Friday, 21st September 2018  

Vijayavani

Breaking News

ನವರಸನಾಯಕನಿಗೆ ಲವ್ ಅಟ್ ಫಸ್ಟ್ ಸೈಟ್​​ ಆಗಿದ್ದು ಇವರ ಮೇಲಂತೆ..!

Friday, 15.12.2017, 7:25 PM       No Comments

<< ಆಕೆಯ ಆರಾಧನೆಯಲ್ಲಿ ಮುಳುಗಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ಅಪ್ಪನಿಂದ ಬೂಟಿನೇಟು ತಿಂದಿದ್ದರಂತೆ >>

ಬೆಂಗಳೂರು: ನವರಸ ನಾಯಕ ಜಗ್ಗೇಶ್​​ ಪ್ರೀತಿಸಿದ ಹುಡುಗಿಯನ್ನೇ ಮದುವೆ ಆಗಿ, ಎಷ್ಟೇ ಕಷ್ಟಗಳು ಬಂದ್ರು ಕುಗ್ಗದೇ ಎದುರಿಸಿ ನಿಂತವರು. ತಮ್ಮ ಪರಿಶ್ರಮ ಹಾಗೂ ಪತ್ನಿಯ ಸಹಕಾರದಿಂದಲೇ ಕನ್ನಡಿಗರ ಹೃದಯದಲ್ಲಿ ನವರಸ ನಾಯಕನಾಗಿ ನೆಲೆನಿಂತವರು. ಇವರ ಲವ್ ಸ್ಟೋರಿಯ ಮಧ್ಯೆ, ಅವರ ಹಳೆಯ ಪ್ರೇಮ ಕಹಾನಿಯೊಂದನ್ನು ನೆನಪಿಸಿದ್ದಾರೆ.

ಹೌದು , ನವರಸನಾಯಕನಿಗೆ ಮೊದಲ ಬಾರಿ ಲವ್ ಆಗಿದ್ದು, ಪತ್ನಿ ಪರಿಮಳ ಅವರ ಮೇಲೆ ಅಲ್ವಂತೆ. ಹಾಗಾದ್ರೆ ಮತ್ತಿನ್ಯಾರು ಅಂತೀರಾ.. ಅವರೇ ಕನ್ನಡ ಚಿತ್ರರಂಗದ ಚಂದನದ ಗೊಂಬೆ ಜ್ಯೂಲಿ ಲಕ್ಷ್ಮಿ.

‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಲಕ್ಷ್ಮಿ ಅವರನ್ನ ನೋಡಿ ಜಗ್ಗೇಶ್ ಕಳೆದು ಹೋಗಿದ್ರಂತೆ. ಲಕ್ಷ್ಮಿ ಅವರ ಆರಾಧನೆಯಲ್ಲಿ ಮುಳುಗಿ ಆ ವರ್ಷ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದರಂತೆ. ಅದು ಗೊತ್ತಾಗಿ ಅಪ್ಪ ಶಿವಲಿಂಗಯ್ಯನವರಿಂದ ಜಗ್ಗೇಶ್​ ಬೂಟಿನೇಟು ತಿಂದಿದ್ದೆ ಎಂದು ಸ್ವತಃ ಜಗ್ಗೇಶ್ ಅವರೇ, ತಮ್ಮ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಹಿಂಗೆ ಲಕ್ಷ್ಮಿ ಅವರ ಸೌಂದರ್ಯಕ್ಕೆ ಮರುಳಾಗಿ, ಅಪ್ಪನಿಂದ ಒದೆ ತಿಂದ ಜಗ್ಗೇಶ್, ನಂತರ ಅವರೊಂದಿಗೆ ನಟಿಸಿದ್ದು, ನನಗೆ ಖುಷಿ ಕೊಟ್ಟ ವಿಚಾರ ಎಂದು ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top