Thursday, 18th January 2018  

Vijayavani

ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ- ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್        ಯುಪಿ ಪೊಲೀಸರಿಂದ ನಡೀತು ಅಚಾತುರ್ಯ- 8 ವರ್ಷದ ಹುಡುಗನ ಎನ್​ಕೌಂಟರ್​- ಮಿಸ್​ ಫೈರ್​ ಆಯ್ತೆಂದು ಜಾರಿಕೆಯ ಉತ್ತರ        ಜಯಲಲಿತಾ ಸತ್ತಿದ್ದು ಡಿ.5ಕ್ಕಲ್ಲ ನಾಲ್ಕಕ್ಕೆ- ಶಶಿಕಲಾ ಸಹೋದರನಿಂದ ಹೊಸ ಬಾಂಬ್​- ಅಮ್ಮ ಸತ್ತು ವರ್ಷ ಕಳೆದ್ರೂ ನಿಂತಿಲ್ಲ ಊಹಾಪೋಹ        ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು- ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ- ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ- ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು- ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಅಮೆರಿಕದಲ್ಲಿ ಮತ್ತೊಂದು ಶೂಟೌಟ್​

Tuesday, 10.10.2017, 9:33 AM       No Comments

ಲಾಸ್​ ವೇಗಾಸ್​: ಅಮೆರಿಕದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಇಲ್ಲಿನ ಟೆಕ್ಸಾಸ್​ನ ಟೆಕ್ ವಿವಿ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದು, ಪರಿಣಾಮ ಒಬ್ಬ ಪೊಲೀಸ್ ಸಿಬ್ಬಂದಿ ಸಾವನಪ್ಪಿದ್ದಾರೆ. ಪದೇ ಪದೇ ಗುಂಡಿನ ದಾಳಿ ನಡೆಯುತ್ತಿರುವುದು ವಿಶ್ವದ ದೊಡ್ಡಣನ ನಿದ್ದೆಗೆಡಿಸುವಂತೆ ಮಾಡಿದೆ.

ನಿನ್ನೆ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಅಪರಿಚಿತನೊಬ್ಬ ವಿವಿ ಆವರಣದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಓರ್ವ ಪೊಲೀಸ್​ ಸಾವನ್ನಪ್ಪಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಶಂಕಿತ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತ ವ್ಯಕ್ತಿಯನ್ನು 19 ವರ್ಷದ ಹೋಲಿಸ್​ ಡಾನಿಯಲ್ಸ್​ ಎಂದು ಗುರುತಿಸಲಾಗಿದೆ.

ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಿವಿ ಸುತ್ತಮುತ್ತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ತಾತ್ಕಾಲಿಕವಾಗಿ ವಿವಿ ಆವರಣಕ್ಕೆ ಪ್ರವೇಶವನ್ನ ನಿರ್ಬಂಧಿಸಲಾಗಿದೆ. ಗುಂಡಿನ ದಾಳಿ ನಂತರ ವಿವಿ ಆವರಣದ ಕೊಠಡಿಗಳನ್ನು ಪರಿಶೀಲಿಸಿದಾಗ ಅಲ್ಲಿ ಡ್ರಗ್ಸ್​ ಪತ್ತೆಯಾಗಿರುವುದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಕಳೆದ ವಾರವಷ್ಟೇ ಅಮೆರಿಕದ ತಿಕ್ಕಲ ಆಸಾಮಿಯೊಬ್ಬ ಕ್ಯಾಸಿನೋ ಸಂಗೀತಗೋಷ್ಠಿ ಆಸ್ವಾದಿಸುತ್ತಿದ್ದ ಸಂಗೀತ ಪ್ರೇಮಿಗಳ ಮೇಲೆ ಯದ್ವಾತದ್ವಾ ಗುಂಡುಹಾರಿಸಿ 50ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದ್ದ. ಇದರ ಬೆನ್ನಲ್ಲೆ ಮತ್ತೊಂದು ದಾಳಿ ನಡೆದಿರುವುದು ಅಮೆರಿಕನ್ನರ ಎದೆ ಬಡಿತವನ್ನು ಹೆಚ್ಚು ಮಾಡಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top