Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

SLIM ಸುಂದರಾಗಿಣಿ

Thursday, 12.10.2017, 3:05 AM       No Comments

ಕನ್ನಡತಿಯಾಗಿರುವ ಹಾಗೂ ಕರ್ನಾಟಕದ ಸೊಸೆಯಾಗಲಿರುವ ಪಂಜಾಬಿ ಬ್ಯೂಟಿ ರಾಗಿಣಿ ದ್ವಿವೇದಿ, ಯಾಕಿಷ್ಟು ದಪ್ಪ ಆಗಿದ್ದಾರಪ್ಪಾ ಅಂತ ಹಲವರು ಹುಬ್ಬೇರಿಸಿದ್ದರು. ಆದರೆ ಹಠಾತ್ತಾಗಿ 4-5 ತಿಂಗಳ ಕಾಲ ಕಣ್ಮರೆಯಾಗಿದ್ದ ರಾಗಿಣಿ, ಈಗ ಎಂದಿಗಿಂತ ಸ್ಲಿಂ ಆಗಿ ಮತ್ತು ಸುಂದರವಾಗಿ ರಿ-ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ಅವರ ಡಯಟ್ ಸೀಕ್ರೆಟ್ ಏನು? ಜತೆಗೆ ಅವರ ಬಾಯ್ಫ್ರೆಂಡ್ ಬಗ್ಗೆಯೂ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಹಾಗೆ ಇದುವರೆಗೆ ಅವರ ಹೆಸರು ತಳುಕು ಹಾಕಿಕೊಂಡಿದ್ದ ವಿವಾದಗಳ ಕುರಿತೂ ಸ್ಪಷ್ಟನೆ ನೀಡಿದ್ದಾರೆ.

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

# ಮೊದಲು ಇಬ್ಬರು ರಾಗಿಣಿ ಇದ್ದರು, ಈಗ ಒಬ್ಬರೇ ಆಗಿಬಿಟ್ಟಿದ್ದೀರಿ?

ಕೆಲ ತಿಂಗಳ ಹಿಂದೆ ‘ನಾನೇ ನೆಕ್ಸ್ ್ಟ ಸಿಎಂ’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ ನಾನು ಕೈದಿಯಂತೆ ಬಟ್ಟೆ ಧರಿಸಿದ್ದೆ. ಆಗ ಕನ್ನಡಿಯಲ್ಲಿ ನೋಡಿ ನನಗೇ ಶಾಕ್ ಆಯಿತು. ಯಾಕೆ ರಾಗಿಣಿ ಇಷ್ಟೊಂದು ಅನಾರೋಗ್ಯಕರವಾಗಿ ಕಾಣುತ್ತಿದ್ದೀಯಾ? ಫಿಟ್ ಇಲ್ಲ ಅಂತ ನನಗೇ ಅನಿಸಿತು. ಅದಾಗಲೇ ಸೋಲೋ ಸಿನಿಮಾಗಳನ್ನು ಮಾಡುತ್ತಿದ್ದೆ. ಎಲ್ಲ ಪ್ರಾಜೆಕ್ಟ್​ಗಳನ್ನು ಪಕ್ಕಕ್ಕಿಟ್ಟು, ಬ್ರೇಕ್ ಪಡೆಯಲು ನಿರ್ಧರಿಸಿದೆ. ನನಗೇ ನನ್ನಿಂದ ಖುಷಿ ಇಲ್ಲದಿರುವಾಗ ಕೆಲಸ ಮಾಡಿ ಏನು ಪ್ರಯೋಜನ ಅಲ್ಲವೇ? ಅಲ್ಲಿಂದ ಏಳೆಂಟು ತಿಂಗಳ ಕಾಲ ನನ್ನನ್ನು ನಾನು ಕೂಡಿಹಾಕಿಕೊಂಡು, ವಿಪರೀತ ಡಯಟ್ ಶುರು ಮಾಡಿದೆ. ನಾನು ಇದನ್ನು ಸಿನಿಮಾಗಾಗಿ ಮಾಡಿಲ್ಲ, ನನಗಾಗಿ ಮಾಡಿದ್ದು.

# ಈ ಮಟ್ಟಕ್ಕೆ ಸಣ್ಣಗಾಗಲು ಏನು ಡಯಟ್ ಮಾಡಿದಿರಿ? ವರ್ಕೌಟ್ ಹೇಗೆ ಮಾಡುತ್ತಿದ್ದೀರಿ?

ಪ್ರಾರಂಭದಲ್ಲಿ ತುಂಬ ಕಷ್ಟವಿತ್ತು. ಊಟದ ವಿಷಯದಲ್ಲಿ ಹಾಗೂ ತಂಪು ಪಾನೀಯಗಳಿಂದ ದೂರವಿರಬೇಕು. ನನಗೆ ಕೋಕ್ ಅಂದರೆ ತುಂಬ ಇಷ್ಟ. ಗಟ್ಟಿ ಮನಸು ಮಾಡಿ ಎಲ್ಲವನ್ನೂ ಬಿಟ್ಟೆ. ಉಪ್ಪು, ಸಕ್ಕರೆಯನ್ನು ಬಿಡಬೇಕು, ಅನ್ನ ತಿನ್ನುವಂತಿಲ್ಲ. ನೀವು ನಂಬಲ್ಲ ನಾನು ಅನ್ನ ಮುಟ್ಟಿಯೇ ಒಂದೂವರೆ ವರ್ಷ ಆಗಿದೆ. ಈಗಂತೂ ಅದನ್ನು ಸಂಪೂರ್ಣ ತ್ಯಜಿಸಿದ್ದೇನೆ. ಆರು ತಿಂಗಳ ಅವಧಿಯಲ್ಲಿ ಪ್ರತಿದಿನ ಮೂರು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದೆ. ಹೀಗಾಗಿಯೇ ಸಿನಿಮಾಗಳಿಂದ ದೂರವಿರಬೇಕಾಯಿತು. ಪ್ರತಿದಿನ ಬೆಳಗ್ಗೆ ಒಂದು ತಾಸು ಯೋಗ, ಒಂದೂವರೆ ಗಂಟೆ ವರ್ಕೌಟ್. ಮೂರು ತಿಂಗಳ ಕಾಲ ಕೇವಲ ಪಾನೀಯ ಪಥ್ಯದಲ್ಲಿದ್ದೆ.

# ಆದರೂ ಈ ಮಟ್ಟಿಗೆ ನೀವು ಸಣ್ಣಗಾಗಿರುವುದನ್ನು ನೋಡಿದರೆ ಏನೋ ಸೀಕ್ರೆಟ್ ಇರಬೇಕು…

ನಿಮಗೊಂದು ಗುಟ್ಟು ಹೇಳುತ್ತೇನೆ. ಹಾಗಲಕಾಯಿ, ಸೌತೆಕಾಯಿ ಮತ್ತು ನಿಂಬೆ ಹಣ್ಣನ್ನು ನೀರಿನಲ್ಲಿ ಮಿಕ್ಸ್ ಮಾಡಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಬೇಕು. ಹಾಗೆ ಮೂರು ತಿಂಗಳು ಕುಡಿದೆ ಗೊತ್ತಾ? ಡಯಟ್ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು ನಾನೀಗ ಅಷ್ಟರ ಮಟ್ಟಿಗೆ ಅನುಭವಿ ಆಗಿಬಿಟ್ಟಿದ್ದೇನೆ.

# ನಟ-ನಟಿಯರ ನಡುವೆ ಸಂಭಾವನೆ ವಿಷಯದಲ್ಲಿ ಅಸಮಾನತೆ ಇದೆ ಅನ್ನಿಸುತ್ತಾ?

ಹೌದು, ಅಸಮಾನತೆ ಇದೆ. ಆದರೆ ಕೆಲವೆಡೆ ಅದು ತಪ್ಪು, ಕೆಲವೆಡೆ ಸರಿ. ಒಬ್ಬ ನಾಯಕ ಮತ್ತು ಒಬ್ಬ ನಾಯಕಿ ಇಬ್ಬರೂ ಹೆಸರು ಮಾಡಿರುವವರೇ ಇದ್ದಲ್ಲಿ. ಇಬ್ಬರಿಗೂ ಸಮಾನ ಸಂಭಾವನೆ ನೀಡಬೇಕು. ಆದರೆ ಹೀರೋ ಸೂಪರ್ ಸ್ಟಾರ್ ಆಗಿದ್ದು ನಾಯಕಿ ಹೊಸಬಳಾಗಿದ್ದರೆ, ಹಾಗೆ ಕೇಳಲಾಗುವುದಿಲ್ಲ.

# ಸ್ಯಾಂಡಲ್​ವುಡ್​ನಲ್ಲಿ ಕಾಸ್ಟಿಂಗ್ ಕೌಚ್ ಇದೆಯಾ?

ಇಲ್ಲ ಅಂತ ಹೇಳೋಕೆ ಇಷ್ಟಪಡುತ್ತೇನೆ. ಆದರೆ ಈಗ ಯಾವ ಸ್ಥಿತಿ ಇದೆ ಅಂದರೆ, ಬೇಗ ಯಶಸ್ಸು ಸಿಗಬೇಕು, ಹೆಸರು-ಹಣ ಗಳಿಸಬೇಕು ಅನ್ನೋ ಆಸೆಯೊಂದಿಗೆ ಯಾರು ಏನು ಬೇಕಾದರೂ ಮಾಡಲು ರೆಡಿಯಾಗಿಬಿಡುತ್ತಾರೆ. ಪರಿಶ್ರಮ, ತಾಳ್ಮೆ, ಸರಿ ನಿರ್ಧಾರ, ತಪ್ಪು ನಿರ್ಧಾರ ಎಲ್ಲವೂ ಇರುತ್ತದೆ. ಸಕ್ಸಸ್ ಮತ್ತು ಹೆಸರು ಮಾಡುವುದು ಕಷ್ಟವಲ್ಲ. ರಾತ್ರೋರಾತ್ರಿ ಸಿಗಬಹುದು. ಆದರೆ ಅದನ್ನು ಮೇಂಟೇನ್ ಮಾಡುವುದು ಸವಾಲಾಗಿರುತ್ತದೆ.

# ಮದುವೆ ಯಾವಾಗ?

ಮುಂದಿನ ವರ್ಷವಾದರೂ ಆಗಬಹುದು. ಅಥವಾ 10 ವರ್ಷಗಳ ನಂತರವಾದರೂ ಆಗಬಹುದು. ಯಾವುದನ್ನೂ ಪ್ಲ್ಯಾನ್ ಮಾಡಿಲ್ಲ.

# ನಿಮ್ಮ ಬಾಯ್ಫ್ರೆಂಡ್​ನಲ್ಲಿ ನಿಮಗೆ ಯಾವ ಗುಣ ಏನಿಷ್ಟ?

ಅವರು ತುಂಬ ಸ್ಟೆಬಲ್ ಆಗಿರುತ್ತಾರೆ. ಪ್ರಬುದ್ಧವಾಗಿ ಯೋಚಿಸುತ್ತಾರೆ. ನನ್ನನ್ನು ಬೆಂಬಲಿಸುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ಹೀಗೆ ಸಪೋರ್ಟ್ ಮಾಡುವವರು ಬೇಕು. ಬೆಸ್ಟ್ ಫ್ರೆಂಡ್ ಆಗಿರಬಹುದು, ಬಾಯ್ಫ್ರೆಂಡ್ ಆಗಿರಬಹುದು. ನನ್ನ ಅಪ್ಪ, ಅಮ್ಮ ಕೂಡ ತುಂಬ ಸಪೋರ್ಟಿವ್.

# ದುಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ, ವಾರ್ಡ್​ರೋಬ್ ಮಾಲ್ಪಂಕ್ಷನ್ ಆಗಿತ್ತು..?

ಒಬ್ಬ ನಟ ಅಥವಾ ನಟಿಯ ಜೀವನದಲ್ಲಿ ತುಂಬ ಏರಿಳಿತಗಳು ಇರುತ್ತವೆ. ಒಬ್ಬ ಹೆಣ್ಣಿನ ಜೀವನದಲ್ಲಿ ಅದು ಹೆಚ್ಚು. ಆಗಿದ್ದು ಆಯಿತು. ಅದನ್ನೀಗ ಬದಲಿಸಲಾಗುವುದಿಲ್ಲ. ದುರಾದೃಷ್ಟವಷ್ಟೇ.

# ನೀವು ಮತ್ತು ರಾನಾ ದಗ್ಗುಬಾಟಿ ಜತೆಗಿರುವ ಫೋಟೋ ಕೂಡ ಸಾಕಷ್ಟು ಸುದ್ದಿ ಮಾಡಿತ್ತು?

ಚಿತ್ರರಂಗದಲ್ಲಿ ಒಬ್ಬ ನಟ ಮತ್ತು ನಟಿ ಕೇವಲ ಗೆಳೆಯರಾಗಿರಲು ಸಾಧ್ಯವಿಲ್ಲ ಅಂತಾರೆ. ಆದರೆ ಅದು ಸುಳ್ಳು. ನಾನು ಮತ್ತು ರಾನಾ ಕೆಲ ವರ್ಷಗಳಿಂದ ತುಂಬ ಒಳ್ಳೆಯ ಸ್ನೇಹಿತರು. ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ನಾವು ರಿಹರ್ಸಲ್ ಮಾಡುತ್ತಿದ್ದೆವು. ಆಗ ತೆಗೆದುಕೊಂಡ ಸೆಲ್ಪಿ.

# ವಿರಾಟ್ ಕೊಹ್ಲಿ ನಿಮ್ಮನ್ನು ನೋಡಿ ಆಡಿಕೊಳ್ಳುತ್ತಿದ್ದರಾ?

ನಿಜವಾಗಲೂ ನನಗೆ ಗೊತ್ತಿಲ್ಲ. ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಭಾರಿಯಾಗಿದ್ದೆ ನಿಜ. ಆದರೆ ನಾನು ವಿರಾಟ್ ಮಾತೇ ಆಡಿಲ್ಲ. ಒಬ್ಬರಿಗೊಬ್ಬರು ಪರಿಚಯವಿಲ್ಲ.

# ನಂದಿ ಬೆಟ್ಟಕ್ಕೆ ಬೈಕ್ ರೈಡ್ ಹೋಗಿದ್ದು ಹೇಗಿತ್ತು? ಯಾರ ಜತೆ?

ನನಗೆ ಬೈಕ್ ರೈಡಿಂಗ್ ತುಂಬ ಇಷ್ಟ. ಯಾರ ಜತೆ ಅಂದರೆ, ಅವರು ಮೂರು ವರ್ಷಗಳಿಂದ ನನ್ನ ಬಾಯ್ಫ್ರೆಂಡ್. ಅವರಿಗೂ ಬೈಕ್​ಗಳು ಅಂದರೆ ಇಷ್ಟ.

Leave a Reply

Your email address will not be published. Required fields are marked *

Back To Top