Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಖಾಯಿಲೆ ಗುಣಪಡಿಸ್ಬೇಕಾದ ದಾವಣೆಗೆರೆ ಜಿಲ್ಲಾಸ್ಪತ್ರೆಗೆ ರೋಗ

Sunday, 06.08.2017, 9:16 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಭಾನುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ಗುಜರಾತ್​ ರಾಜ್ಯಸಭೆ ಚುನಾವಣೆ ಹಿನ್ನೆಲೆ – ರೆಸಾರ್ಟ್​ನಲ್ಲಿರೋ ಕೈ ಶಾಸಕರು ಇಂದು ದೆಹಲಿಗೆ ಶಿಫ್ಟ್ – ಡಿಕೆಶಿ ಕೂಡ ಶಾಸಕರ ಜತೆ ಪ್ರಯಾಣಿಸುವ ಸಾಧ್ಯತೆ

2. ಸತ್ತವರ ಹೆಸ್ರಲ್ಲೂ ಸರ್ಕಾರದ ಹಣ ಡ್ರಾ- ಒಬ್ಬರ ಹೆಸರಿಗೆ ಮೂರು ಮೂರು ಬಾರಿ ಚೆಕ್‌- ಶೌಚಾಲಯ ನಿರ್ಮಾಣದಲ್ಲೂ ಗೋಲ್‌ಮಾಲ್‌

3. 10 ವರ್ಷದ ಸಮಸ್ಯೆಗೆ ಮೂರೇ ದಿನಗಳಲ್ಲೆ ಪರಿಹಾರ- ಬೀದರ್‌ನ ಗ್ರಾಮಕ್ಕೆ ಬಂದ್ವು ಹೊಸ ವಿದ್ಯುತ್‌ಕಂಬಗಳು- ಇದು ದಿಗ್ವಿಜಯ ನ್ಯೂಸ್‌ ಇಂಪ್ಯಾಕ್ಟ್‌

4. ಮದ್ದೂರು, ತುಮಕೂರು, ಕೊಪ್ಪಳ ಬಳಿ ಭೀಕರ ಅಪಘಾತ- ಮದ್ದೂರಿನಲ್ಲಿ ಮೂವರ ಸಾವು – ತುಮಕೂರಿನಲ್ಲಿ ಒಬ್ಬ ದುರ್ಮರಣ

5. ಸ್ಮಾರ್ಟ್​ ಸಿಟಿಗೆ ಆಯ್ಕೆಯಾದ್ರೂ ಜಿಲ್ಲಾಸ್ಪತ್ರೆಗೇ ರೋಗ- ದಾವಣೆಗೆರೆಯಲ್ಲಿ ನಿತ್ಯ ರೋಗಿಗಳಿಗೆ ನರಕ ದರ್ಶನ- ಕಣ್ಣಿದ್ದು ಕುರುಡಾಗಿದೆ ಜಿಲ್ಲಾಡಳಿತ

ದಾವಣಗೆರೆ: ಬಡವರ ಪಾಲಿನ ಸಂಜೀವಿನಿ ಆಗಬೇಕಿದ್ದ ದಾವಣಗೆರೆಯ ಜಿಲ್ಲಾಸ್ಪತ್ರೆ ನಿತ್ಯ ರೋಗಿಗಳ ಪಾಲಿಗೆ ನರಕ ದರ್ಶನ ತೋರಿಸುವ ಯಮಲೋಕವಾದಂತಿದೆ. ಕಾಯಿಲೆಗಳನ್ನ ಗುಣಪಡಿಸಬೇಕಿದ್ದ ಈ ಜಿಲ್ಲಾಸ್ಪತ್ರೆಗೇ ರೋಗ ಬಂದಂತಿದೆ. ದೂರ ದೂರಿಂದ ಬರುವ ರೋಗಿಳನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಕೇಂದ್ರ ಬಿಂದು, ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ದಾವಣಗೆರೆ ನಗರದಲ್ಲೇ ಇಂತಹ ದುಸ್ಥಿತಿ ಇರೋದು ಶೋಚನೀಯ ಸಂಗತಿ. ಜಿಲ್ಲಾಸ್ಪತ್ರೆಯ ಕೆಲ ವಾರ್ಡ್​ಗಳಲ್ಲಿ ಬೆಡ್​ಗಳು ಖಾಲಿ ಇದ್ರೂ ಕೂಡ ಮಹಿಳೆಯರನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಆರ್ಥೋ ವಾರ್ಡ್​ನಲ್ಲಿ ಮಂಚಕ್ಕೆ ಇಟ್ಟಿಗೆಗಳನ್ನ ಸಪೋರ್ಟ್​ ಕೊಟ್ಟಿರುವುದು ಆಡಳಿತ ಯಂತ್ರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಇಲ್ಲಿಯ ಸ್ಥಿತಿ ನಿತ್ಯ ನರಕಯಾತನೆ. ರೋಗಿಗಳ ಸಮಸ್ಯೆ ಕೆಳೋರೇ ಇಲ್ಲ. ಮಕ್ಕಳು, ಮಹಿಳೆಯರು, ಅಂಗವಿಕಲರು, ವೃದ್ಧರು ಹೀಗೆ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನ ನೆಲದ ಮೇಲೆ ಮಲಗಿಸಲಾಗುತ್ತಿದೆ.

ರೋಗಿಗಳು ಈ ಬಗ್ಗೆ ಜಿಲ್ಲಾಸ್ಪತ್ರೆ ಅಧೀಕ್ಷಕಿಯನ್ನ ಪ್ರಶ್ನಿಸಿದ್ರೆ ನಾನೇನು ಮಾಡಲಿ… ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಯಾರಾದರು ಡಿಸ್ಚರ್ಜ್ ಆದ್ರೆ ನಿಮಗೆ ಬೆಡ್ ಕೊಡ್ತಿವಿ ಅಂತ ಹೇಳ್ತಿದ್ದಾರೆ. ಕೆಲ ವಾರ್ಡ್ ಗಳಲ್ಲಿ 2 – 3 ರೂಗಿಗಳಿದ್ದು, ಸಾಕಷ್ಟು ಬೆಡ್​ಗಳು ಖಾಲಿ ಇವೆ. ಆದ್ರೂ ಕೂಡ ರೋಗಿಗಳಿಗೆ ಈ ರೀತಿ ಹಿಂಸೆ ನೀಡುತ್ತಿದ್ದಾರೆ. ‘

ಆಸ್ಪತ್ರೆ ಅಧೀಕ್ಷಕರಾಗಲಿ, ಜಿಲ್ಲಾಡಳಿತ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಯಾರೂ ಕೂಡ ರೋಗಿಗಳ ಅಳಲನ್ನ ಕೇಳುತ್ತಿಲ್ಲ. ರೋಗ ಗುಣಪಡಿಸಿಕೊಳ್ಳಲು ಬರುವ ರೋಗಿಗಳು ನೆಲದ ಮೇಲೆ ಮಲಗಿ ಸೊಳ್ಳೆಗಳ ಕಾಟಕ್ಕೆ ಮತ್ತಷ್ಟು ರೋಗ ಉಲ್ಬಣಗೊಳಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top