Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಸರ್ಕಾರಿ ಅಧಿಕಾರಿಗಳಿಗೂ ತಟ್ಟಿದ ಬಿಸಿ

Saturday, 13.01.2018, 1:14 AM       No Comments

ಹುಬ್ಬಳ್ಳಿ: ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಶುಕ್ರವಾರ ಅಂತಹ ವಾಹನಗಳಲ್ಲಿ ಬಂದ ಹಲವು ಸರ್ಕಾರಿ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದರು.

ಎರಡು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 65ಕ್ಕೂ ಹೆಚ್ಚು ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ 10-12 ವಾಹನಗಳನ್ನು ಜಪ್ತ ಮಾಡಲಾಗಿದೆ.

ಸರ್ಕಾರಿ ಕಚೇರಿಗಳಿಗೆ, ಅಧಿಕಾರಿಗಳ ಓಡಾಟಕ್ಕೆ ಬಾಡಿಗೆಗೆ ಕೊಟ್ಟ ಖಾಸಗಿ ವಾಹನ ಮಾಲೀಕರು ತಮ್ಮ ವಾಹನಗಳ ಮೇಲೆ ‘ಸರ್ಕಾರಿ ಸೇವೆಯಲ್ಲಿ’ ಎಂದು ಬರೆದುಕೊಂಡಿರುತ್ತಾರೆ. ಆದರೆ, ಹಾಗೆ ಬರೆಯಲು ಅವಕಾಶವಿಲ್ಲ. ಮೋಟಾರು ವಾಹನ ಕಾಯ್ದೆ ಪ್ರಕಾರ ವಾಹನಗಳ ನಂಬರ್ ಪ್ಲೇಟ್ ಶುದ್ಧವಾಗಿರಬೇಕು. ವಾಹನದ ನೋಂದಣಿ ಸಂಖ್ಯೆ ಹೊರತು ಪಡಿಸಿ ಯಾವುದೇ ಬರಹ ಅದರಲ್ಲಿ ಇರಬಾರದು ಎಂದು ಆರ್​ಟಿಓ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.

ಆರ್​ಟಿಓ ಅಧಿಕಾರಿಗಳಿಗೆ ಗುರುವಾರ ಹಾಗೂ ಶುಕ್ರವಾರ ಬಹಳಷ್ಟು ಇಂತಹ ಗಾಡಿಗಳು ಎದುರಾಗಿದ್ದು, ಅವುಗಳ ದಾಖಲೆ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿ ಸಾವಿರಾರು ರೂಪಾಯಿ ದಂಡ ವಿಧಿಸಿದ್ದಾರೆ.

ಬಿಎಸ್​ಎನ್​ಎಲ್, ಮಹಾನಗರ ಪಾಲಿಕೆ, ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಯಿತು.

ವಾಗ್ವಾದ: ಎರಡು ತಂಡಗಳಲ್ಲಿ ನಗರದ ವಿವಿಧ ಕಡೆಗಳಲ್ಲಿ ಆರ್​ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮೂಲಕ ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ ಖಾಸಗಿ ವಾಹನ ಮಾಲೀಕರಿಗೂ ಬಿಸಿ ಮುಟ್ಟಿಸಿದರು.

ಅಧಿಕಾರಿಗಳು ವಾಹನ ತಡೆದು ತಪಾಸಣೆ ನಡೆಸುವ ಸಂದರ್ಭದಲ್ಲಿ ಕೆಲವರು ವಾಗ್ವಾದಕ್ಕೆ ಇಳಿದ ಪ್ರಸಂಗಗಳೂ ನಡೆದವು. ‘ಕರ್ನಾಟಕ ಸರ್ಕಾರ- ಸಾರಿಗೆ ಇಲಾಖೆ’ ಎಂದು ಬರೆದುಕೊಂಡಿದ್ದ ಜೀಪ್​ನಲ್ಲಿ ಕುಳಿತಿದ್ದ ಅಧಿಕಾರಿಗಳು ವಾಹನ ಮಾಲೀಕರ ದಾಖಲಾತಿ ಪರಿಶೀಲನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಯಾವುದೋ ಪಕ್ಷದ ಹೆಸರು ಬರೆದುಕೊಂಡಿದ್ದ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬರನ್ನು ತಡೆದ ಅಧಿಕಾರಿಗಳು ತಪಾಸಣೆಗೆ ಇಳಿದರು. ಆಗ ಆ ವ್ಯಕ್ತಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು.

ಯಾವುದೇ ಮುನ್ಸೂಚನೆ ಇಲ್ಲದೇ ಕಾರ್ಯಾಚರಣೆಗೆ ಇಳಿದರೆ ಹೇಗೆ? ನಿಮ್ಮ ವಾಹನದ ಮೇಲೂ ಸಾರಿಗೆ ಇಲಾಖೆ ಎಂದು ಬರೆದುಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಆಗ ಅಧಿಕಾರಿಗಳು ಹೆಚ್ಚು ವಾದ ಮಾಡದೇ ಅವರನ್ನು ಬಿಟ್ಟು ಕೊಟ್ಟ ಪ್ರಸಂಗ ನಡೆಯಿತು.

Leave a Reply

Your email address will not be published. Required fields are marked *

Back To Top