Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಪಾಕ್​ ನರಿಬುದ್ಧಿಗೆ ಭಾರತದ ಶಾಕ್​: ಪಾಕಿಗಳ ಬಂಕರ್​ ಉಡೀಸ್​

Sunday, 09.07.2017, 1:33 PM       No Comments

ನವದೆಹಲಿ: ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೇನೆಗೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡಿದ್ದಾರೆ.

ಕಾಶ್ಮೀರದ ಪೂಂಚ್ ಸೆಕ್ಟರ್​ನಲ್ಲಿ ದಾಳಿ ಮಾಡುತ್ತಿದ್ದ ಪಾಕಿಸ್ತಾನದ ಎರಡು ಸೇನಾ ಬಂಕರ್​​ಗಳನ್ನ ಭಾರತೀಯ ಸೇನೆ ಧ್ವಂಸ ಮಾಡಿದೆ. ನಿನ್ನೆ ತಡರಾತ್ರಿ ರಾಕೆಟ್​ ಲಾಂಚರ್​​​ಗಳನ್ನ ಬಳಸಿ ಪಾಕ್​ ಬಂಕರ್​​ಗಳನ್ನ ನಾಶ ಮಾಡಲಾಗಿದೆ.

ಬಿಎಸ್​ಎಫ್​ ಪಡೆಯ ದಾಳಿಗೆ ಪಾಕಿಸ್ತಾನದ ಇಬ್ಬರು ಸೈನಿಕರು ಮತ್ತು ಐದು ಮಂದಿ ಪಾಕ್​ ನಾಗರಿಕರು ಬಲಿಯಾಗಿದ್ದಾರೆ. ಅಲ್ಲದೆ ಏಳು ಮಂದಿ ಸೈನಿಕರು ಹಾಗೂ 16 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

ನಿನ್ನೆಯಷ್ಟೆ ಪೂಂಚ್​ ಸೆಕ್ಟರ್​​ನಲ್ಲಿ ಪಾಕ್​ ನಡೆಸಿದ ಮೋಟಾರ್​ ಶೆಲ್ ದಾಳಿಗೆ ಯೋಧ ಶೌಕಾತ್​ ಮತ್ತು ಅವರ ಪತ್ನಿ ಮೃತಪಟ್ಟಿದ್ರು. ಇದಕ್ಕೆ ಪ್ರತೀಕಾರವಾಗಿ ಪಾಕ್​ ಸೈನಿಕರ ಬಂಕರ್​ಗಳನ್ನ ಭಾರತೀಯ ಸೇನೆ ಧ್ವಂಸಗೊಳಿಸಿದೆ. ಇನ್ನೊಂದೆಡೆ ಪುಲ್ವಾಮಾದಲ್ಲಿ ಉಗ್ರರು ಪೊಲೀಸ್​ ಪೋಸ್ಟ್​ ಮೇಲೆ ದಾಳಿ ನಡೆಸಿದ್ದ ಒಬ್ಬ ಪೊಲೀಸ್​ ಅಧಿಕಾರಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top