Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

ಉದ್ಯಮಿ ಅಳಿಯ ಸೇರಿ ಗ್ರಾಹಕರನ್ನು ಕಿಡ್ನಾಪ್ ಮಾಡಿ 2 ಲಕ್ಷ ರೂ. ದರೋಡೆ

Friday, 06.07.2018, 5:58 PM       No Comments

ಶಿವಮೊಗ್ಗ: ನಗರದ ಟೈಲ್ಸ್ ಉದ್ಯಮಿಯೊಬ್ಬರ ಅಳಿಯ ಸೇರಿದಂತೆ ನಾಲ್ವರನ್ನು ಗ್ಯಾಂಗ್‌ವೊಂದು ಕಾರಿನಲ್ಲಿ ಅಪಹರಿಸಿ 2 ಲಕ್ಷ ರೂ. ಪಡೆದು ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ಆಲ್ಕೊಳ ವೃತ್ತದಲ್ಲಿ ನಡೆದಿದೆ.

ರೌಡಿ‌ ಶೀಟರ್ ಜಮೀರ್ ಅಲಿಯಾಸ್ ಟೈಲ್ಸ್ ಬಚ್ಚಾ ಗ್ಯಾಂಗ್​ ಉದ್ಯಮಿ ಹೆವನ್ ಹಬೀಬ್ ಅಪಹರಿಸಲು ಸಂಚುರೂಪಿಸಿತ್ತು. ಅದರಂತೆ ಟೈಲ್ಸ್​ ಬಚ್ಚಾ ಗ್ಯಾಂಗ್​ನ ನಾಲ್ವರು ಅಲ್ಕೋಳ ಸಮೀಪವಿರುವ ಹಬೀಬ್​ರ ಟೈಲ್ಸ್ ಅಂಗಡಿಗೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಬಂದಿದ್ದರು.

ಈ ವೇಳೆ ರೌಡಿಗಳು ಹಬೀಬ್​ರನ್ನು ಕೇಳಿದ್ದಾರೆ. ಹಬೀಬ್​ ಅಂಗಡಿಯಲ್ಲಿ ಇಲ್ಲದ್ದರಿಂದ ಅವರ ಅಳಿಯ ಸಮೀವುಲ್ಲಾ ಹಾಗೂ ಅಂಗಡಿಯಲ್ಲಿದ್ದ ಗ್ರಾಹಕರು ಸೇರಿದಂತೆ ನಾಲ್ಕು ಜನರಿಗೆ ಗನ್​ ಹಾಗೂ ಚಾಕುಗಳನ್ನು ತೋರಿಸಿ ಕಾರಿನಲ್ಲಿ ಕೂರುವಂತೆ ಬೆದರಿಸಿ, ಸಮೀವುಲ್ಲಾರ ಕಾರಿನಲ್ಲಿಯೇ ಕರೆದುಕೊಂಡು ಹೋಗಿದ್ದಾರೆ. ಶಿವಮೊಗ್ಗ ಹೊರವಲಯದ ಹೊಸ ಬಡಾವಣೆಯಲ್ಲಿ ಬಳಿ ಕಾರು ನಿಲ್ಲಿಸಿ ಹಬೀಬ್​ ಅವರಿಗೆ ಕರೆ ಮಾಡಿ 1 ಕೋಟಿ ಹಣ ನೀಡುವಂತೆ ಡಿಮ್ಯಾಂಡ್​ ಮಾಡಿದರು.

2 ಗಂಟೆಗಳ ಕಾಲ ಅಪಹರಿಸದವರನ್ನು ಒಂದೇ ಸ್ಥಳದಲ್ಲಿಯೇ ಕೂರಿಸಿಕೊಂಡು ಹಣಕ್ಕಾಗಿ ಬೆದರಿಸಿದ್ದರು. ತಾವಿದ್ದ ಸ್ಥಳದೆಡೆಗೆ ಪೊಲೀಸ್ ವಾಹನ ಬರುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ರೌಡಿಗಳು, ಅಪಹರಿಸಿದವರನ್ನು ಕಾರಿನಲ್ಲಿ ಕೂರಿಸಿಕೊಂಡು ಶಿವಮೊಗ್ಗದ ವಿವಿಧ ರಸ್ತೆ ಹಾಗೂ ಬಡಾವಣೆಗಳನ್ನು ಸುತ್ತಿಸಿದ್ದಾರೆ. ಮಾತ್ರವಲ್ಲದೇ ಮಧ್ಯದಲ್ಲಿ ಒಮ್ಮೆ ಕಾರನ್ನು ಕೂಡ ಬದಲಾಯಿಸಿದ್ದು, ಈ ವೇಳೆ ಒಮ್ಮೆ ಎದುರಾದ ಪೊಲೀಸ್​ ಪಿಸಿಆರ್ ವಾಹನಕ್ಕೂ ಸಹ ಡಿಕ್ಕಿ ಹೊಡೆಸಿದ್ದರು.

ಅಂತಿಮವಾಗಿ ಪೊಲೀಸರು ತಮ್ಮ ಬೆನ್ನುಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಬಚ್ಚಾ ಗ್ಯಾಂಗ್​ನ ರೌಡಿಗಳು ಅಪಹರಿಸಿದವರನ್ನು ಕರೆತಂದು ಶಿವಮೊಗ್ಗದ ಲಕ್ಷ್ಮೀ ಟಾಕೀಸ್​ ಬಳಿ ಬಿಟ್ಟಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಸುಮಾರು 2 ಲಕ್ಷ ರೂ. ಗಳನ್ನು ಕಸಿದುಕೊಂಡು, ಮತ್ತೊಂದು ಕಾರಿನಲ್ಲಿ ಅಪಹರಣಕಾರರು ಪರಾರಿಯಾಗಿದ್ದಾರೆ. ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top