Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

ಶಿರಸಿ ನಟರಾಜ ನೃತ್ಯಶಾಲೆ ರಜತ ಮಹೋತ್ಸವ

Wednesday, 13.06.2018, 9:29 PM       No Comments

ಶಿರಸಿ: ನಗರದ ನಟರಾಜ ನೃತ್ಯಶಾಲೆಯ ರಜತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಬೆಂಗಳೂರಿನ ಪುಣ್ಯ ಡಾನ್ಸ್ ಕಂಪನಿಯ ಪಾರ್ಶ್ವನಾಥ ಉಪಾಧ್ಯೆ ತಂಡದಿಂದ ‘ಹರ’ ನೃತ್ಯರೂಪಕ ಕಲಾಸಕ್ತರನ್ನು ಸೆಳೆಯಿತು. ನೃತ್ಯ ಶಾಲೆ ಶಿಕ್ಷಕಿ ವಿದುಷಿ ಸೀಮಾ ಭಾಗವತ ಕಾರ್ಯಕ್ರಮ ಉದ್ಘಾಟಿಸಿ, ‘ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರನ್ನು ಅಣಿಗೊಳಿಸುವ ಜೊತೆಗೆ, ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ಪ್ರಸಿದ್ಧ ಕಲಾವಿದರ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಸೆ. 9ರಂದು ರುಕ್ಮಿಣಿ ವಿಜಯಕುಮಾರ ಅವರ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದರು. ನಟರಾಜ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಅನಸೂಯಾ ಜಗದೀಶ, ಸುಶೀಲಾ ಫರ್ನಾಂಡೀಸ ಕರ್ನಾಟಕ ಸಂಗೀತ ಪ್ರಸ್ತುತಪಡಿಸಿದರು. ಭರತನಾಟ್ಯ ಪ್ರದರ್ಶನಕ್ಕೆ ಪುರುಷೋತ್ತಮ ಮೃದಂಗ, ಪ್ರದೀಪ ಭಾಗವತ ಸಾತ್ ನೀಡಿದರು. ಸಂಘಟನೆಯ ಪ್ರಮುಖರಾದ ಡಾ.ಶಿವರಾಮ ಕೆ.ವಿ, ವಾಸುದೇವ ಶಾನಭಾಗ, ವಿರೂಪಾಕ್ಷ ಹೆಗಡೆ ಇತರರು ಇದ್ದರು.

Leave a Reply

Your email address will not be published. Required fields are marked *

Back To Top