Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಸಿದ್ದರಾಮಯ್ಯ ಸರ್ಕಾರಕ್ಕೂ ರಾಜರ ಆಳ್ವಿಕೆಗೂ ಹೋಲಿಕೆ ಸಲ್ಲ: ಯದುವೀರ್ 

Tuesday, 13.03.2018, 6:43 PM       No Comments

ಮೈಸೂರು: ಸಿದ್ದರಾಮಯ್ಯನವರ ಸರ್ಕಾರಕ್ಕೂ, ಮೈಸೂರು ಮಹಾರಾಜರ ಆಳ್ವಿಕೆಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜರ ನಂತರ ಮೈಸೂರು ಅಭಿವೃದ್ಧಿ ನಮ್ಮ ಕಾಲದಲ್ಲೇ ಆಗಿರುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ನಗರದ ಖಾಸಗಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕಾಲಕ್ಕೂ ಅಂದಿನ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಸಿದ್ದರಾಮಯ್ಯನವರು 5 ವರ್ಷದಲ್ಲಿ ಏನು ಮಾಡಿದ್ದಾರೆ ಮತ್ತು ಮೈಸೂರು ಮಹಾರಾಜರು ಏನು ಮಾಡಿದ್ದಾರೆ ಎಂಬುದನ್ನು ಜನರು ನಿರ್ಧರಿಸುತ್ತಾರೆ ಎಂದರು.

ರಾಜರ ಆಳ್ವಿಕೆಗೆ ಸಿದ್ದರಾಮಯ್ಯನವರ ಆಡಳಿತಕ್ಕೂ ಹೋಲಿಕೆ ಮಾಡಬೇಡಿ. ರಾಜರ ಕೊಡುಗೆ ಏನು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಇದನ್ನೆಲ್ಲ ರಾಜ್ಯದ ಜನರು ಖಂಡಿತವಾಗಿಯೂ ಮರೆತಿಲ್ಲ ಎಂದರು.

ನಾಡಧ್ವಜ ಸಂತಸ ತಂದಿದೆ

ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿರುವ ನಾಡಧ್ವಜವನ್ನು ನೋಡಿ ಸಂತೋಷವಾಯಿತು. ಮೈಸೂರು ರಾಜರ ಲಾಂಛನವನ್ನು ನಾಡಧ್ವಜದಲ್ಲಿ ಬಳಸಲಾಗಿದೆ. ಇದು ಮೈಸೂರು ರಾಜವಂಶಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ. ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಕನ್ನಡ ಬಾವುಟದಲ್ಲಿ ಚಾಮುಂಡೇಶ್ವರಿಯ ಲಾಂಛನವನ್ನು ಹಾಕಲಾಗಿತ್ತು. ನಂತರದ ದಿನಗಳಲ್ಲಿ ಸಿಂಹದ ಲಾಂಛನವನ್ನು ಅಳವಡಿಸಿಕೊಳ್ಳಲಾಯಿತು. ಪ್ರತ್ಯೇಕ ನಾಡಧ್ವಜದ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ತೀರ್ಮಾನ ಕೈಗೊಳ್ಳುತದೆಯೋ ಅದನ್ನು ನಾವು ಸ್ವೀಕರಿಸಬೇಕು ಎಂದರು.

ರಾಜಕೀಯಕ್ಕೆ ಬರುವುದಿಲ್ಲ

ನಾನು ರಾಜಕೀಯಕ್ಕೆ ಬರುವುದಿಲ್ಲ, ಈ ಕುರಿತು ಆಸಕ್ತಿಯೂ ಇಲ್ಲ. ನಾನು ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡುವುದಿಲ್ಲ. ಹಿಂದಿನ ರಾಜರು ಜನರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಮುಂದೆ ಬರುತ್ತಿದ್ದರು. ಅದೇ ರೀತಿ ನಾನು ಅವರ ಮಾರ್ಗದಲ್ಲೇ ಹೋಗುತ್ತಿದ್ದೇನೆ. ಜನರಿಗೆ ಏನಾದರೂ ಕೊಡುಗೆ ನೀಡಲು ಇಷ್ಟಪಡುತ್ತೇನೆಯೇ ಹೊರತು ರಾಜಕೀಯಕ್ಕೆ ಹೋಗುವುದಿಲ್ಲ. ಸಾಮಾಜಿಕ ಕೆಲಸಗಳಲ್ಲಿ ನಾನು ಬ್ಯುಸಿಯಾಗಿದ್ದೇನೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *

Back To Top