Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಫ್ಲ್ಯಾಟ್​ನ ಬಾತ್​ರೂಂನಲ್ಲಿ ದಂಪತಿ ಶವ ಪತ್ತೆ

Wednesday, 11.07.2018, 9:10 AM       1 Comment
<< ವಿಷಾನಿಲ ಸೇವಿಸಿ ಮೃತಪಟ್ಟಿರುವ ಶಂಕೆ >>

ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ಫ್ಲ್ಯಾಟ್​ನ ಬಾತ್​ರೂಂನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಮತ್ತು ಅವರ ಪತ್ನಿಯ ಶವ ಪತ್ತೆಯಾಗಿದೆ.

ಟೆಕ್ಕಿ ಮಹೇಶ್​ (35) ಮತ್ತು ಅವರ ಪತ್ನಿ ಶೀಲಾ (30) ಮೃತ ದುರ್ದೈವಿಗಳು. ಬಾತ್​ರೂಂನಲ್ಲಿದ್ದ ಗ್ಯಾಸ್​ ಗೀಸರ್​ನಿಂದ ಕಾರ್ಬನ್​ ಮೋನಾಕ್ಸೈಡ್​ ವಿಷಾನಿಲ ಸೋರಿಕೆಯಾಗಿ ದಂಪತಿ ಮೃತಪಟ್ಟಿರುವ ಶಂಕೆ ಇದೆ ಪೊಲೀಸರು ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶಿವಗಂಗಾ ಅಪಾರ್ಟ್​ಮೆಂಟ್​ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ ದಂಪತಿಯ ಮಗಳು ಶಾಲೆಯಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಬೆಳಗ್ಗೆ ಮಕ್ಕಳು ಶಾಲೆಗೆ ತೆರಳಿದ ನಂತರ ದಂಪತಿ ಸ್ನಾನಕ್ಕೆ ತೆರಳಿದ್ದಾಗ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಮಹೇಶ್​ ಮೂಲತಃ ಬೆಳಗಾವಿಯ ಅಥಣಿ ತಾಲೂಕಿನ ನಿವಾಸಿ. 7 ವರ್ಷಗಳ ಹಿಂದೆ ಶೀಲಾ ಜತೆ ಅವರಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಹೇಶ್​ ವೈಟ್​​ಫೀಲ್ಟ್​ ಹತ್ತಿರ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪತ್ನಿ ಮತ್ತು ಮಕ್ಕಳ ಜತೆ ಶಿವಗಂಗಾ ಅಪಾರ್ಟ್​ಮೆಂಟ್​ನ ಮೊದಲ ಮಹಡಿಯ ಫ್ಲ್ಯಾಟ್​ನಲ್ಲಿ ನೆಲೆಸಿದ್ದರು.

One thought on “ಫ್ಲ್ಯಾಟ್​ನ ಬಾತ್​ರೂಂನಲ್ಲಿ ದಂಪತಿ ಶವ ಪತ್ತೆ

  1. ಸಂಪೂರ್ಣ ತನಿಖೆಯಾಗಿ ನಿಜಾಂಶ ತಿಳಿಯುವವರೆಗೂ ಮಿಕ್ಕಿದ್ದೆಲ್ಲವೂ ಅಂತೆಕಂತೆ ಸಮಾಚಾರಗಳೇ ಆಗಿರುತ್ತವೆ.

Leave a Reply

Your email address will not be published. Required fields are marked *

Back To Top