲಿ ಲೆಟರ್ ಹೆಡ್​ನಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿರುವಂತೆ ಮಾಡಿ ಅದರಲ್ಲಿ ಹಿಂದು ಧರ್ಮವನ್ನು ಒಡೆಯುವುದು ಹಾಗೂ ಮುಸ್ಲಿಮರ ಒಂದುಗೂಡಿಸುವಿಕೆ ತಂತ್ರಗಾರಿಕೆ ಮಾಡಿರುವ ಬಗ್ಗೆ ನಮೂದಿಸಿ ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸಲಾಗಿದೆ. ಪತ್ರದ ಕೊನೆಯಲ್ಲಿ ನನ್ನ ನಕಲಿ ಸಹಿ ಕೂಡ ಮಾಡಲಾಗಿದೆ. ನಾನು ಅಂಥ ಯಾವುದೇ ಪತ್ರ ಬರೆದಿಲ್ಲ. ಬಳಸಿದ ಲೆಟರ್ ಹೆಡ್ ಹಾಗೂ ಸೃಷ್ಟಿಸಿದ ಸಂದೇಶ ನಕಲಿ. ನನ್ನ ಸಹಿಯನ್ನೂ ಫೋರ್ಜರಿ ಮಾಡಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top