Thursday, 19th April 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಮಿತ್‌ ಷಾ ಮೀಟಿಂಗ್ - ಸೋಶಿಯಲ್‌ ಮೀಡಿಯಾ ಬಗ್ಗೆ ಫುಲ್‌ ಮಾರ್ಕ್ಸ್‌ - ಎಚ್ಚರಿಕೆ ಹೆಜ್ಜೆ ಇಡಲು ಸಲಹೆ        ಒಂಟಿಸಲಗದ ಮನೆಗೆ ಬಂತು ಬಿ ಫಾರಂ ​​ - ಅಂಬಿ ಷರುತ್ತುಗಳಿಗೆ ಒಪ್ಪಿದ ಪರಂ - ಪಕ್ಷದ ನಡೆ ಬಗ್ಗೆ ರೆಬೆಲ್‌ಸ್ಟಾರ್‌ ಗರಂ        ಕೈ ಟಿಕೆಟ್​ ತಪ್ಪಿದ್ದಕ್ಕೆ ಶಶಿಕುಮಾರ್ ಅಸಮಾಧಾನ​ - ದೇವೆಗೌಡರ ಭೇಟಿಯಾದ ಕೊಲ್ಲೂರ ಕಾಳ - ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಸ್​ ಸೇರ್ಪಡೆ        ಟಿಕೆಟ್​ಗಾಗಿ ಹೆಚ್ಚಿದ ಕಣ್ಣೀರಧಾರೆ - ಮಾಯಕೊಂಡದಲ್ಲಿ ಕಣ್ಣೀರಿಟ್ಟ ಮಾಜಿ ಶಾಸಕ - ತರೀಕೆರೆಯಲ್ಲಿ ಶಿವಶಂಕರಪ್ಪ ಭಾವುಕ        ಭವಾನಿ ಸೋಲಿಸಿ ಎಂದಿದ್ದು ನನ್ನನ್ನಲ್ಲ - ಕೈ ಅಭ್ಯರ್ಥಿ ವಿರುದ್ಧ ಮಾತನಾಡಿದ್ದಾರೆ - ಭವಾನಿ ವಿಡಿಯೋ ಬಗ್ಗೆ ಸಾ.ರಾ ಮಹೇಶ್‌ ಸ್ಪಷ್ಟನೆ        ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ - 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಗ್ರೀನ್​ಸಿಗ್ನಲ್ - ಚುನಾವಣಾ ಆಯೋಗದಿಂದ ಒಪ್ಪಿಗೆ       
Breaking News

ಸಿಎಂ ನಿರ್ಲಕ್ಷ್ಯಕ್ಕೆ ನೊಂದ ಪೂಜಾರಿ ಕಣ್ಣೀರು: ಸಂತೈಸಿದ ರಾಹುಲ್​

Tuesday, 20.03.2018, 11:25 PM       No Comments

ಮಂಗಳೂರು: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡುವ ವೇಳೆ, ಕಾಂಗ್ರೆಸ್​ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಜನ್ಯಕ್ಕೂ ಮಾತನಾಡಿಸದೇ ಕಡೆಗಣಿಸಿದ್ದಾರೆ. ಇದರಿಂದ ನೊಂದ ಪೂಜಾರಿ ಅವರು, ರಾಹುಲ್ ಎದುರು ಕಣ್ಣೀರು ಹಾಕಿ ಬೇಸರ ಹೊರ ಹಾಕಿದ ಪ್ರಸಂಗ ಮಂಗಳವಾರ ನಡೆದಿದೆ.

ಕರಾವಳಿ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಅವರು ಮಂಗಳವಾರ ಸಂಜೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ರಾಹುಲ್​ಗೆ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ನ ಹಲವು ಮುಖಂಡರೂ ತೆರಳಿದ್ದರು. ಈ ವೇಳೆ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಎಲ್ಲರನ್ನೂ ಸ್ವಾಗತಿಸಿದರು. ರಾಹುಲ್ ಗಾಂಧಿ ಅವರು ಪೂಜಾರಿ ಅವರ ಕುಶಲೋಪರಿ ವಿಚಾರಿಸಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಪೂಜಾರಿ ಅವರನ್ನು ಮಾತನಾಡಿಸದೇ ಮುಂದೆ ಸಾಗಿದರು.

ಸಿದ್ದರಾಮಯ್ಯ ಅವರ ವರ್ತನೆಯಿಂದ ಬೇಸರಗೊಂಡ ಪೂಜಾರಿ, ರಾಹುಲ್ ಗಾಂಧಿ ಕೆನ್ನೆ ಹಿಡಿದು ಕಣ್ಣೀರಿಟ್ಟರು. ಗದ್ಗದಿತರಾದ ಪೂಜಾರಿಯನ್ನು ರಾಹುಲ್ ಗಾಂಧಿ ತಬ್ಬಿಕೊಂಡು ಸಂತೈಸಿದರು.

ಸಿದ್ದರಾಮಯ್ಯ ಮತ್ತು ಸರ್ಕಾರದ ನಡೆಯನ್ನು ಆಗಾಗ ಟೀಕಿಸುತ್ತಿದ್ದ ಪೂಜಾರಿ ಅವರನ್ನು ಸಿದ್ದರಾಮಯ್ಯ ನಿರ್ಲಕ್ಷಿಸಿದ್ದರು ಎನ್ನಲಾಗಿದೆ. ಅದನ್ನು ಮಂಗಳವಾರದ ಜರುಗಿದ ಸನ್ನಿವೇಶ ಮತ್ತಷ್ಟು ಸಾಕ್ಷೀಕರಿಸಿತು.

 

Leave a Reply

Your email address will not be published. Required fields are marked *

Back To Top