Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಪ್ರೇಯಸಿಯ ನಡತೆ ಶಂಕಿಸಿದ ಪ್ರಿಯಕರ: ನಿಶ್ಚಿತಾರ್ಥದ ಬಳಿಕ ಮುರಿದುಬಿತ್ತು ಮದುವೆ

Tuesday, 21.11.2017, 7:59 AM       No Comments

ಶಿವಮೊಗ್ಗ: ಪರಸ್ಪರ ಒಂದು ವರ್ಷದಿಂದ ಪ್ರೀತಿಸಿದ್ದ ಯುವಕ ಯುವತಿ ಜಾತಿಯನ್ನೂ ಮೀರಿ ತಮ್ಮ ಪಾಲಕರನ್ನು ಮದುವೆಗೆ ಒಪ್ಪಿಸಿದ್ದರು. ಮನೆಯವರು ಒಪ್ಪಿದ ಬಳಿಕ ನಿಶ್ಚಿತಾರ್ಥವೂ ಆಗಿತ್ತು. ಇನ್ನೇನು ಮದುವೆ ಆಗಬೇಕು ಎನ್ನುವ ವೇಳೆಗೆ ಯುವಕ ಕ್ಯಾತೆ ತೆಗೆದಿದ್ದಾನೆ. ಅದೇಕೆ ಅಂತೀರಾ ಮುಂದೆ ಓದಿ….

ಶಿವಮೊಗ್ಗ ಜಿಲ್ಲೆಯ ಸೋಮಿನ ಕೊಪ್ಪದ ಪ್ರಶಾಂತ್ ಎಂಬಾತ ಕಳೆದ ಒಂದು ವರ್ಷದಿಂದ ಕಾಶಿಪುರ ಗೇಟ್​ನ ಸುಗುಣ ಎಂಬುವವರನ್ನು ಪ್ರೀತಿಸುತ್ತಿದ್ದ. ಹುಡುಗಿ ಕೂಡ ಇವನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಳು. ಇವರು ಪ್ರೀತಿಗೆ ಬೆಲೆಕೊಟ್ಟ ಪೋಷಕರು ಇವರು ಮದ್ವೆಗೆ ಒಪ್ಪಿ ನಿಶ್ಚಿತಾರ್ಥ ಮಾಡಿದ್ದಾರೆ.

ಪ್ರೀತಿಗೆ ಅಡ್ಡ ಬಂತು ಫೇಸ್​ಬುಕ್​ ಎಂಬ ವಿಲನ್​..
ಆದರೆ, ನಿಶ್ಚಿತಾರ್ಥದ ಫೋಟೊವನ್ನ ಹುಡುಗಿ ಫೇಸ್​​ಬುಕ್​ಗೆ ಹಾಕಿದ ಬಳಿಕ ಸಮಸ್ಯೆ ಆರಂಭಗೊಂಡಿದೆ. ಅದ್ಯಾರು ಏನು ಕಮೆಂಟ್ ಮಾಡಿದರೋ ಗೊತ್ತಿಲ್ಲ. ಪ್ರಶಾಂತ ತನ್ನ ಪ್ರೇಯಸಿಯ ನಡತೆ ಸರಿಯಿಲ್ಲ ಅವಳಿಗೆ ಈ ಮೊದಲು ಮತ್ತೊಬ್ಬನೊಂದಿಗೆ ಸಂಬಂಧ ಇತ್ತು ಅಂತ ಆರೋಪಿಸಿ ತನಗೆ ಮದುವೆಯೇ ಬೇಡ ಅಂತಾ ಪಟ್ಟು ಹಿಡಿದು ಕುಳಿತಿದ್ದಾನೆ. ಹೀಗಾಗಿ ಪ್ರೇಮ ಪ್ರಕರಣ ಇದೀಗ ಮಹಿಳಾ ಠಾಣೆ ಮೆಟ್ಟಿಲೇರಿದೆ.

ಫೇಸ್​ಬುಕ್​ನಲ್ಲಿ ನಿಶ್ಚಿತಾರ್ಥದ ಫೋಟೊಗಳನ್ನು ನೋಡಿದ ಪ್ರಶಾಂತ್​ನ ಸ್ನೇಹಿತರು ಈ ಹುಡುಗಿಗೆ ಬಸವರಾಜ್ ಎಂಬ ಪ್ರೇಮಿಯಿದ್ದ. ಸುಗುಣಾ ಗರ್ಭಿಣಿಯೂ ಆಗಿ ಅಬಾಷನ್ ಮಾಡಿಸಿಕೊಂಡಿದ್ಲು ಅಂತಾ ಹೇಳಿದ್ದಾರೆ. ಇದರಿಂದ ಸತ್ಯ ತಿಳಿದು ತಲೆ ತಿರುಗಿದ ಪ್ರಶಾಂತ್​ ನಾನು ಮದ್ವೆಯಾಗಲ್ಲ ಅಂತಾ ಪಟ್ಟು ಹಿಡಿದಿದ್ದಾನೆ. ಆದ್ರೆ ತಾನು ಕೀಳು ಜಾತಿಯವಳು ಎಂಬ ಕಾರಣಕ್ಕೆ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಲಾಗ್ತಿದೆ ಅಂತಾ ಸುಗುಣಾ ಆರೋಪಿಸಿದ್ದಾಳೆ.

ಪ್ರೀತಿಗೆ ನಂಬಿಕೆಯೇ ಬುನಾದಿ. ತಮ್ಮ ಪ್ರೀತಿ ಮತ್ತು ಪ್ರೀತಿಸಿದವರ ಬಗ್ಗೆ ನಂಬಿಕೆ ಇಲ್ಲದಿದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಉದಾಹರಣೆಯಾಗಿದೆ. ಇವರಿಬ್ಬರ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡ್ಬೇಕು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top