Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಶಿವರಾಜ್​ಕುಮಾರ್ ಅಭಿಮಾನೋತ್ಸವ

Thursday, 12.07.2018, 3:05 AM       No Comments

ಬೆಂಗಳೂರು: ಚಂದನವನದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಅವರಿಗೆ ಇಂದು (ಜು. 12) 56ನೇ ಜನ್ಮದಿನ ಸಂಭ್ರಮ. ಅದಕ್ಕಾಗಿ ಕಳೆದ ಒಂದು ತಿಂಗಳಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ ಅಭಿಮಾನಿಗಳು. ಈವರೆಗೂ ಹುಟ್ಟುಹಬ್ಬದಂತೆ ಆಚರಿಸಲ್ಪಡುತ್ತಿದ್ದ ಈ ವಿಶೇಷ ದಿನಕ್ಕೆ ಈ ಬಾರಿ ‘ಶಿವಣ್ಣನ ಅಭಿಮಾನೋತ್ಸವ’ ಎಂದು ಹೊಸ ಹೆಸರನ್ನೂ ಅಭಿಮಾನಿಗಳು ಇಟ್ಟಿದ್ದಾರೆ. ರಾಜ್ಯದ ಹಲವೆಡೆಯಿಂದ ಬಂದು ‘ಸೆಂಚುರಿ ಸ್ಟಾರ್’ ಮನೆ ಎದುರು ಜಮಾಯಿಸುವ ಸಾವಿರಾರು ಜನರು ಕೇಕ್, ಉಡುಗೊರೆ, ಪುಷ್ಪಗುಚ್ಚ ಇತ್ಯಾದಿ ನೀಡಿ ನೆಚ್ಚಿನ ನಟನಿಗೆ ಶುಭ ಕೋರಲಿದ್ದಾರೆ. 56ನೇ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು 56 ಕೆಜಿ ತೂಕದ ಕೇಕ್ ತಯಾರಿಸಿರುವುದು ವಿಶೇಷ.

ಕಳೆದ ವರ್ಷ ಪಾರ್ವತಮ್ಮ ರಾಜ್​ಕುಮಾರ್ ವಿಧಿವಶರಾದ ಕಾರಣ ಶಿವಣ್ಣನ ಜನ್ಮದಿನದ ಅದ್ದೂರಿತನಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ವರ್ಷ ಭರ್ಜರಿಯಾಗಿಯೇ ಸಂಭ್ರಮಿಸಲು ಹಲವು ಅಭಿಮಾನಿ ಸಂಘಗಳು ಸಜ್ಜಾಗಿವೆ.

ಏಕಕಾಲಕ್ಕೆ ಅನೇಕ ಸಿನಿಮಾಗಳಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. ಆ ಎಲ್ಲ ಚಿತ್ರತಂಡಗಳು ಹುಟ್ಟುಹಬ್ಬದ ಸಲುವಾಗಿ ಒಂದಿಲ್ಲೊಂದು ಗಿಫ್ಟ್ ನೀಡಲಿವೆ. ‘ದಿ ವಿಲನ್’ ಚಿತ್ರತಂಡದಿಂದ ಒಂದು ಹಾಡನ್ನು ರಿಲೀಸ್ ಮಾಡಬೇಕು ಎಂದು ನಿರ್ದೇಶಕ ಪ್ರೇಮ್ ಯೋಜನೆ ಹಾಕಿಕೊಂಡಿದ್ದರು. ಆದರೆ ತಾಂತ್ರಿಕ ಕೆಲಸಗಳು ಇನ್ನೂ ಪೂರ್ಣಗೊಳ್ಳದ ಕಾರಣ, ಎರಡು ದಿನ ತಡವಾಗಿ ಆ ಗೀತೆ ಬಿಡುಗಡೆ ಆಗಲಿದೆಯಂತೆ. ಒಂದುವೇಳೆ ಅಂದುಕೊಂಡಿದ್ದಕ್ಕಿಂತಲೂ ಬೇಗ ಸಿದ್ಧಗೊಂಡರೆ ಗುರುವಾರವೇ ಅಭಿಮಾನಿಗಳು ಹಾಡನ್ನು ಆಸ್ವಾದಿಸಬಹುದಂತೆ. ಇತ್ತೀಚೆಗಷ್ಟೇ ‘ತಾರಕಾಸುರ’ ಚಿತ್ರದ ಒಂದು ಹಾಡಿಗೆ ಶಿವಣ್ಣ ಧ್ವನಿ ನೀಡಿದ್ದು, ಆ ಸಾಂಗ್ ಕೂಡ ಇಂದು ರಿಲೀಸ್ ಆಗಲಿದೆ. ‘ಕವಚ’, ‘ರುಸ್ತುಂ’, ‘ದ್ರೋಣ’ ಚಿತ್ರಗಳಲ್ಲಿ ಅವರು ತೊಡಗಿಕೊಂಡಿದ್ದು, ಇನ್ನಷ್ಟು ಹೊಸ ಸಿನಿಮಾಗಳು ಘೋಷಣೆ ಆಗುವ ಸಾಧ್ಯತೆ ಇದೆ. ಅಲ್ಲದೆ, ಧನಂಜಯ ನಟಿಸಿರುವ ‘ಭೈರವಗೀತ’ ಚಿತ್ರದ ಮೊದಲ ಟೀಸರ್​ಅನ್ನು ಶಿವರಾಜ್​ಕುಮಾರ್ ಅವರಿಂದ ಲಾಂಚ್ ಮಾಡಿಸಲಿದ್ದಾರೆ ನಿರ್ದೇಶಕ ರಾಮ್ೋಪಾಲ್ ವರ್ವ.

Leave a Reply

Your email address will not be published. Required fields are marked *

Back To Top