Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಯೋಗ ಕಲಿಕೆಗೆ ಅನುಮತಿ ನೀಡಿದ ಸೌದಿ ಅರೇಬಿಯಾ ಸರ್ಕಾರ

Tuesday, 14.11.2017, 4:57 PM       No Comments

ನವದೆಹಲಿ: ಮಹತ್ವದ ಬೆಳವಣಿಯೊಂದರಲ್ಲಿ ಸೌದಿ ಅರೇಬಿಯಾ ಸರ್ಕಾರವು ಯೋಗ ಕಲಿಕೆ ಮತ್ತು ಬೋಧನೆಗೆ ಸಮ್ಮತಿ ನೀಡಿದೆ. ಈ ಮೂಲಕ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸೌದಿ ಅರೇಬಿಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಯೋಗವನ್ನು ಕ್ರೀಡಾ ಚಟುವಟಿಕೆಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರಿಂದಾಗಿ ಸೌದಿ ಅರೇಬಿಯಾದಲ್ಲಿ ಯಾರು ಬೇಕಾದರೂ ಲೈಸನ್ಸ್​ ಪಡೆದು ಯೋಗವನ್ನು ಕಲಿಯಬಹುದು ಮತ್ತು ಕಲಿಸಬಹುದಾಗಿದೆ.

ಸೌದಿ ಅರೇಬಿಯಾ ಯೋಗಕ್ಕೆ ಮಾನ್ಯತೆ ನೀಡುವಲ್ಲಿ ಸೌದಿಯ ಮಹಿಳೆ ನೌಫಾ ಮಾರ್ವಾಯಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಯೋಗ ಶಿಕ್ಷಕಿಯಾಗಿರುವ ಮಾರ್ವಾಯಿ ಅವರು ಯೋಗ ಹಾಗೂ ಧರ್ಮದ ನಡುವೆ ಯಾವುದೇ ಸಂಘರ್ಷಗಳಿಲ್ಲ ಎಂದು ನಂಬಿದ್ದಾರೆ. ನೌಫಾ ಸೌದಿ ಅರೇಬಿಯಾದಿಂದ ಪ್ರಮಾಣೀಕರಿಸಲಾದ ಮೊದಲ ಯೋಗ ಶಿಕ್ಷಕಿ ಎಂಬ ಹೆಮ್ಮೆಗೂ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಜಾರ್ಖಂಡ್​ನಲ್ಲಿ ಮುಸ್ಲಿಂ ಯೋಗ ಶಿಕ್ಷಕಿ ವಿರುದ್ಧ ಯೋಗಾಭ್ಯಾಸ ಮಾಡದಂತೆ ಫತ್ವಾ ಹೊರಡಿಸಲಾಗಿತ್ತು. ಜತೆಗೆ ಕೆಲವರು ಆಕೆಯ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸೌದಿ ಸರ್ಕಾರ ಯೋಗಾಭ್ಯಾಸಕ್ಕೆ ಮನ್ನಣೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top