Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ಚುನಾವಣೆ ಬಳಿಕ ಪ್ರತ್ಯೇಕ ಧರ್ಮದ ಕೂಗು ಕೇಳುವುದಿಲ್ಲ: ಸಚಿವ ಮಲ್ಲಿಕಾರ್ಜುನ್

Friday, 05.01.2018, 10:23 AM       No Comments

ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಚುನಾವಣೆ ಮುಗಿಯೋವರೆಗೆ ಮಾತ್ರ. ಆಮೇಲೆ ಈ ಬಗ್ಗೆ ಯಾರೂ ಮಾತನಾಡಲ್ಲ ಎಂದು ತೋಟಗಾರಿಕಾ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು ಚುನಾವಣಾ ಗಿಮಿಕ್​ ಅಷ್ಟೆ. ಚುನಾವಣಾ ಬಳಿಕ ಪ್ರತ್ಯೇಕ ಧರ್ಮದ ಕೂಗು ಕೇಳುವುದಿಲ್ಲ. ಕೆಲವರು ಮನೆ ಕಟ್ಟುವವರು ಇದ್ದಾರೆ. ಇನ್ನೂ ಕೆಲವರು ಮನೆ ಒಡೆಯವವರು ಇರುತ್ತಾರೆ ಎಂದರು.

ಯಾರೂ ಧರ್ಮವನ್ನ ಒಡೆಯುವ ಕೆಲಸ ಮಾಡಬಾರದು ಅಂತಾ ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ಎಸ್​.ಎಸ್.ಮಲ್ಲಿಕಾರ್ಜುನ್​ ಪರೋಕ್ಷವಾಗಿ ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top