Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಸೌದಿಯಲ್ಲಿ 11 ಯುವರಾಜರು ಹಾಗೂ ಸಚಿವರ ಬಂಧನ

Sunday, 05.11.2017, 1:29 PM       No Comments

>> ಭ್ರಷ್ಟಾಚಾರ ನಿಯಂತ್ರಣ ಸಮಿತಿ ರಚನೆ ಬೆನ್ನಗೆ ಮಹತ್ತರ ಬೆಳವಣಿಗೆ

ರಿಯಾದ್ : ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ಶನಿವಾರ ನೂತನ ಭ್ರಷ್ಟಾಚಾರ ನಿಯಂತ್ರಣ ಸಮಿತಿ ರಚನೆಯಾದ ಬೆನ್ನಲ್ಲೇ 11 ಯುವರಾಜರು ಮತ್ತು ಡಜನ್ ಗಟ್ಟಲೆ ಹಾಲಿ ಮತ್ತು ಮಾಜಿ ಸಚಿವರನ್ನು ಸೌದಿ ಅರೇಬಿಯಾ ಸರ್ಕಾರ ಬಂಧಿಸಿದೆ.

ಜತೆಗೆ ಸೌದಿ ರಾಷ್ಟ್ರೀಯ ಭದ್ರತಾ ಪಡೆ, ನೌಕಾ ದಳ ಮುಖ್ಯಸ್ಥ ಸೇರಿದಂತೆ ಆರ್ಥಿಕ ಸಚಿವರನ್ನು ವರ್ಗಾವಣೆ ಮಾಡಲಾಗಿದೆ.
2009ರಲ್ಲಿ ಜೆಡ್ಡಾ ನಗರದಲ್ಲಿ ಸಂಭವಿಸಿದ ಪ್ರವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜರು ಮತ್ತು ಸಚಿವರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಗಣ್ಯರು ದೇಶ ಬಿಟ್ಟು ಹಾರದಂತೆ ಭದ್ರತಾ ಪಡೆಗಳು ಖಾಸಗಿ ಜೆಟ್ ವಿಮಾನಗಳನ್ನು ವಶಕ್ಕೆ ಪಡೆದಿದ್ದಾರೆ. ಸೌದಿಯ ಮೌಲ್ವಿಗಳ ಒಕ್ಕೂಟ ಈ ಕುರಿತು ಟ್ವೀಟ್ ಮಾಡಿದ್ದು, ಭ್ರಷ್ಟಾಚಾರ ನಿಯಂತ್ರಣ ಭಯೋತ್ಪಾದನೆ ವಿರುದ್ಧದ ಹೋರಾಟದಷ್ಟೇ ಪ್ರಮುಖ ಎಂದಿದೆ.

ಕೋಟ್ಯಧಿಪತಿ ಯುವರಾಜ ಎಂದೇ ಖ್ಯಾತಿ ಜೊತೆಗೆ ತಂದೆಯ ಪಟ್ಟದ ಮೇಲೆ ಕಣ್ಣಿಟ್ಟಿರುವ ಅಲ್ -ವಲೀದ್ ಬಿನ್ ತಲಾಲ್ ಬಂಧನವನ್ನು ಸರ್ಕಾರಿ ಮೂಲಗಳು ದೃಢಪಡಿಸಿಲ್ಲ. ಒಂದು ವೇಳೆ ಬಂಧನವಾಗಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top