Monday, 22nd October 2018  

Vijayavani

₹9 ಲಕ್ಷ ಅಡ್ವಾನ್ಸ್ ಪಡೆದಿದ್ದು ನಿಜ - ಸರ್ಜಾ ವಿರುದ್ಧ ಮೀ ಟೂ ಬಳಸಿಕೊಂಡಿಲ್ಲ - ದಿಗ್ವಿಜಯ ನ್ಯೂಸ್​ಗೆ ಚೇತನ್ ಹೇಳಿಕೆ        ಸರ್ಜಾ ವಿರುದ್ಧ ಮೀಟೂ ಆರೋಪ - ಕಿತ್ತಾಟ ಪರಿಹರಿಸಲು ಸಂಧಾನಕಾರರಾಗ್ತಾರಾ ಅಂಬಿ..?        ಅರ್ಜುನ್ ಸರ್ಜಾ ಮೀ ಟೂ ಕೇಸ್​​ಗೆ ಬಿಗ್ ಟ್ವಿಸ್ಟ್ - ಪ್ರೇಮಬರಹದಲ್ಲಿ ಚಾನ್ಸ್​ ಸಿಗದ್ದಕ್ಕೆ ರೀವೆಂಜ್ ಆರೋಪ        ಶ್ರುತಿ ವಿರುದ್ಧ ಚೇಂಬರ್​ಗೆ ದೂರು - ನಟಿ ಆರೋಪಕ್ಕೆ ಮತ್ತೆ ಗುಡುಗಿದ ನಟ ರಾಜೇಶ್        ಬೈಎಲೆಕ್ಷನ್​​ ಆಂತರಿಕ ಸಮೀಕ್ಷೆಯಲ್ಲಿ ಸೋಲಿನ ಸುಳಿವು - ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ತಂತ್ರಗಾರಿಕೆ        ಕರ್ತವ್ಯ ಬಹಿಷ್ಕರಿಸಿ ಸಿಬ್ಬಂದಿ ಪ್ರತಿಭಟನೆ - ಬೆಂಗಳೂರಿನ ಪೆನೇಷಿಯಾ ಆಸ್ಪತ್ರೆ ವಿರುದ್ಧ ಸಿಬ್ಬಂದಿ ಆಕ್ರೋಶ       
Breaking News

ಕಾವೇರಿಯಲ್ಲಿ ಕೊಚ್ಚಿ ಹೋಗುತ್ತಿದ್ದವನನ್ನು ರಕ್ಷಿಸಿದ್ದು ಪೇದೆಯ ಸಮಯಪ್ರಜ್ಞೆ!

Friday, 10.08.2018, 4:06 PM       No Comments

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿಯ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಹೌದು, ಶಿವನಸಮುದ್ರದ ರಂಗನಾಥಸ್ವಾಮಿ ದೇವಾಲಯದಲ್ಲಿ ವಾಸವಿದ್ದ ಬುದ್ಧಿಮಾಂದ್ಯ ವ್ಯಕ್ತಿ ಜಡೇಯ ಎಂಬಾತ ಮರುಜೀವ ಪಡೆದಿದ್ದಾನೆ.

ನಿನ್ನೆ ಸಂಜೆ ದೇವಸ್ಥಾನದ ಹಿಂದಿರುವ ಕಾವೇರಿ ನದಿ ನಡುವಿನ ಗುಡ್ಡದಲ್ಲಿ ಕುಳಿತು ಅರ್ಚಕರ ಜಾನುವಾರುಗಳನ್ನು ಮೇಯಿಸುತ್ತಿದ್ದ. ಈ ವೇಳೆ ನೀರಿನ ಪ್ರಮಾಣ ಹೆಚ್ಚಾಗಿ ಹೆದರಿದ ವ್ಯಕ್ತಿ ರಾತ್ರಿಯಿಡೀ ಅಲ್ಲಿಯೇ ತಂಗಿದ್ದ.

ಜಾನುವಾರುಗಳು ಸಂಜೆ ಮನೆ ಸೇರಿದರೂ ಜಡೇಯ ಬಾರದಿದ್ದಾಗ ಎಲ್ಲೋ ಹೋಗಿರಬಹುದು ಎಂದು ಅರ್ಚಕರು ಸುಮ್ಮನಾಗಿದ್ದರು. ಆದರೆ, ಬೆಳಗ್ಗೆ ದೇವಾಲಯ ಹಿಂಭಾಗದ ನದಿಯ ನಡುವಿನ ಗುಡ್ಡದಲ್ಲಿಯೇ ಈತ ಇರುವುದು ಗಮನಕ್ಕೆ ಬಂದಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದರು.

ನಂತರ ಅರ್ಚಕರು, ಪೊಲೀಸರು ನದಿಯ ದಂಡೆಗೆ ತೆರಳಿ ಆತನನ್ನು ಬರುವಂತೆ ಕರೆದಿದ್ದಾರೆ. ಅಲ್ಲಿಂದ ಇಳಿದು ಬರುವಾಗ ಜಡೇಯ ಕಾಲು ಜಾರಿ ಬಿದ್ದಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಜಡೇಯನನ್ನು ನೋಡಿದ ಪೇದೆ ನಂಜುಂಡ ತಕ್ಷಣ ನೀರಿಗೆ ಧುಮುಕಿ ಹಗ್ಗ ಎಸೆದು ಕೊಚ್ಚಿ ಹೋಗುತ್ತಿದ್ದ ಜಡೇಯನನ್ನು ರಕ್ಷಿಸಿದ್ದಾರೆ.

ರಾತ್ರಿಯಿಡೀ ನೀರಿನ ನಡುವೆ ಕುಳಿತು ಚಳಿಯಲ್ಲಿ ಬಳಲಿದ್ದ ಈತನನ್ನು ಸದ್ಯ ಸತ್ತೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

Leave a Reply

Your email address will not be published. Required fields are marked *

Back To Top