Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಬೀದಿ ಕಾಮಣ್ಣನ ಕಾಟಕ್ಕೆ ಫೇಸ್​ಬುಕ್​ನಲ್ಲಿ ಯುವತಿ ಮಾಡಿದ್ದೇನು?

Friday, 30.06.2017, 12:29 PM       No Comments

ಮಂಗಳೂರು: ಫೇಸ್​ಬುಕ್​ನ್ನು ಸಾಮಾನ್ಯವಾಗಿ ಫೋಟೋ ಹಾಗೂ ವಿಡಿಯೋ ಅಪ್ಲೋಡ್ ಮಾಡೋಕೆ, ಚಾಟಿಂಗ್​ ಮಾಡಲು ಬಳಸುವುದುಂಟು. ಆದರೆ ಇಲ್ಲೊರ್ವ ಯುವತಿ ಮಾತ್ರ ಫೇಸ್​ಬುಕ್​​ ಬಳಸಿಕೊಂಡು ಬೀದಿ ಕಾಮಣ್ಣನೊಬ್ಬನಿಗೆ ಬುದ್ಧಿ ಕಲಿಸಿ, ಮಾನ ಹರಾಜು ಹಾಕಿದ್ದಾಳೆ.

ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಶೆಟ್ಟಿ ಎಂಬಾಕೆಯನ್ನ ಎರಡು ದಿನದ ಹಿಂದೆ ಕಾಮುಕನೊಬ್ಬ ಸ್ಕೂಟರ್​ನಲ್ಲಿ ಫಾಲೋ ಮಾಡ್ಕೊಂಡು ಬರ್ತಿದ್ದ. ಅಲ್ಲದೆ ಆಕೆಯನ್ನ ಚುಡಾಯಿಸುತ್ತಿದ್ದ. ಇದರಿಂದ ಬೇಸತ್ತ ರಶ್ಮಿ ಆತನಿಗೆ ಬುದ್ಧಿ ಕಲಿಸುವ ಸಲುವಾಗಿ ಹೊಸದೊಂದು ಉಪಾಯ ಮಾಡಿದ್ದಾಳೆ.

ತನ್ನನ್ನು ಹಿಂಬಾಲಿಸುತ್ತಿದ್ದ ಕಾಮುಕನ ಸ್ಕೂಟರ್‌ ಪೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ರಶ್ಮಿ ಬಳಿಕ ಫೇಸ್​ಬುಕ್​​ನಲ್ಲಿ ತನಗಾದ ತೊಂದರೆಯನ್ನ ಬರೆದು ಸ್ಕೂಟರ್​ ಫೋಟೋವನ್ನು ಅಪ್​ಲೋಡ್ ಮಾಡಿ ಬೀದಿ ಕಾಮಣ್ಣನ ಮಾನ ಹರಾಜು ಹಾಕಿದ್ದಾಳೆ.

ಸದ್ಯ, ಈಕೆಯ ಪೋಸ್ಟ್ ಇದೀಗ ವೈರಲ್ ಆಗಿದ್ದು, ಆಕೆಯ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮಂಗಳೂರು ನಗರ ಮಹಿಳಾ ಠಾಣಾ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾಮುಕನ ಬಗ್ಗೆ ಮಾಹಿತಿ ಕಲೆ ಹಾಕ್ತಿದಾರೆ.

Leave a Reply

Your email address will not be published. Required fields are marked *

Back To Top