Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಉಡುಪಿಗೆ ಶಿವಮಣಿ ಸಂಗೀತ ಶಾಲೆ

Friday, 08.06.2018, 10:38 PM       No Comments

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಡ್ರಮ್ ವಾದಕ ಶಿವಮಣಿ ಮಾರ್ಗದರ್ಶನದಲ್ಲಿ ಶಿರೂರು ಮೂಲಮಠದ ಪರಿಸರದಲ್ಲಿ ಸಂಗೀತ ತರಬೇತಿ ಅಕಾಡೆಮಿ ಮೂರು ವರ್ಷದಲ್ಲಿ ತಲೆಯೆತ್ತಲಿದೆ.

ಶ್ರೀಗಳ ಜನ್ಮನಕ್ಷತ್ರ ಪ್ರಯುಕ್ತ ಶುಕ್ರವಾರ ಶಿರೂರು ಮೂಲಮಠದಲ್ಲಿ ಸಂಗೀತ ತರಬೇತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಶಿಲಾನ್ಯಾಸ ನೆರವೇರಿತು. ಈ ಸಂದರ್ಭ ಮಾತನಾಡಿದ ಶ್ರೀಗಳು, ಶಿರೂರು ಮಠದ ಪರಿಸರದಲ್ಲಿ 15 ಎಕರೆ ಪ್ರದೇಶವನ್ನು ಅರಣ್ಯ ನಿರ್ಮಾಣಕ್ಕಾಗಿ ಮಲ್ಪೆಯ ಸಂವೇದನಾ ಫೌಂಡೇಶನ್‌ಗೆ ಹಸ್ತಾಂತರಿಸಲಾಗಿದೆ. ಅಲ್ಲಿ ಶಿವಮಣಿ ಅವರ ಸಂಗೀತ ತರಬೇತಿ ಅಕಾಡೆಮಿ ಹಾಗೂ ಗೋ ಶಾಲೆ ನಿರ್ಮಾಣವಾಗಲಿದೆ ಎಂದರು.

ದೇವರ ಪೂಜೆಗೆ ಸಂಗೀತವೂ ಒಂದು ಸಾಧನ, ಆದ್ದರಿಂದ ಒಂದು ಸಂಗೀತ ಶಾಲೆಯನ್ನು ತೆರೆಯಬೇಕು ಎಂಬ ಆಸೆ ಇತ್ತು. ನನಗೆ 28 ವರ್ಷಗಳಿಂದ ಶಿವಮಣಿ ಪರಿಚಯ ಇದೆ. ಅವರು ದೇವರು ಆಶೀರ್ವದಿಸಿದ ಜಗತ್ತಿನ ಶ್ರೇಷ್ಠ ಸಂಗೀತ ಸಾಧಕ. ಆದ್ದರಿಂದ ದೇಶದಲ್ಲಿ ಬೇರೆ ಎಲ್ಲಿಯೂ ಇಲ್ಲದಂತಹ ವಿಶ್ವಮಟ್ಟದ ಸಂಗೀತ ಶಾಲೆಯನ್ನು ನಡೆಸಬೇಕು ಎಂಬು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ 4 ಎಕರೆ ಭೂಮಿಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಶಾಲೆಯನ್ನು ಅವರೇ ಆರಂಭಿಸುತ್ತಾರೆ. ಮುಂದಿನ 3 ವರ್ಷದಲ್ಲಿ ಕಟ್ಟಡದ ಕಾಮಗಾರಿ ಸಂಪೂರ್ಣವಾಗಲಿದೆ ಎಂದು ತಿಳಿಸಿದರು.

ಸಂವೇದನಾ ಫೌಂಡೇಶನ್ ಸದಸ್ಯ ಪ್ರಕಾಶ ಉಪಸ್ಥಿತರಿದ್ದರು.

ವಿಶ್ವದ ಶ್ರೇಷ್ಠ ಡ್ರಮ್ಸ್ ವಾದಕರಿಂದ ತರಬೇತಿ: ನಾನು ಸದಸ್ಯನಾಗಿರುವ, ವಿಶ್ವದ ಅತಿ ದೊಡ್ಡ ಮ್ಯೂಸಿಕ್ ಅಕಾಡೆಮಿ, ಅಮೆರಿಕದ ಪರ್ಕುಷನ್ ಆರ್ಟ್ ಸೊಸೈಟಿಯ ಮೂಲಕ ಈ ಮ್ಯೂಸಿಕ್ ಅಕಾಡೆಮಿಯನ್ನು ಶಿರೂರಿನಲ್ಲಿ ನಡೆಸುತ್ತೇನೆ. ಈ ಕೇಂದ್ರದಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತದ ವಿನಿಮಯ ನಡೆಯಲಿದೆ. ವಿದೇಶಿ ತರಬೇತುದಾರರಿಂದ ವಿಶೇಷ ತರಗತಿ ಆಯೋಜಿಸಲಾಗುತ್ತದೆ. ಇಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತೋಪಕರಣಗಳ ತರಬೇತಿ, ಫ್ಯೂಶನ್ ಕಲಿಸಲಾಗುತ್ತದೆ. ಶ್ರೇಷ್ಠ ಡ್ರಮ್ಸ್ ವಾದಕರು ಮತ್ತು ಇತರ ಸಂಗೀತಗಾರರನ್ನು ಇಲ್ಲಿಗೆ ಕರೆಸಿ ಇಲ್ಲಿನ ಸಂಗೀತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ನನ್ನ ಆಸೆಯಾಗಿದೆ ಎಂದು ಖ್ಯಾತ ಡ್ರಮ್ ವಾದಕ ಶಿವಮಣಿ ಹೇಳಿದರು.

ಡ್ರಮ್ಸ್ ಬಾರಿದ ಶ್ರೀಗಳು: ಸ್ವಾಮೀಜಿ ಜನ್ಮನಕ್ಷತ್ರದ ಅಂಗವಾಗಿ ಮೂಲಮಠದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಹಮ್ಮಿಕೊಳ್ಳಲಾಗಿತ್ತು. ನಂತರ ಶಿವಮಣಿ ವಿವಿಧ ಶೈಲಿಯಲ್ಲಿ ಡ್ರಮ್ ಬಾರಿಸುವ ಮೂಲಕ ಗಮನಸೆಳೆದರು. ಸುಮಾರು ಅರ್ಧತಾಸು ಡ್ರಮ್ಸ್ ಬಾರಿಸಿದ ಶಿವಮಣಿ, ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ದರನ್ನಾಗಿಸಿದರು. ಶಿವಮಣಿ ಜತೆ ಶಿರೂರು ಶ್ರೀಗಳೂ ಡ್ರಮ್ಸ್ ಬಾರಿಸಿದರು.

Leave a Reply

Your email address will not be published. Required fields are marked *

Back To Top