Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ವಿಚಲಿತ ಸಿಎಂ ಸಿದ್ದು ಕಾವೇರಿ ನಿವಾಸದಲ್ಲಿ ಏಕಾಂಗಿಯಾಗಿದ್ದಾರೆ

Thursday, 03.08.2017, 1:01 PM       No Comments

ಬೆಂಗಳೂರು: ನಾಡಿನ ದೊರೆ ಸಿದ್ದರಾಮಯ್ಯ ಅವರು ಒಂದು ವಾರದಿಂದ ದುಃಖತಪ್ತರಾಗಿದ್ದಾರೆ. ಪುತ್ರ ರಾಕೇಶ್ ವಾರ್ಷಿಕದ ಬೆನ್ನಿಗೆ ಪುತ್ರನಂತಹ ಸಂಪುಟ ಸಹೋದ್ಯೋಗಿಯ ಮೇಲೆ ಐಟಿ ರೇಡ್. ಇದರಿಂದ ವಿಚಲಿತರಾಗಿರುವ ಸಿಎಂ ಸಿದ್ದು ಐದಾರು ದಿನಗಳಿಂದ ನಗರದಲ್ಲಿರುವ ತಮ್ಮ ಕಾವೇರಿ ನಿವಾಸದಲ್ಲೇ ಏಕಾಂಗಿಯಾಗಿ ಕಾಲದೂಡುತ್ತಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿರುವ ಸಿಎಂ ಯಾರ ಭೇಟಿಗೂ ಅವಕಾಶ ನೀಡುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ, ಪೊಲೀಸ್ ಉನ್ನತಾಧಿಕಾರಿಗಳನ್ನು ಹೊರತುಪಡಿಸಿ ಮತ್ಯಾರಿಗೂ ತಮ್ಮ ಭೇಟಿಗೆ ನೀಡುವ ಅವಕಾಶ ನೀಡಿಲ್ಲ. ಅಥವಾ, ತಾವೂ ಹೊರಹೋಗುತ್ತಿಲ್ಲ. ಪೂರ್ವನಿಗದಿತ ಕಾರ್ಯಕ್ರಮಗಳಿಗೂ ಚಕ್ಕರ್ ಹೊಡೆದು, ಮನೆಯಲ್ಲಿ ಚುಟ್ಟಿಯಲ್ಲಿದ್ದಾರೆ.

ಸಿಎಂ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಹೊರತುಪಡಿಸಿ ಸಿಎಂ ಯಾರನ್ನು ಭೇಟಿ ಮಾಡಿಲ್ಲ. ಇಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇನ್ನು ವಿವಿಧೆಡೆಯಿಂದ ಸಿಎಂ ಭೇಟಿಗೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡರನ್ನು ಕಾವೇರಿ ನಿವಾಸದ ಗೇಟ್​ನಲ್ಲೇ ತಡೆದು ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದಾರೆ. ಅಲ್ಲದೆ ಆಪ್ತರ ಭೇಟಿಗೂ ಸಿಎಂ ನಿರಾಕರಿಸಿದ್ದಾರೆ. ಸಿಎಂ ಸಿದ್ದು ಕಾಲಕಾಲಕ್ಕೆ ಐಟಿ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದು, ಉಳಿದಂತೆ ಮೌನಕ್ಕೆ ಶರಣಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top